ತರೀಕೆರೆಮನಸ್ಸಿಗೆ ಶಾಂತಿ ಬೇಕಿದ್ದರೆ ಇನ್ನೊಬ್ಬರಲ್ಲಿ ತಪ್ಪು ನೋಡಬೇಡ ಎನ್ನುವ ಶ್ರೀ ಶಾರದಾದೇವಿಯವರ ಹಿತನುಡಿಯನ್ನು ಎಲ್ಲರೂ ಜೀವನದಲ್ಲಿ ಪಾಲಿಸಬೇಕು ಎಂದು ಹರಿಹರ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಶ್ರೀ ಆತ್ಮಾ ದೀಪಾನಂದ ಮಹಾರಾಜ್ ಸ್ವಾಮೀಜಿ ಹೇಳಿದ್ದಾರೆ.

- ತರೀಕೆರೆಯಲ್ಲಿ ಶ್ರೀಮಾತೆ ಶಾರದಾ ದೇವಿ 173ನೇ ಜಯಂತ್ಯುತ್ಸವ ಆಚರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಮನಸ್ಸಿಗೆ ಶಾಂತಿ ಬೇಕಿದ್ದರೆ ಇನ್ನೊಬ್ಬರಲ್ಲಿ ತಪ್ಪು ನೋಡಬೇಡ ಎನ್ನುವ ಶ್ರೀ ಶಾರದಾದೇವಿಯವರ ಹಿತನುಡಿಯನ್ನು ಎಲ್ಲರೂ ಜೀವನದಲ್ಲಿ ಪಾಲಿಸಬೇಕು ಎಂದು ಹರಿಹರ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಶ್ರೀ ಆತ್ಮಾ ದೀಪಾನಂದ ಮಹಾರಾಜ್ ಸ್ವಾಮೀಜಿ ಹೇಳಿದ್ದಾರೆ.ಶ್ರೀ ಶಾರದಾ ಸತ್ಸಂಗದಿಂದ ಪಟ್ಟಣದ ಅರುಣೋದಯ ಶಾಲೆಯಲ್ಲಿ ಏರ್ಪಾಡಾಗಿದ್ದ ಶ್ರೀಮಾತೆ ಶಾರದಾದೇವಿ 173ನೇ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಶ್ರೀಮಾತೆ ಶಾರದಾ ದೇವಿ ಜೀವನದ ಸಂಕ್ಷಿಪ್ತ ಮಾಹಿತಿ ನೀಡಿದರು.

ಶ್ರೀ ಶಾರದ ಸತ್ಸಂಗದ ಮುಖ್ಯಸ್ಥರಾದ ಶಾಂತರೇವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವವಿಜೇತ ವೀರಸನ್ಯಾಸಿ ಸ್ವಾಮಿ ವಿವೇಕಾನಂದರು ತಿಳಿಸಿರುವಂತೆ ಮಾತೃ ದೇವೋಭವ, ಪಿತೃ ದೇವೋಭವ, ಆಚಾರ‍್ಯ ದೇವೋಭವ, ಅತಿಥಿ ದೇವೋಭವದ ಜೊತೆಗೆ ದರಿದ್ರ ದೇವೋಭವ, ದೀನ ದೇವೋಭವ, ದರಿದ್ರ ನಾರಾಯಣ ದೇವೋಭವವೆಂದು ಸತ್ಸಂಗದ ಸದಸ್ಯರೆಲ್ಲರೂ ನಂಬಿದ್ದು, ಪ್ರತಿ ವರ್ಷ ಶಾರದಾ ಜಯಂತಿಯಂದು ದೀನ ದಲಿತ ಅಬಲೆಯರನ್ನು ಗುರುತಿಸಿ ಗೌರವಿಸ ಲಾಗುತ್ತಿದೆ ಎಂದು ತಿಳಿಸಿದರು. ವಾಣಿ ಶ್ರೀನಿವಾಸ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಟಾಟಿಸಿದರು. ಸುತ್ತಮುತ್ತಲಿನ ನಲವತ್ತಕ್ಕೂ ಹೆಚ್ಚು ದೀನದಲಿತ ಅಬಲೆಯರನ್ನು ಗೌರವಿಸಿ, ಪೂಜಿಸಿ, ಹೊಸಉಡುಪ್ಟು ನೀಡಿ ಗೌರವಿಸಲಾಯಿತು.

ಸತ್ಸಂಗದ ಸದಸ್ಯರು ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಮಾಡಿದರು ಹಾಗೂ ಶ್ರೀ ಕನಕಮಹಿಳಾ ಸಮಾಜದ ಲಕ್ಷ್ಮಿ ವಿಶ್ವನಾಥ್ ಹಾಗೂ ಸಂಗಡಿಗರಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮಮತಾ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ವಿಜಯಕುಮಾರ್, ಪ್ರಕೃತಿ ಕಲಾ ಕುಟೀರದ ಉಮಾಪ್ರಕಾಶ್, ಶ್ಯಾಮಲಾ ಮಂಜುನಾಥ್, ಇನ್ನರ್ ವ್ಹೀಲ್ ಸದಸ್ಯೆಯರು, ಕು.ಮೋನಿಷ, ಹೇಮಾ, ರತ್ನಮ್ಮ ಹನುಮಂತಮ್ಮ, ಅರುಣೋದಯ ಶಾಲೆ ಶಿಕ್ಷಕಿಯರು ಹಾಗೂ ಅನೇಕ ಭಜನಾಮಂಡಲಿ ಸದಸ್ಯೆಯರು ಪಾಲ್ಗೊಂಡಿದ್ದರು. -

3ಕೆಟಿಆರ್.ಕೆ.8

ತರೀಕೆರೆಯಲ್ಲಿ ಶ್ರೀ ಶಾರದಾ ಸತ್ಸಂಗದಿಂದ ನಡೆದ ಶ್ರೀಮಾತೆ ಶಾರದಾ ದೇವಿ 173ನೇನೇ ಜಯಂತ್ಯುತ್ಸವದಲ್ಲಿ

ಹರಿಹರ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಶ್ರೀ ಆತ್ಮಾದೀಪಾನಂದ ಮಹಾರಾಜ್ ಸ್ವಾಮೀಜಿ, ಶ್ರೀ ಶಾರದ ಸತ್ಸಂಗಜ ಮುಖ್ಯಸ್ಥರಾದ ಶಾಂತ ರೇವಣ, ವಾಣಿ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.