ಏಕತೆ ಇದ್ದಲ್ಲಿ ಯಾವ ಜಾತಿ, ಧರ್ಮ ಇರುವುದಿಲ್ಲ: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

| Published : Feb 08 2024, 01:36 AM IST

ಏಕತೆ ಇದ್ದಲ್ಲಿ ಯಾವ ಜಾತಿ, ಧರ್ಮ ಇರುವುದಿಲ್ಲ: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಸಂಸ್ಥೆಯೊಂದು ತ್ರಿವಿಕ್ರಮಾನಂದ ಸರಸ್ವತಿ ಮಠದಿಂದ ತಮಗೆ ಮೊದಲ ಬಾರಿಗೆ ನಾಥ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸ ಉಂಟು ಮಾಡಿದೆ: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

ಕನ್ನಡಪ್ರಭ ವಾರ್ತೆ ಜೇವರ್ಗಿ

ಅದ್ವೈತದ ಮೊದಲನೇ ಲಕ್ಷಣವೇ ಬೇಧ ಭಾವ ತೊಡೆದು ಹಾಕುವುದು. ಏಕತೆ ಇದ್ದಲ್ಲಿ ಯಾವ ಜಾತಿ ಧರ್ಮಗಳಿರುವುದಿಲ್ಲ. ಎಲ್ಲಿ ನಾವು ಒಂದು ಎಂದು ಭಾವಿಸುತ್ತೇವೆಯೋ ಅಲ್ಲಿ ಶಾಂತಿ ನೆಲೆಸುತ್ತದೆ ಎಂದು ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಬುಧವಾರ ತಾಲೂಕಿನ ಗಂವ್ಹಾರ ಗ್ರಾಮದ ಸದ್ಗುರು ತ್ರಿವಿಕ್ರಮಾನಂದ ಸರಸ್ವತಿ ಸ್ವಾಮೀಜಿ ಅವರ 101ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಶ್ರೀಮಠದಿಂದ ಕೊಡಮಾಡುವ ನಾಥ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಭಾರತೀಯ ಸಂಸ್ಥೆಯೊಂದು ತ್ರಿವಿಕ್ರಮಾನಂದ ಸರಸ್ವತಿ ಮಠದಿಂದ ತಮಗೆ ಮೊದಲ ಬಾರಿಗೆ ನಾಥ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸ ಉಂಟು ಮಾಡಿದೆ. ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಕೌನ್ಸಿಲ್ ವತಿಯಿಂದ ತಮಗೆ ಶಾಂತಿಯ ರಾಯಭಾರಿ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಪ್ರಶಸ್ತಿಗೆ ಬೆನ್ನ ಹತ್ತಬಾರದು. ಪ್ರಶಸ್ತಿ ತಮ್ಮನ್ನು ಹುಡುಕಿಕೊಂಡು ಬರಬೇಕು. ಭಾರತೀಯ ಸಂಸ್ಕೃತಿ ತನ್ನದೆಯಾದ ಐತಿಹಾಸಿಕ ಇತಿಹಾಸ ಹೊಂದಿದ್ದು, ಭಾರತೀಯರು ನಾವೆಲ್ಲರು ಒಂದು ಎಂದು ಏಕತೆ ಇದ್ದಲ್ಲಿ ಯಾವೂದೆ ಜಾತಿ ಧರ್ಮಗಳಿರುವುದಿಲ್ಲವೆಂದು ಹೇಳಿದರು.

ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ರಾಮ ಕಥಾನಕ ಪ್ರವಚನ ನೀಡಿದರು. ಸದ್ಗುರು ಶ್ರೀತ್ರಿವಿಕ್ರಮಾನಂದ ಸರಸ್ವತಿ ಸ್ವಾಮೀಜಿ ಮಠದ ಪೀಠಾಧಿಪತಿ ಸದ್ಗುರು ಶ್ರೀಸೋಪಾನನಾಥ ಸ್ವಾಮೀಜಿ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಶಂಕ್ರಪ್ಪ ಶಿವಲಿಂಗಪ್ಪ ಶಾಂತಪುರ ಹುಲಿಕಲ್ ಹಾಗೂ ಮಾನಪ್ಪಗೌಡ ತಿಪ್ಪಣ್ಣಗೌಡ ಮಾಲಿಪಾಟೀಲ ಸಾದ್ಯಾಪುರ ಅವರಿಗೆ ತ್ರಿವಿಕ್ರಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗಂವ್ಹಾರದ ಪಾಂಡುರಂಗ ಮಹಾರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಸ್ವಾಮೀಜಿ, ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪಾ, ಮಾತೋಶ್ರೀ ಶರಣಮ್ಮತಾಯಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಂ. ರೆಡ್ಡಿ, ಶ್ರೀಪಾದ ಜೋಶಿ, ಶ್ರೀಮಠದ ಕಾರ್ಯದರ್ಶಿ ಚಂದಪ್ಪಗೌಡ ತಾಯಮ್ಮಗೋಳ, ಪದ್ಮನಾಭ ಜೋಶಿ, ಅಮೀನರೆಡ್ಡಿ ಯಾಳಗಿ, ಗುರುನಾಥರೆಡ್ಡಿ ಪಾಟೀಲ ಹಳಿಸಗರ, ಬಸವರಾಜ ಪಾಟೀಲ ಗಂವ್ಹಾರ, ಹಳ್ಳೆಪ್ಪಾಚಾರ್ಯ ಜೋಶಿ, ಬಾಪುರಾವ್ ಪಾಗಾ, ಕಲ್ಯಾಣಕುಮಾರ ಸಂಗಾವಿ, ಲತಾ ಜಹಾಗೀರದಾರ, ಶ್ರೀನಿವಾಸ ವಕೀಲ, ಶಂಕ್ರಣ್ಣ ಆಲಗೂರ, ಸಂಜೀವಕುಮಾರ ಜೋಶಿ, ಲಕ್ಷ್ಮೀಕಾಂತ ಕುಲಕರ್ಣಿ ಹೋತಿನಮಡು, ಕುಮಾರಿ ವೇದಾ ಹಾಗೂ ಭಾವನಾ ಪ್ರಾರ್ಥಿಸಿದರು. ಆತ್ಮಾರಾಮ ಮತ್ತು ಅಭಿರಾಮ ವೇದ ಘೋಷಗಳನ್ನು ಮೊಳಗಿಸಿದರು.