ಸ್ವತಂತ್ರ ಬದುಕು ಕಟ್ಟಿಕೊಂಡು ಜೀವನ ಸಾಗಿಸಿದರೆ ಬದುಕು ಸ್ವಾರ್ಥಕ: ಹುಕ್ಕೇರಿ

| Published : May 17 2024, 12:36 AM IST

ಸ್ವತಂತ್ರ ಬದುಕು ಕಟ್ಟಿಕೊಂಡು ಜೀವನ ಸಾಗಿಸಿದರೆ ಬದುಕು ಸ್ವಾರ್ಥಕ: ಹುಕ್ಕೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭವಾರ್ತೆ ಮಹಾಲಿಂಗಪುರ ಪ್ರಾಚೀನ ಕಾಲದಿಂದಲೂ ಗುರುಕುಲದಲ್ಲಿ ರಾಜಮಹಾರಾಜರು ಸಹ ಗುರುವಿಗೆ ಪೂಜ್ಯ ಸ್ಥಾನ ನೀಡಿ ಗೌರವಿಸುತ್ತ ಬಂದಿದ್ದು, ತಮಗೆ ತಾವೇ ಮಾದರಿಯಾಗಿ ಬೆಳೆದು, ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ಭಾವ ಮೆರೆದು ಉತ್ತಮ ನಾಗರಿಕರಾಗಿ ಬೆಳೆದು ಸ್ವತಂತ್ರ ಬದುಕು ನಡೆಸಿದರೆ ಜೀವನ ಸ್ವಾರ್ಥಕವಾಗುತ್ತದೆ ಎಂದು ನಿವೃತ್ತ ಶಿಕ್ಷಕ ಚನ್ನಪ್ಪ ಹುಕ್ಕೇರಿ ಹೇಳಿದರು

ಕನ್ನಡಪ್ರಭವಾರ್ತೆ ಮಹಾಲಿಂಗಪುರಪ್ರಾಚೀನ ಕಾಲದಿಂದಲೂ ಗುರುಕುಲದಲ್ಲಿ ರಾಜಮಹಾರಾಜರು ಸಹ ಗುರುವಿಗೆ ಪೂಜ್ಯ ಸ್ಥಾನ ನೀಡಿ ಗೌರವಿಸುತ್ತ ಬಂದಿದ್ದು, ತಮಗೆ ತಾವೇ ಮಾದರಿಯಾಗಿ ಬೆಳೆದು, ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ಭಾವ ಮೆರೆದು ಉತ್ತಮ ನಾಗರಿಕರಾಗಿ ಬೆಳೆದು ಸ್ವತಂತ್ರ ಬದುಕು ನಡೆಸಿದರೆ ಜೀವನ ಸ್ವಾರ್ಥಕವಾಗುತ್ತದೆ ಎಂದು ನಿವೃತ್ತ ಶಿಕ್ಷಕ ಚನ್ನಪ್ಪ ಹುಕ್ಕೇರಿ ಹೇಳಿದರು.

ಸ್ಥಳೀಯ ಶ್ರೀ ಟೊಣಪಿನಾಥ ಕಲ್ಯಾಣ ಮಂಟಪದಲ್ಲಿ ಶನಿವಾರ ಹಾಗೂ ಭಾನುವಾರ ಶ್ರೀ ಚನ್ನಗಿರೇಶ್ವರ ಪ್ರಾಸಾಧಿಕ ಪ್ರೌಢಶಾಲೆಯ 1992-93ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳು ಆಯೋಜಿಸಿದ್ಧ ಗುರುವಂದನೆ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಷ್ಯಂದಿರು ಗುರುಗಳಿಗಿಂತ ಮೇಲೆತ್ತರದಲ್ಲಿ ಬೆಳೆದು ನಿಂತಾಗ ಆ ಗುರುಗಳಿಗೆ ಆಗುವ ಸಂತೋಷ ಬೇರಾರಿಗೂ ಆಗುವುದಿಲ್ಲ, ಗುರು ಬರೀ ಕಲಿಸುತ್ತಾನೆ. ಅದನ್ನು ಗುರುವಾಖ್ಯವೆಂದು ತಿಳಿದು ನಡೆಯುವವನು ಜೀವನದಲ್ಲಿ ಉನ್ನತ ಸ್ಥಾನ ಪಡೆಯಲು ಸಾದ್ಯವಾಗುತ್ತದೆ ಎಂದರು.

