ಭಕ್ತಿ ಇದ್ದಲ್ಲಿ ಭಗವಂತ, ಭಗವಂತನಿದ್ದಲ್ಲಿ ನೆಮ್ಮದಿ: ಗಂಗಾಧರ ಶಿವಾಚಾರ್ಯರು

| Published : Feb 11 2024, 01:47 AM IST

ಭಕ್ತಿ ಇದ್ದಲ್ಲಿ ಭಗವಂತ, ಭಗವಂತನಿದ್ದಲ್ಲಿ ನೆಮ್ಮದಿ: ಗಂಗಾಧರ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಕಲಾದಗಿ: ಉದಗಟ್ಟಿ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಮಹಾಪುರಾಣ ಮಂಗಲ ಧರ್ಮ ಸಮಾರಂಭ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಹಾತಪಸ್ವಿ ಶ್ರೀ ಗುರುಲಿಂಗೇಶ್ವರ ಮಹಾಶಿವಯೋಗಿಗಳ ಮಹಾಪುರಾಣ ಪ್ರವಚನ ಪ್ರಾರಂಭೊತ್ಸವ ಕಾರ್ಯಕ್ರಮ ನಡೆಯಿತು.ಕಲಾದಗಿಯ ಶ್ರೀ ಗುರುಲಿಂಗೇಶ್ವರ ಸಂಸ್ಥಾನ ಪಂಚಗ್ರಹ ಹಿರೇಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲಿ ಭಕ್ತಿ ಇರುತ್ತದೆ ಅಲ್ಲಿ ಭಗವಂತ,ಎಲ್ಲಿ ಭಗವಂತ ಇರುತ್ತಾನೋ ಅಲ್ಲಿ ಭಕ್ತಿ,ನೆಮ್ಮದಿ, ಸುಖ ಸಂಪತ್ತು ಐಶ್ವರ್ಯ ಇದ್ದು, ಭಕ್ತಿ ಇರುವೆಡೆ ಗುರು, ಭಗವಂತನ ಆಗಮವಾಗಿ ಕಷ್ಟ, ನಷ್ಟ, ದೂರವಾಗುತ್ತವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಎಲ್ಲಿ ಭಕ್ತಿ ಇರುತ್ತದೆ ಅಲ್ಲಿ ಭಗವಂತ,ಎಲ್ಲಿ ಭಗವಂತ ಇರುತ್ತಾನೋ ಅಲ್ಲಿ ಭಕ್ತಿ,ನೆಮ್ಮದಿ, ಸುಖ ಸಂಪತ್ತು ಐಶ್ವರ್ಯ ಇದ್ದು, ಭಕ್ತಿ ಇರುವೆಡೆ ಗುರು, ಭಗವಂತನ ಆಗಮವಾಗಿ ಕಷ್ಟ, ನಷ್ಟ, ದೂರವಾಗುತ್ತವೆ ಎಂದು ಕಲಾದಗಿಯ ಶ್ರೀ ಗುರುಲಿಂಗೇಶ್ವರ ಸಂಸ್ಥಾನ ಪಂಚಗ್ರಹ ಹಿರೇಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಉದಗಟ್ಟಿ ಗ್ರಾಮದಲ್ಲಿ, ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಮಹಾಪುರಾಣ ಮಂಗಲ ಧರ್ಮ ಸಮಾರಂಭ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಹಾತಪಸ್ವಿ ಶ್ರೀ ಗುರುಲಿಂಗೇಶ್ವರ ಮಹಾಶಿವಯೋಗಿಗಳ ಮಹಾಪುರಾಣ ಪ್ರವಚನ ಪ್ರಾರಂಭೊತ್ಸವದಲ್ಲಿ ಆಶೀರ್ವಚನ ನೀಡಿದರು.

ಯಾವುದು ಅಸಾಧ್ಯವೋ ಅದನ್ನು ಸಾಧ್ಯ ಮಾಡಿ ತೋರಿಸುವ ಶಕ್ತಿ ಈ ನಾಡಿನ ಮಹಾತಪಸ್ವಿ ಮಹಾಶಿವಯೋಗಿಗಳಿಗೆ ಮಾತ್ರ ಇದೆ. ಶಿವಯೋಗಿಗಳು ಪೂಜೆ, ಧರ್ಮ, ಕಾರ್ಯ ಮಾಡುವುದು ಭಕ್ತರ ಕಷ್ಟಗಳನ್ನು ದೂರ ಮಾಡಲು. ಪುರಾಣ ಪ್ರವಚನಗಳನ್ನು ಶ್ರದ್ಧೆಯಿಂದ ಆಲಿಸಿ ಅಧ್ಯಾತ್ಮದ ಕಡೆಗೆ ಮನಸ್ಸು ತೋರಿದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಬಹುದು ಎಂದರು.

ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮ ಬೇವೂರಿನ ಎಂ.ಜಿ.ಗುರುಸಿದ್ದೇಶ್ವರ ಶಾಸ್ತ್ರಿಗಳು ಪ್ರವಚನ ನೀಡಿದರು, ಜಿ.ಬಸನಕೊಪ್ಪದ ಹಿರೇಮಠದ ಶ್ರೀ ಗದಿಗಯ್ಯ ಗವಾಯಿಗಳು ಸಂಗೀತ ಸೇವೆ ನೀಡಿದರು. ಕೊಡಗಾನೂರ ಮಲ್ಲಿಕಾರ್ಜುನ.ಬಿ. ಹೂಗಾರ ತಬಲಾ ಸೇವೆ, ಭೀಮಪ್ಪ ಗಣಿ ಮೊದಲ ದಿನದ ಪ್ರಸಾದ ಸೇವೆ ಒದಗಿಸಿದ್ದು, ಚಂದ್ರಶೇಖರ ಶೆಲೆಯಪ್ಪನವರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.