ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರತಿಯೊಬ್ಬರಲ್ಲೂ ಕ್ರೀಡಾ ಮನೋಭಾವ ಇದ್ದರೆ ದೇಹ ಮತ್ತು ಮನಸ್ಸು ಸದೃಢವಾಗುವ ಜೊತೆಗೆ ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿ ಬದಲಾಗುವುದು ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದರು.ತಾಲೂಕಿನ ಕರಿಘಟ್ಟ ಬೆಟ್ಟದ ತಪ್ಪಲಿನಲ್ಲಿ ಶ್ರೀರಂಗಪಟ್ಟಣ ದಸರಾ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಚಾರಣ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಕ್ರೀಡಾಳುಗಳು ಸ್ಫೂರ್ತಿಯಿಂದ ಚಾರಣ, ಮ್ಯಾರಥಾನ್ ನಂತಹ ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸಿ ದೇಹದ ಸದೃಢತೆ ಕಾಪಡಿಕೊಳ್ಳಬೇಕು ಎಂದರು.
ಚಾರಣ ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಪುರುಷ, ಮಹಿಳೆಯರು, ಯುವಕ ಯುವತಿಯರು ಭಾಗವಹಿಸಿ ಯಶಸ್ವಿಗೊಳಿಸಿದರು.20 ವರ್ಷ ಮೇಲ್ಪಟ್ಟ ಪುರುಷ ವಿಭಾಗದಲ್ಲಿ ಭುವನ್ ಜಿ.ವಿ.ಪ್ರಥಮ, ಭುವನ್ ಟಿ.ಪಿ.ದ್ವಿತೀಯ, ಕುಶಾಲ್ ಎಲ್ ತೃತೀಯ, 21 ರಿಂದ 50 ವರ್ಷದ ಪುರುಷ ವಿಭಾಗದಲ್ಲಿ ಪ್ರಥಮ- ಸುಮಂತ್ ಕುಮಾರ್, ದ್ವಿತೀಯ- ವಿನಯ್ ಕುಮಾರ್, ತೃತೀಯ ಅಭಿಷೇಕ್ ಹಾಗೂ 51 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಹರೀಶ್ ಪಿ.ಪ್ರಥಮ, ಪರಮೇಶ್ವರ್ ದ್ವಿತೀಯ, ಸುರೇಶ್ ತೃತೀಯ ಸ್ಥಾನ ಪಡೆದುಕೊಂಡರು.
20 ವರ್ಷ ಮೇಲ್ಪಟ್ಟ ಮಹಿಳೆಯರು ವಿಭಾಗ- ದಿವ್ಯಶ್ರೀ ಪ್ರಥಮ, ಮಾನಸ ದ್ವಿತೀಯ, ಸಂಜನ ತೃತೀಯ, 21 ರಿಂದ 50 ವರ್ಷದ ಮಹಿಳೆಯರ ವಿಭಾಗ- ಹರ್ಷಿತಾ ಪ್ರಥಮ, ಅನನ್ಯ ದ್ವಿತೀಯ, ಶಾಂತಕುಮಾರಿ ಕೆ ಬಿ ತೃತೀಯ. 51 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ - ವಿಜಯ ಪ್ರಥಮ, ಮಂಜುಳಾ ತಮ್ಮಣ್ಣ ದ್ವಿತೀಯ ಹಾಗೂ ಮಂಜುಳಾ ಗೋವಿಂದರಾಜು ತೃತೀಯ ಸ್ಥಾನ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಾಗಭೂಷಣ್, ಅಚೀವರ್ಸ್ ಅಕಾಡೆಮಿಯ ರಾಘವೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ದಸರಾ ಅಂಗವಾಗಿ ರಾಸುಗಳ ಮೆರವಣಿಗೆ ಶಾಸಕರಿಂದ ಚಾಲನೆಶ್ರೀರಂಗಪಟ್ಟಣ:
ದಸರಾ ಅಂಗವಾಗಿ ನಶಿಸಿ ಹೋಗುತ್ತಿರುವ ದೇಶಿ ಜಾನುವಾರು ತಳಿಗಳನ್ನು ಉತ್ತೇಜಿಸಲು ದೇಶಿ ತಳಿ ಹಳ್ಳಿಕಾರ್ ಹಸುಗಳ ಮೆರವಣಿಗೆಗೆ ಪಟ್ಟಣದ ತಾಲೂಕು ಕ್ರೀಡಾಂಗಣದ ಎದುರು ಶಾಸಕ ರಮೇಶ್ ಬಂಡಿಸಿದ್ದೇಗೌಡ ಚಾಲನೆ ನೀಡಿದರು.ನಂತರ ಮೆರವಣಿಗೆ ಕ್ರೀಡಾಂಗಣದಿಂದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ವರೆಗೆಸಾಗಿತು. ಮೆರವಣಿಗೆಯಲ್ಲಿ 42 ಜೋಡಿ ಹಳ್ಳಿಕಾರ್ ಎತ್ತುಗಳು, ಬಂಡೂರು ಕುರಿಗಳು ಭಾಗವಹಿಸಿ ನೋಡುಗರ ಕಣ್ಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಸುಗಳ ಮಾಲೀಕರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಈ ವೇಳೆ ಎಡೀಸಿ ಬಿ.ಸಿ.ಶಿವಾನಂದಮೂರ್ತಿ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ:ಶಿವಲಿಂಗಯ್ಯ, ಸಹಾಯಕ ನಿರ್ದೇಶಕ ಡಾ:ಪ್ರವೀಣ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ವೇಣು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.