ಸಾರಾಂಶ
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಮಾತಿಗೆ ಸೀಮಿತವಾಗದೆ ವಿದ್ಯಾರ್ಥಿಗಳು, ಶಿಕ್ಷಕರು, ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಕೆಲಸ ಗೋಪಾಲ್ ಹೊರೆಯಾಲ ಗೆಳೆಯರ ಬಳಗ ಮಾಡುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಪಟ್ಟಣದ ಗುರುಭವನದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಪ್ತ ಸಹಾಯಕ ಸ್ನೇಹಜೀವಿ ಗೋಪಾಲ್ ಹೊರೆಯಾಲ ಗೆಳೆಯರ ಬಳಗ ಆಯೋಜಿಸಿದ್ದ ೨೦೨೪-೨೫ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪಡೆದ ಅತ್ಯುತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣ ಪಡೆದರೆ ಮಾತ್ರ ಏನು ಬೇಕಾದರೂ ಸಾಧಿಸಬಹುದು. ಸ್ಥಳೀಯವಾಗಿಯೇ ಕೆಲಸ ಬೇಕು ಎನ್ನುವ ಬದಲು ಕೆಲಸ ಸಿಕ್ಕ ಕಡೆ ಹೋಗಬೇಕು. ಮಹದೇವಪ್ರಸಾದ್ ಕಾಲದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಜಿಟಿಟಿಸಿ ಗುಂಡ್ಲುಪೇಟೆಯಲ್ಲಿದೆ ಇದು ಹೆಮ್ಮೆಯ ವಿಚಾರ ಎಂದರು. ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜುರ ಪುತ್ರ ಬಾನುಕಿರಣ್, ಪುರಸಭೆ ಅಧ್ಯಕ್ಷ ಮಧು,ಪುರಸಭೆ ಸದಸ್ಯ ಎನ್.ಕುಮಾರ್ ನಾಯಕ,ಪುರಸಭೆ ಮಾಜಿ ಉಪಾಧ್ಯಕ್ಷ ರಂಗಸ್ವಾಮಿ,ಗ್ರಾಪಂ ಮಾಜಿ ಅಧ್ಯಕ್ಷ,ಬ್ಲಾಕ್ ಕಾಂಗ್ರೆಸ್ ಸಮಿತಿ ವಕ್ತಾರ ಬಿ.ಜಿ.ಶಿವಕುಮಾರ್,ಶಿಕ್ಷಣ ಸಮಿತಿ ಸದಸ್ಯ ಅಸ್ರರ್,ಜಿಪಂ ಮಾಜಿ ಸದಸ್ಯರಾದ ಕೆ.ಶಿವಸ್ವಾಮಿ, ಬಿ.ಕೆ.ಬೊಮ್ಮಯ್ಯ,ಹಂಗಳ ನಾಗರಾಜು,ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ,ಮೈಸೂರು ಮಹಿಳಾ ವಿಜ್ಞಾನ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಗೋವಿಂದರಾಜು ಸೇರಿದಂತೆ ನೂರಾರು ಮಂದಿ ವಿದ್ಯಾರ್ಥಿಗಳು,ಪೋಷಕರು,ಗೋಪಾಲ್ ಹೊರೆಯಾಲ ಗೆಳೆಯರ ಬಳಗದ ಸದಸ್ಯರು ಇದ್ದರು.ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮುಂದುವರಿಸುವ ಕೆಲಸ ಗೋಪಾಲ್ ಗೆಳೆಯರ ಬಳಗ ಮಾಡಲಿದೆ ಎಂದು ಸಮಾಜ ಸೇವಕ ಗೋಪಾಲ್ ಹೊರೆಯಾಲ ಹೇಳಿದರು.
