ಪರಿಶ್ರಮದಿಂದ ಓದಿದರೆ ಅಸಾಧ್ಯವಾದ ಸಾಧನೆ ಸಾಧ್ಯ: ಬಸವರಾಜ ಮನಗೂಳಿ

| Published : May 27 2024, 01:07 AM IST

ಪರಿಶ್ರಮದಿಂದ ಓದಿದರೆ ಅಸಾಧ್ಯವಾದ ಸಾಧನೆ ಸಾಧ್ಯ: ಬಸವರಾಜ ಮನಗೂಳಿ
Share this Article
  • FB
  • TW
  • Linkdin
  • Email

ಸಾರಾಂಶ

ಹಗೇದಾಳ ಗ್ರಾಮದಲ್ಲಿ ಬಾಗಲಕೋಟೆ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಬೆಂಗಳೂರಿನ ರಾಜೀವ ಗಾಂಧಿ ಯುನಿವರ್ಸಿಟಿಗೆ ರಾಜ್ಯಕ್ಕೆ 8ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಸಂಗಮ್ಮ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಹುನಗುಂದ

ಅನುಕೂಲ ಮತ್ತು ಅನಾನುಕೂಲಗಳನ್ನು ಲೆಕ್ಕಿಸದೆ ಬೇಕು ಬೇಡಗಳನ್ನು ಬದಿಗಿರಿಸಿ ಸಮಚಿತ್ತದಿಂದ ಓದಿ ರಾಜ್ಯಕ್ಕೆ ನರ್ಸಿಂಗ್‌ ನಲ್ಲಿ ರಾಜೀವ ಗಾಂಧಿ ವಿಶ್ವವಿದ್ಯಾಲಯಕ್ಕೆ 8ನೇ ರ್‍ಯಾಂಕ್ ಪಡೆದ ಸಂಗಮ್ಮಳ ಶೈಕ್ಷಣಿಕ ಜೀವನ ಮತ್ತಷ್ಟು ಎತ್ತರಕ್ಕೆ ಸಾಗಿ ಯಶಸ್ವಿ ಕಾಣಲಿ ಎಂದು ಗ್ರಾಮದ ಹಿರಿಯರಾದ ಬಸವರಾಜ ಮನಗೂಳಿ ಹೇಳಿದರು.

ತಾಲೂಕಿನ ಹಗೇದಾಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡ ಹುನಗುಂದ ಸಾರಿಗೆ ಘಟಕದ ಬಸ್ ಚಾಲಕ ಗದಿಗೆಯ್ಯ ಹಿರೇಮಠ ಅವರ ಪುತ್ರಿ ಬಾಗಲಕೋಟೆ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಬೆಂಗಳೂರಿನ ರಾಜೀವ ಗಾಂಧಿ ಯುನಿವರ್ಸಿಟಿಯಿಂದ ರಾಜ್ಯಕ್ಕೆ 8ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಸಂಗಮ್ಮ ಹಿರೇಮಠ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಪರಿಶ್ರಮ, ಸತತ ಪ್ರಯತ್ನವಾದಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವಂತೆ ನಮ್ಮೂರ ಮಗಳಿಗೆ ಸಾಧನೆ ಮಾಡಿದ್ದು, ಹಗೇದಾಳ ಗ್ರಾಮ, ತಾಲೂಕು ಮತ್ತು ಜಿಲ್ಲೆಗೆ ಸಂತಸ ತಂದಿದೆ. ಯಾವುದೆ ಕ್ಷೇತ್ರದಲ್ಲಿ ಯಶಸ್ವು ಕಾಣಬೇಕಾದರೆ ನಿರಂತರ ಪಯತ್ನ, ಸತತ ಅಧ್ಯಯನದಿಂದ ಮಾತ್ರ ಸಾಧ್ಯ. ಸೌಲಭ್ಯಗಳಿಲ್ಲದ ಗ್ರಾಮೀಣ ಭಾಗದ ಈ ಪ್ರತಿಭೆ ನಮ್ಮೂರಿನ ಮೆರಗು ಹೆಚ್ಚಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಿಕ್ಷಕ ಬಸವರಾಜ ಹೊಸಗೌಡರ ಮಾತನಾಡಿ, ಏಕಚಿತ್ತದಿಂದ ಬಸ್ ನಡೆಸುವ ಕಾಯಕ ಮತ್ತು ಕನಿಷ್ಟ ಸಂಬಳದ ಚಾಲಕನ ಕುಟುಂಬದ ಮಗಳು ರಾಜ್ಯಕ್ಕೆ 8ನೇ ರ್‍ಯಾಂಕ್ ಪಡೆದಿರುವುದು ದಾಖಲೆಯೇ ಸರಿ. ಗ್ರಾಮೀಣ ಭಾಗದ ಬಹುತೇಕ ಇಲ್ಲಗಳ ನಡುವೆ ಸಾಧನೆ ಮಾಡಿದ ವಿದ್ಯಾರ್ಥಿನಿಯ ಪ್ರತಿಭೆಯನ್ನು ಎಲ್ಲರೂ ಗೌರವಿಸುವಂಥದ್ದು. ಒತ್ತಡ ಮತ್ತು ಸ್ವಯಂಪ್ರೇರಣೆಗೆ ಪ್ರತಿಭೆ, ಗೌರವ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ ಸಂಗಮ್ಮ ಹಿರೇಮಠ ಸಾಧನೆಯೇ ಸಾಕ್ಷಿ ಎಂದರು.

