ಭ್ರಷ್ಟಾಚಾರ ಮಾಡಿಲ್ಲ ಎಂದರೆ ಪ್ರಮಾಣಕ್ಕೆ ಬರಲಿ

| Published : Dec 21 2024, 01:18 AM IST

ಸಾರಾಂಶ

ವರ್ಗಾವಣೆ ಮತ್ತು ಗುತ್ತಿಗೆದಾರರಲ್ಲಿ ಭ್ರಷ್ಟಾಚಾರ ಮಾಡಿಲ್ಲವೆಂದು ಶಾಸಕರು ಹಾಗೂ ಅವರ ಆಪ್ತ ( ಸೋಮಶೇಖರ್ ಲೌಗೆರೆ ) ಪ್ರಮಾಣಕ್ಕೆ ಬರಲಿ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ ಹೊನಗೋಡು ಆಹ್ವಾನ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಆನಂದಪುರ

ವರ್ಗಾವಣೆ ಮತ್ತು ಗುತ್ತಿಗೆದಾರರಲ್ಲಿ ಭ್ರಷ್ಟಾಚಾರ ಮಾಡಿಲ್ಲವೆಂದು ಶಾಸಕರು ಹಾಗೂ ಅವರ ಆಪ್ತ ( ಸೋಮಶೇಖರ್ ಲೌಗೆರೆ ) ಪ್ರಮಾಣಕ್ಕೆ ಬರಲಿ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ ಹೊನಗೋಡು ಆಹ್ವಾನ ನೀಡಿದ್ದಾರೆ.

ಅವರು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸನಗರದಲ್ಲಿ ಮರಳು ದಂಧೆ ಮಾಡಿ, ಸಾವಿರಾರು ಲೋಡ್ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿದಲ್ಲದೇ, ಸ್ಥಳೀಯ ಜನರು ವಿರೋಧಿಸಿ ಶಾಸಕರ ಗಮನಕ್ಕೆ ತಂದಾಗ ಅಲ್ಲಿಂದ ಸಾಗರದ ತ್ಯಾಗರ್ತಿ ಸಮೀಪದ ಲವ್ ಗೆರೆ ಸರ್ವೇ ನಂ. 46 ರಲ್ಲಿ ಅಕ್ರಮ ಜಂಬಿಟ್ಟಿಗೆ ಕಲ್ಲು ದಂದೆ ನಡೆಸಿ,ತಮ್ಮ ಕಲ್ಲು ಖರೀದಿಯಾಗಬೇಕೆಂಬು ಉದ್ದೇಶದಿಂದ ಅಧಿಕಾರಿಗಳಿಗೆ ಒತ್ತಡ ಹೇರಿ, ಇತರೆ ಕಲ್ಲು ಕೋರೆಗಳನ್ನು ಬಂದು ಮಾಡಿಸಿದವರು ಎಂದು ಆರೋಪಿಸಿದರು.

ಭೀಮನರಿ ಸರ್ವೆ ನಂಬರ್ 21ರಲ್ಲಿ ಅಕ್ರಮ ನಿವೇಶನ ಪಡೆದಿದ್ದು, ಕೋಟೆಕೊಪ್ಪದಲ್ಲಿ ಯಾರದ್ದೋ ಜಮೀನು ಪಡೆದು ಹಣ ನೀಡದೆ ಜಮೀನಿನ ಮಾಲಿಕರಿಗೆ ಬೆದರಿಕೆ ಹಾಕಿದ್ದಾರೆ. ಇಂತಹ ಭ್ರಷ್ಟಾಚಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಬೆಂಬಲವಾಗಿ ನಿಂತಿದ್ದಾರೆ. ಇಂತಹ ವ್ಯಕ್ತಿಗಳು ಹಾಲಪ್ಪನ ಮತ್ತು ನಮ್ಮ ವಿರುದ್ಧ ಮಾತನಾಡುವಾಗ ನಾಲಿಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದು ಎಚ್ಚರಿಸಿದರು.

ಕಳೆದ 25 ವರ್ಷದಿಂದ ಕೃಷಿ ಮಾಡಿಕೊಂಡು ಪ್ರಾಮಾಣಿಕದಿಂದ ಬದುಕುತ್ತಿರುವ ನಮ್ಮ ಮೇಲೆ ಆರೋಪಿಸುತ್ತಿರುವುದು ಸರಿಯಲ್ಲ. ಕೆಂಜಿಗಾಪುರದಲ್ಲಿ 50 ವರ್ಷಗಳ ಹಿಂದಿನ ದಾಖಲೆ ಇರುವ ನಿವೇಶನವನ್ನು ನಾವು ಖರೀದಿ ಮಾಡಿದ್ದೇವೆ. ಅಲ್ಲಿ ದೇವಸ್ಥಾನದ ಕೆರೆ ಇದ್ದ ಕಾರಣ ಲೇಔಟ್ ಮಾಡದಂತೆ ಸ್ಥಳೀಯ ದೇವಸ್ಥಾನದ ಸಮಿತಿಯವರು ತಿಳಿಸಿದ್ದು ಬಿಟ್ಟರೆ ಬೇರೆ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಶಕ್ತಿಕೇಂದ್ರದ ಅಧ್ಯಕ್ಷ ಶಾಂತಕುಮಾರ್ ಮಾತನಾಡಿ, ಕೆಂಜಿಗಾಪುರದಲ್ಲಿ ರತ್ನಾಕರ ಹೊನಗೋಡ್ ರವರು ಯಾವುದೇ ಅಕ್ರಮ ಆಸ್ತಿ ಮಾಡಿಲ್ಲ. 50 ವರ್ಷದ ಹಿಂದಿನ ಮೂಲ ದಾಖಲೆ ಇರುವಂತಹ ಹಾಗೂ ಹಿಂದೆ ಲೇಔಟ್ ಮಾಡಿದಂತಹ ನಿವೇಶನವನ್ನು ಖರೀದಿ ಮಾಡಿದ್ದಾರೆ. ಈ ನಿವೇಶನದಲ್ಲಿ ಮನೆಗಳ ನಿರ್ಮಾಣ ಬೇಡ ಎಂದು ತಿಳಿಸಿದ್ದೇವೆ ಅಷ್ಟೇ ಎಂದು ತಿಳಿಸಿದರು.

ಸಾಗರ ಕ್ಷೇತ್ರದಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರು ಮಧ್ಯಪ್ರವೇಶಿಸಿ ಜಿಲ್ಲಾ ಸಚಿವರಿಗೂ ಹಾಗೂ ಸರ್ಕಾರದ ಗಮನಕ್ಕೆ ತರುವಂತಹ ಪ್ರಯತ್ನವಾಗಬೇಕೆಂದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರ್ಮಪ್ಪ, ಮಾಜಿ ಗ್ರಾಮ್ ಪಂಚಾಯತ್ ಅಧ್ಯಕ್ಷ ಶಿವಾನಂದ, ವೆಂಕಟೇಶ್ ಚಂದಳ್ಳಿ ಇತರರಿದ್ದರು.