ಮಂಡ್ಯ ಎಂಎಲ್‌ಎ ನೋಡಿದರೆ ಪಾಪಾ ಹೊಟ್ಟೆ ಉರಿಯುತ್ತೆ. ನೂರು ಎಕರೆ ಭೂಮಿ ಕೊಟ್ಟಿದ್ದೇವೆ ಅಂತ ಮಾತ್ರ ಹೇಳುತ್ತಿದ್ದಾರೆ. ಕೆಐಎಡಿಬಿಗೆ ಹಸ್ತಾಂತರಿಸಿದ್ದಾರೆ ಎಂದರೆ ಇಲ್ಲ ಎಂಬ ಉತ್ತರ ಬರುತ್ತಿದೆ. ಭೂಮಿ ಕೊಟ್ಟು ಆನಂತರ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಲಿ, ಭೂಮಿಯನ್ನೇ ಕೊಡದೆ ಕೊಟ್ಟಿದ್ದೇವೆ ಎಂದು ಹೇಳುತ್ತಾ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ ಭೂಮಿ ಕೊಡುವ ವಿಚಾರದಲ್ಲಿ ಮಂಡ್ಯ ಜನರನ್ನು ಕಾಂಗ್ರೆಸ್‌ನವರು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ನೂರು ಎಕರೆ ಭೂಮಿ ಕೊಡುತ್ತೇವೆ ಅಂತ ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರಷ್ಟೇ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಟೀಕಿಸಿದರು.

ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಕೇವಲ ಪ್ರಸ್ತಾವನೆ ಸಲ್ಲಿಸಿದ್ದಾರಷ್ಟೇ. ಕ್ಯಾಬಿನೆಟ್ ಮುಂದಿಟ್ಟು ಅನುಮೋದನೆ ಪಡೆದು ಕೆಐಎಡಿಬಿಗೆ ಹಸ್ತಾಂತರಿಸಿದ ನಂತರವಷ್ಟೇ ಅಂತಿಮವಾಗುವುದು. ವಾಸ್ತವದಲ್ಲಿ ಎಆರ್‌ಎಐಗೆ ಭೂಮಿ ಕೊಡಬಾರದು ಎನ್ನುವುದೇ ಇವರ ಮೂಲ ಉದ್ದೇಶ. ಅಪ್ಪಿತಪ್ಪಿ ಭೂಮಿ ಕೊಟ್ಟರೆ ರಾಜಕೀಯವಾಗಿ ಕಾಂಗ್ರೆಸ್ಸಿಗರು ಸತ್ತೋಗ್ತಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಂಡ್ಯ ಎಂಎಲ್‌ಎ ನೋಡಿದರೆ ಪಾಪಾ ಹೊಟ್ಟೆ ಉರಿಯುತ್ತೆ. ನೂರು ಎಕರೆ ಭೂಮಿ ಕೊಟ್ಟಿದ್ದೇವೆ ಅಂತ ಮಾತ್ರ ಹೇಳುತ್ತಿದ್ದಾರೆ. ಕೆಐಎಡಿಬಿಗೆ ಹಸ್ತಾಂತರಿಸಿದ್ದಾರೆ ಎಂದರೆ ಇಲ್ಲ ಎಂಬ ಉತ್ತರ ಬರುತ್ತಿದೆ. ಭೂಮಿ ಕೊಟ್ಟು ಆನಂತರ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಲಿ, ಭೂಮಿಯನ್ನೇ ಕೊಡದೆ ಕೊಟ್ಟಿದ್ದೇವೆ ಎಂದು ಹೇಳುತ್ತಾ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಅಪ್ಪಿ ತಪ್ಪಿ ಕುಮಾರಸ್ವಾಮಿ ಅವರಿಗೇನಾದರೂ ಎಆರ್‌ಎಐ ಕೇಂದ್ರ ಸ್ಥಾಪನೆಗೆ ಜಾಗ ಕೊಟ್ಟರೆ ಕಾಂಗ್ರೆಸ್ಸಿಗರು ರಾಜಕೀಯವಾಗಿ ಸತ್ತು ಹೋಗುತ್ತಾರೆ. ೨೦೧೮ರಲ್ಲಿ ಕೇವಲ ಸೋತಿದ್ದರು. ಇವಾಗ ರಾಜಕೀಯವಾಗಿ ಸತ್ತೇ ಹೋಗುತ್ತಾರೆ ಎಂದು ನಿಶ್ಚಿತವಾಗಿ ಹೇಳಿದರು.