ಯತ್ನಾಳ ಒಬ್ಬ ಆಲ್‌ರೌಂಡರ್‌, ಗುಡ್ ಬ್ಯಾಟ್ಸಮನ್, ಬೌಲರ್, ವಿಕೆಟ್ ಕೀಪರ್ ಅಲ್ಲದೇ ಗುಡ್ ಫೀಲ್ಡರ್. ಎಲ್ಲ ಬೌಲರ್‌ಗಳಿಗೆ ಸಿಕ್ಸ್ ಬಾರಿಸದೇ ಒಳ್ಳೆಯ ಬೌಲ್ ಬಂದಾಗ ಮಾತ್ರ ಸಿಕ್ಸ್‌ ಹೊಡೀರಿ. ಹೀಗೆ ಆಡಿದರೆ ನೀವೊಬ್ಬ ಮ್ಯಾನ್ ಆಫ್ ದಿ ಸಿರೀಸ್ ಆಗ್ತಿರಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಮುರುಗೇಶ ನಿರಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಯತ್ನಾಳ ಒಬ್ಬ ಆಲ್‌ರೌಂಡರ್‌, ಗುಡ್ ಬ್ಯಾಟ್ಸಮನ್, ಬೌಲರ್, ವಿಕೆಟ್ ಕೀಪರ್ ಅಲ್ಲದೇ ಗುಡ್ ಫೀಲ್ಡರ್. ಎಲ್ಲ ಬೌಲರ್‌ಗಳಿಗೆ ಸಿಕ್ಸ್ ಬಾರಿಸದೇ ಒಳ್ಳೆಯ ಬೌಲ್ ಬಂದಾಗ ಮಾತ್ರ ಸಿಕ್ಸ್‌ ಹೊಡೀರಿ. ಹೀಗೆ ಆಡಿದರೆ ನೀವೊಬ್ಬ ಮ್ಯಾನ್ ಆಫ್ ದಿ ಸಿರೀಸ್ ಆಗ್ತಿರಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಮುರುಗೇಶ ನಿರಾಣಿ ಹೇಳಿದರು.

ತಾಲೂಕಿನ ಕೊಣ್ಣೂರ ವಿಜ್ಞಾನ ಮಹಾವಿದ್ಯಾಲಯ ಭಾನುವಾರ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿದ್ದಾಗ ಯತ್ನಾಳರನ್ನು ಪ್ರಶಂಸಿದ್ದು, ರಾಜಕೀಯ ವಲಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ರಾಜಕಾರಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುವುದು ಸಹಜ. ಆದರೆ ನಮ್ಮಲ್ಲಿನ ಏಕತೆ ಮುಖ್ಯ. ನಾವಿಬ್ಬರೂ ಒಂದೇ ಜಿಲ್ಲೆಯವರು. ನಾವೆಲ್ಲ ಯಾವಾಗಲೂ ಒಂದೇ ಎಂದು ಮಾಜಿ ಸಚಿವ ನಿರಾಣಿ ಅವರು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ನಿರಾಣಿ ಅವರ ಸಲಹೆಗೆ ತಮ್ಮ ಧಾಟಿಯಲ್ಲೇ ಉತ್ತರ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಿಕ್ಸ ಹೊಡೆಯಬೇಕು, ಫೋರು ಹೊಡೆಯಬೇಕು. ನಮಗೆ ಬೇಕಾಗಿದ್ದು ಒಂದೇ ರನ್, ಒಂದೇ ಬಾಲ್ ಇದೆ. ಆಗ ಧೈರ್ಯ ಮಾಡಿ ಒಂದೇ ರನ್ ಹೊಡೆದ್ರು ಗೆದ್ದು ಬರ್ತಿವಿ. ಹಂಗ್ ನಾನು. ನಾನು ವಾಜಪೇಯಿ ಅವರಲ್ಲಿ ಮಂತ್ರಿ ಆಗಿದ್ದು ಬಿಟ್ರೆ ಮುಂದೆ ಆಗಿಲ್ಲ. ಆದರೆ, ಕರ್ನಾಟಕದ ಯಾವುದೇ ಮೂಲೆಗೆ ಹೋದರೂ ಯತ್ನಾಳ್ ಎನ್ನುವ ಹೆಸರು ನಾನು ಮಾಡಿದ್ದೇನೆ. ನನ್ನ ನೇರ ಹೋರಾಟದ ಫಲದಿಂದ ರಾಜ್ಯಾದ್ಯಂತ ಹೆಸರು ಮಾಡಿದ್ದೇನೆ. ಮೊನ್ನೆ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಬಾಯಿ ಮುಚ್ಚಿಸಿದಿನಲ್ಲ. ಕೊನೆಗೆ ಸಿಎಂ ಉತ್ತರಿಸಲಾಗದೇ ಸುಮ್ನೆ ಕೂಡಯ್ಯ ನಿನ್ನನ್ನ ಬಿಜೆಪಿಗರು ಉಚ್ಛಾಟನೆ ಮಾಡಿದ್ದಾರೆ ಎಂದರು. ಆಗ ನಾನು ಉಚ್ಛಾಟನೆಯಾಗಿದ್ದಕ್ಕೆ ನೀವು ಸಿಎಂ ಆದ್ರಿ. ಉಚ್ಛಾಟನೆ ಬಳಿಕ ಕುಮಾರಸ್ವಾಮಿ, ಯಡಿಯೂರಪ್ಪ, ನೀವು ಮುಖ್ಯಮಂತ್ರಿಯಾದ್ರಿ. ಇನ್ನು ಏನಿದ್ದರೂ ಉಚ್ಛಾಟನೆಗೊಂಡಿರುವ ನಾನು ಸಿಎಂ ಆಗೋ 4ನೇ ಗಿರಾಕಿ ಎಂದೆ ಎಂದು ಹೇಳಿದರು.

ಕೊಣ್ಣೂರ ಸಮೂಹ ಸಂಸ್ಥೆಗಳಲ್ಲಿನ ಗುಣಮಟ್ಟದ ಶಿಕ್ಷಣ ಪ್ರಸಿದ್ಧವಾಗಿದೆ. ಇಲ್ಲಿ ವೈದ್ಯಕೀಯ ಕಾಲೇಜು, ತಾಂತ್ರಿಕ ಶಿಕ್ಷಣ ವಿಭಾಗಗಳು ಆರಂಭಗೊಳ್ಳಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೊಣ್ಣೂರ, ಶಾಸಕ ಸಿದ್ದು ಸವದಿ, ಧುರೀಣ ಉಮೇಶ ಮಹಾಬಲಶೆಟ್ಟಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಯಿದ್ದರು.