ಹಿಂದುಳಿದ ತಾಲೂಕಿನಲ್ಲಿ ಶಿಕ್ಷಣದಲ್ಲಿ ಮುಂದೆ ಬಂದಿದೆ. ಇದು ಪ್ರೋತ್ಸಾಹಿಸಲು ಪ್ರಮುಖ ಕಾರಣ. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಕೆಲಸದ ಮೂಲಕವೇ ವಿರೋಧಿಗಳ ಟೀಕೆಗೆ ಉತ್ತರ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದರು.ಎಸ್ಎಸ್ಎಲ್ ಸಿ, ಪಿಯುಸಿಯ ಮಕ್ಕಳು ಭಾಷೆಯ ಮೇಲೆ ಪ್ರಭುತ್ವ ಸಾಧಿಸಬೇಕು ಎಂದು ಪ್ರಾಂಶುಪಾಲ ಡಾ.ವಿ.ಷಣ್ಮುಗಂ ಹೇಳಿದರು.
ಕಲಾ, ವಿಜ್ಞಾನ, ಎಂಜಿನಿಯರ್, ವೈದ್ಯ ಕ್ಷೇತ್ರವಿರಲಿ ಆಳವಾಗಿ ಅಧ್ಯಯನ ಮಾಡಬೇಕು. ಯಾವುದೇ ವಿಷಯ ಇರಲಿ ತಾರ್ಕಿಕ ಅಂತ್ಯಕ್ಕೆ ಕರೆದೊಯ್ಯಬೇಕು ಎಂದರು.ಸರ್ಕಾರಿ ಕೆಲಸ ಸಿಗಬೇಕು ಎಂಬುದು ಎಲ್ಲರ ಬಯಕೆ ಆದರೆ ಖಾಸಗಿ, ಕೃಷಿ, ಕೈಗಾರಿಕಾ, ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಮಾಜಿ ಸಂಸದ ಎ.ಸಿದ್ದರಾಜು ಮಾತನಾಡಿ, ದಲಿತರು ಸಮಾಜದಲ್ಲಿ ಕಣ್ತೆರೆಯಬೇಕಿದ್ದರೆ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಕಾರಣವೇ ಹೊರತು ದೇವರಿಂದಲೂ ಸಾದ್ಯವಾಗುತ್ತಿರಲಿಲ್ಲ ಎಂದರು.
ಒಳ ಮೀಸಲು ಸಂಘರ್ಷ ನಡೆಯುತ್ತಿದೆ.ಸಂವಿಧಾನ ಇಲ್ದೆ ಇದ್ರೆ ಮೀಸಲಾತಿ,ಒಳ ಮೀಸಲಾತಿ ಸಿಗುತ್ತಿರಲಿಲ್ಲ: ದಲಿತರು ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಕೊಡಿಸಬೇಕು ಜೊತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದರು.ಸಮಾಜ ಸೇವಕ ಗೋಪಾಲ ಹೊರೆಯಾಲ ಸಮಾಜ ಸೇವೆಯಲ್ಲಿ ತೊಡಗಿದ್ದು,ಇನ್ಮುಂದೆಯೂ ಹೆಚ್ಚಿನ ಸಮಾಜ ಸೇವೆ ಮುಂದುವರಿಸಿ ಎಂದು ಸಲಹೆ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿ ಅಂಬೇಡ್ಕರ್ ಹಬ್ಬ ಯಶಸ್ವಿಯಾಗಿ ನಡೆಸಿದ್ದಾರೆ.ಈಗ ಪ್ರತಿಭಾ ಪುರಸ್ಕಾರ,ಶಿಕ್ಷಕರಿಗೆ ಸನ್ಮಾನ ಮಾಡುವ ಮೂಲಕ ಸಮಾಜ ಸೇವೆ ಮಾಡಿದ್ದಾರೆ ಇದು ಮೆಚ್ಚುಗೆ ಕೆಲಸ ಎಂದರು.ಗುಂಡ್ಲುಪೇಟೆಯಲ್ಲಿ ಶಿಕ್ಷಕರಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸನ್ಮಾನಿಸಿದರು.