ಬರೀ ಘೋಷಣೆ ಹಾಕ್ಕೊಂಡು ಹೋದ್ರೆ ಜನ ಮತ ಹಾಕ್ತಾರಾ? ಬಿಜೇಪಿ ವಿರುದ್ಧ ಸಚಿವ ಡಾ. ಶರಣಪ್ರಕಾಶ ವಾಗ್ದಾಳಿ

| Published : Mar 03 2024, 01:35 AM IST

ಬರೀ ಘೋಷಣೆ ಹಾಕ್ಕೊಂಡು ಹೋದ್ರೆ ಜನ ಮತ ಹಾಕ್ತಾರಾ? ಬಿಜೇಪಿ ವಿರುದ್ಧ ಸಚಿವ ಡಾ. ಶರಣಪ್ರಕಾಶ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಅಬ್‌ ಕೀ ಬಾರ್‌ ಚಾರ್‌ ಸೌ ಪಾರ್‌.... ಎಂದು ಘೋಷಣೆ ಹಾಕಿದ್ರೆ ಮ ಬರ್ತಾವಾ?, ಜನಪರವಾಗಿ ಕೇಂದ್ರ ಕಳೆದ ದಶಕದಿಂದ ಏನೆಲ್ಲ ಮಾಡಿದೆ ಹೇಳಲಿ, ದನ್ನು ಹೇಳಿ ಮತ ಕೇಳಲಿ, ವಿನಾಕಾರಣ ಭಾವನೆಗಳನ್ನು ಕೆರಳಿಸುತ್ತ ಮತ ಯಾಟಿಸಿದರೆ ಜನ ಚಾರ್‌ ಸೌ ಪಾರ್‌ ಅಲ್ಲ, ಇವರನ್ನೇ ಸಂಸತ್‌ನಿಂದ ಪಾರು ಮಾಡುತ್ತಾರೆಂದು ಟೀಕಿಸಿದ್ದಾರೆ.

ಕಲಬುರಗಿ: ಅಬ್‌ ಕೀ ಬಾರ್‌ ಚಾರ್‌ ಸೌ ಪಾರ್‌.... ಎಂದು ಘೋಷಣೆ ಹಾಕಿದ್ರೆ ಮ ಬರ್ತಾವಾ?, ಜನಪರವಾಗಿ ಕೇಂದ್ರ ಕಳೆದ ದಶಕದಿಂದ ಏನೆಲ್ಲ ಮಾಡಿದೆ ಹೇಳಲಿ, ದನ್ನು ಹೇಳಿ ಮತ ಕೇಳಲಿ, ವಿನಾಕಾರಣ ಭಾವನೆಗಳನ್ನು ಕೆರಳಿಸುತ್ತ ಮತ ಯಾಟಿಸಿದರೆ ಜನ ಚಾರ್‌ ಸೌ ಪಾರ್‌ ಅಲ್ಲ, ಇವರನ್ನೇ ಸಂಸತ್‌ನಿಂದ ಪಾರು ಮಾಡುತ್ತಾರೆಂದು ಟೀಕಿಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಸ್ಥಿರ ಸರಕಾರಗಳಿದ್ದಲ್ಲಿ ಅವುಗಳನ್ನು ಅಸ್ಥಿರ ಮಾಡೋದು, ಆಪರೇಷನ್‌ ಕಮಲ ಮಾಡೋದು ಇವೆ ಬಿಜೆಪಿಯ ದೇಶದಾದ್ಯಂತ ಕಾಣುವ ಸಾಧನೆಗಳಾಗಿವೆ. ಹಿಮಾಚಲ ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಿ ಸೋ ಬಿಜೆಪಿ ಕರುನಾಡಲ್ಲೂ ಆ ಕೆಲಸಕ್ಕೆ ಕೈ ಹಾಕಿದೆ. ಇವರ ಹಿಂಬಾಗಿಲಿಂದ ಗದ್ದುಗೆ ಹತ್ತುವ ಪ್ರವೃತ್ತಿಗೆ ಜನ ಮೆಚ್ಚೋದಿಲ್ಲವೆಂದರು.