ಕಾಂಗ್ರೆಸ್ ಮುಖಂಡ ಜೈನಸಾಬ ಹಗೇದಾಳ ಮಾತನಾಡಿ, ಸತತ ಪರಿಶ್ರಮವು ಕಠಿಣತೆಯನ್ನು ಸರಳವಾಗಿ ಪಡೆದಾಗ ಇಂಥ ಸಾಧನೆ ಸಾಧ್ಯ ಎಂದರು. ಪರಶುರಾಮ ನಿರ್ವಾಲಿ, ಗಿರಿಗೌಡ ಚಿತ್ತರಗಿ, ಬಸವರಾಜ ಮನಗೂಳಿ, ಶಂಕ್ರಪ್ಪ ರಾಮಥಾಳ, ಸಂಗನಗೌಡ ಪಾಟೀಲ, ಬಾನಪ್ಪ ಹಗೇದಾಳ, ಹೊನ್ನಪ್ಪ ಹಳ್ಳೂರ, ನಿಂಬನಗೌಡ ಲೂಟಿ, ಬಸನಗೌಡ ಗೌಡರ, ಮಳೇಂದ್ರಗೌಡ ಹೊಸಗೌಡರ, ಗ್ರಾಮದ ವಾಲಿಕಾರ, ರಹೆಮಾನಸಾಬ ಹಗೇದಾಳ, ವಿದ್ಯಾರ್ಥಿನಿ ಕುಟುಂಬದ ಸದಸ್ಯರು ಇದ್ದರು. ವರ್ಗದ ಎಲ್ಲ ಉಪನ್ಯಾಸಕರ, ಸಹಪಾಠಿಗಳ ಸ್ನೇಹ ಮತ್ತು ಅವರ ಜೊತೆ ಓದು ಹಂಚಿಕೊಳ್ಳುವುದು ನಿತ್ಯದ ಕೆಲಸವಾಗಿತ್ತು. ನನಗೆ ಈ ರ್‍ಯಾಂಕ್ ಬಂದಿರುವುದು ದೊಡ್ಡ ಸಾಧನೆ ಅಲ್ಲ. ಆದರೂ ಗ್ರಾಮಸ್ಥರು ನನ್ನನ್ನು ಸನ್ಮಾನಿಸಿ ಗೌರವಿಸಿದ್ದು ಸಂತೋಷ. ನನಗೆ ಇನ್ನೂ ಓದಿನ ಆಸಕ್ತಿ ಇದೆ. ನಾನು ಖಾಸಗಿ ಸಂಸ್ಥೆಯಲ್ಲಿ ಸೇವೆ ಮಾಡುತ್ತ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಮತ್ತಷ್ಟು ಉನ್ನತ ಹುದ್ದೆಯಲ್ಲಿ ಸೇವೆ ಮಾಡುವ ಆಸೆ ಹೊಂದಿದ್ದೇನೆ. ಎಲ್ಲರ ಸಹಕಾರವೂ ನನಗಿದೆ.

- ಸಂಗಮ್ಮ ಹಿರೇಮಠ ರ್‍ಯಾಂಕ್ ವಿದ್ಯಾರ್ಥಿನಿ ಹಗೇದಾಳ