ನಿವೃತ್ತ ಶಿಕ್ಷಕರಾದ ಬಿ.ಜಿ. ಬಿರಾದಾರ ಮಾತನಾಡಿ, ಎಂ.ಎಚ್. ಕುಂಟೋಜಿ, ಜಿ.ಜಿ. ಹುಬ್ಬಳ್ಳಿ, ಎಸ್.ಬಿ. ಕೋರಿಶೆಟ್ಟಿ, ಎಸ್.ಬಿ. ಮಠಗಾರ, ಬಿ.ಡಿ. ಗೋಕಾಕ, ಎಸ್.ಬಿ. ಹುಲಕುಂದ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಇತ್ತೀಚಿನ ವರ್ಷಗಳಲ್ಲಿ ಇಂತಹ ನೂತನ ಪರಂಪರೆ ಪ್ರಾರಂಭಿಸಿದ್ದು, ದೇಶದ ಸಂಸ್ಕೃತಿ ಎತ್ತಿ ಹಿಡಿಯುತ್ತಿದ್ದಾರೆ. ನಮ್ಮನ್ನು ತಮ್ಮ ಹೃದಯದಾಳದಲ್ಲಿಟ್ಟುಕೊಂಡು ಕರೆಸಿ ಗುರುಗಳನ್ನು ಸನ್ಮಾನಿಸಿ ಗೌರವಸುವ ಕಾರ್ಯ ಮಾಡಿದ್ದೀರಿ. ಇದು ನಮ್ಮ ಜೀವನದ ಸಂತೋಷ ಹಾಗೂ ಸಂಭ್ರಮದ ಘಳಿಗೆ, ಗುರು ಶಿಷ್ಯ ಪರಂಪರೆ ದೇಶದ ಶ್ರೇಷ್ಠತೆಗೆ ಸಾಕ್ಷಿ ಎಂದು ಹೇಳಿದರು.

ಶಿಕ್ಷಕರಾದ ಎಂ.ಐ. ಡಾಂಗೆ, ಡಿ.ಎ. ಬಿಸನಾಳ, ಬಿ.ಎನ್. ಅರಿಕೇರಿ, ಎಸ್.ಟಿ. ಮಠಪತಿ ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಮುಂಚೆ ಗುರುಗಳನ್ನು ಕಾಲೇಜಿನಿಂದ ಕಾರ್ಯಕ್ರಮದ ವೇದಿಕೆವರೆಗೆ ಮಹಾಲಿಂಗಪುರದ ಪ್ರಖ್ಯಾತ ಕರಡಿ ಮಜಲು ವಾದನ ಹಾಗೂ ಇತರ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ತೇರದಾಳ ಕ್ಷೇತ್ರದ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿದ್ದು ಕೊಣ್ಣೂರ, ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಸಪ್ನಾ ಅನಿಗೋಳ ಅವರು ಸಹ ವಿದ್ಯಾರ್ಥಿಗಳ ಸಾಲಿನಲ್ಲಿ ಕುಳಿತು ಗಮನ ಸೆಳೆದರು.ವಿದ್ಯಾರ್ಥಿಗಳಾದ ಚನ್ನಯ್ಯ ಮಸಗುಪ್ಪಿಮಠ, ಶ್ರೀಶೈಲ ಅಂಗಡಿ, ರಾಜು ಜಮಖಂಡಿ, ಬಸವರಾಜ ರಾಯರ, ಉತ್ತಮ ಓಸ್ವಾಲ, ನಾಗಪ್ಪ ಮುದಕವಿ, ರಾಜು ಭಾವಿಕಟ್ಟಿ, ಸಿಂಧೂರ ಬಾಳೀಗೇರಿ, ಸಂತೋಷ ಪಟ್ಟಣಶೆಟ್ಟಿ, ಶೈಲಜಾ ಹುನ್ನೂರ ಇತರರು ಇದ್ದರು.----ಬಾಕ್ಸ್---ನಾನು ವಿದ್ಯಾಭ್ಯಾಸ, ಕ್ರೀಡೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಬರಲು ಗುರುಗಳು ನನಗೆ ನೀಡಿದ ಸಂಸ್ಕಾರ ಮತ್ತು ವಿದ್ಯೆಯೇ ಕಾರಣ. ಜೊತೆಗೆ ಮನೆಯಲ್ಲಿ ತಂದೆ-ತಾಯಿಗಳ ಸಹಕಾರದಿಂದ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಯಿತು.-ಸಿದ್ದು ಕೊಣ್ಣೂರ ರಾಜಕೀಯ ಮುಖಂಡ----ಗುರುವಿಗೆ ಗುರುವೇ ಸಾಟಿ. ವಿದ್ಯಾರ್ಥಿಗಳ ಉನ್ನತಿಯಲ್ಲಿ ಸಂತೋಷ ಕಾಣುವ ಏಕ್ಕ ವ್ಯಕ್ತಿ ಗುರು. ಅವರಿಂದ ಪಡೆದಿದ್ದನ್ನು ಹಿಂದಿರುಗಿಸುವುದು ಸಾಧ್ಯವಿಲ್ಲದಿದ್ದರೂ ಅಳಿಲು ಸೇವೆ ಸಲ್ಲಿಸಲು ಈ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ. - ಸಪ್ನಾ ಅನಿಗೋಳ ರಾಷ್ಟ್ರಮಟ್ಟದ ಉತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