ಬಿಜೆಪಿ ತೆರಿಗೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ನಾವು ನಮ್ಮ ತೆರಿಗೆ ಹಕ್ಕು ಕೇಳುತ್ತಿದ್ದೇವೆಯೇ ಹೊರತು ಅವರಿಂದ ಉಪಕಾರವನ್ನಲ್ಲ ಎಂದು ಹೇಳಿದ ಡಾ. ಶರಣಪಕಾಶ ಪಾಟೀಲ್‌ ಬಿಜೆಪಿ ಕೇಂದ್ರದಲ್ಲಿ ಈ ಬಾರಿ ಅಧಿಕಾರ ಗದ್ದುಗೆ ಹಿಡಿಯೋದಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಪಂಚ ಗ್ಯಾರಂಟಿಗಳನ್ನು ಘೋಷಿಸಿದಾಗ ಜಾರಿಗೆ ತರೋದೇ ಕಷ್ಟ, ಇವರಿಂದ ಆಗೋದಿಲ್ಲವೆಂದ ವಿಪಕ್ಷಗಳು ಇಂದು ಅಚ್ಚರಿಯಿಂದ ನಮ್ಮ ಅನುಷ್ಠಾನವನ್ನೇ ನೋಡುವಂತಾಗಿದೆ. ಕಾಂಗ್ರೆಸ್‌ ಜನಪರ ಬದ್ಧತೆಗೆ ಇದು ಉದಾಹರಣೆ. ನಮ್ಮ ಸರಕಾರ ಸದಾ ಜನಪರವಾಗಿದೆ ಎಂದರು.

ಕಲಬುರಗಿ, ಸೇಡಂ, ಆಳಂದ, ಅಫಝಲ್ಪುರದಲ್ಲಿನ ಈಚೆಗಿನ ಕೊಲೆ, ಸುಲಿಗೆ, ದಾಂಧಲೆ ಘಟನೆಗಳನ್ನು ಪ್ರಸ್ತಾಪಿಸುತತ್ತ ಕಾನೂನು- ಸುವ್ಯವಸ್ಥೆಗೇ ಧಕ್ಕೆ ಬಂದಿದೆ, ಬವಿಪಕ್ಷಗಳೂ ಆರೋಪಿಸುತ್ತಿದ್ದಾರೆಂದು ಗಮನ ಸೆಳೆದಾಗ ಸ್ಪಂದಿಸಿದ ಸಚಿವರು ತಮ್ಮೂರು ಊ]ಗಿಲ್ಲಿನ ಘಟನೆಯ ಹಿಂದೆ ಏನೇನೂ ಇಲ್ಲ, ಉಭಯ ಗುಂಪುಗಳವರು ಹೇಳಿಕೆ ನೀಡಿದ್ದಾರೆ. ನಾವು ಊರಲ್ಲಿನ ಇಂತಹ ಬಳವಣಿಗೆ ಬೆಳೆಯಲು ಬಿಡೋದಿಲ್ಲ, ಅಲ್ಲೇ ಅವುಗಳಿಗೆ ಪರಿಹಾರ ಹುಡುಕುತ್ತೇವೆ ಎಂದರು.

ಇನ್ನು ಏನಕೇನ ಕಾರಣಗಳಿಂದಾಗಿ ಆಗುವ ಹತ್ಯೆಗಳಿಗೆ ಬಿಜೆಪಿ ರಾಜಕೀಯ ಬಣ್ಣ ಬಳಿಯುತ್ತ ರಾಜಕೀಯ ಮಾಡುತ್ತಿದೆ. ಇದನ್ನು ಖಂಡಿಸೋದಾಗಿ ಹಳಿದರಲ್ಲದೆ ಜಿಲ್ಲಾಡಳಿತ ಇಲ್ಲಿ ಅಲರ್ಟ್‌ ಆಗಿದೆ. ಯಾರಿಗೂ ಅನ್ಯಾಯವಾಗಲು ಬಿಡೋದಿಲ್ಲ. ಜನಪರವಾಗಿಯೇ ಕೆಲಸ ಮಾಡುವಂತೆ ತಾವು ಜಿಲ್ಲಾಡಳಿತಕ್ಕೆ ಸೂಚಿಸಿರೋದಾಗಿ ಹೇಳಿದರು.