ಹೊಸಕೋಟೆ: ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದಿಂದ ಆಯೋಜಿಸುವ ಇಫ್ತಿಯಾರ್ ಕೂಟ ಪರಸ್ಪರ ಬಾಂಧವ್ಯ ವೃದ್ಧಿಗೆ ಪೂರಕ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಆರ್‌ಎಸ್ ಸಭಾ ಭವನದಲ್ಲಿ ಅಲ್ಪಸಂಖ್ಯಾತ ಸಮುದಾಯ ಹಮ್ಮಿಕೊಂಡಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಸ್ಲಿಂರ ಪವಿತ್ರ ಹಬ್ಬಗಳಲ್ಲಿ ರಂಜಾನ್‌ ಹಬ್ಬ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಒಂದು ತಿಂಗಳಿನ ಕಾಲ ಉಪವಾಸ ಮಾಡುವುದರ ಮೂಲಕ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಇದರ ನಡುವೆ ಇಫ್ತಿಯಾರ್ ಕೂಟವನ್ನು ಆಯೋಜಿಸಿ ಮುಸ್ಲಿಂ ಸೇರಿದಂತೆ ಪ್ರೀತಿ ಪಾತ್ರರನ್ನು ಆಹ್ವಾನಿಸಿ ಪರಸ್ಪರ ಸ್ನೇಹ, ಪ್ರೀತಿ ವಿಶ್ವಾಸದ ಜೊತೆಗೆ ಬಾಂಧವ್ಯ ಬೆಸೆಯುವ ಕೆಲಸ ಮಾಡಲಾಗುತ್ತಿದೆ. ಹೊಸಕೋಟೆ ನಗರದಲ್ಲಿ ಆಯೋಜಿಸುವ ಇಫ್ತಿಯಾರ್ ಕೂಟಕ್ಕೆ ೪೦ ವರ್ಷಗಳ ಇತಿಹಾಸ ಇದೆ ಎಂದರು.

ಟೌನ್ ಬ್ಯಾಂಕ್ ಉಪಾಧ್ಯಕ್ಷ ಭೈರಿಜಾನ್ ಮಾತನಾಡಿ, ನಗರದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಸಹೋದರರಂತೆ ಜೀವಿಸುತ್ತಿದ್ದು, ನಾವು ಆಯೋಜಿಸುವ ಇಫ್ತಿಯಾರ್ ಕೂಟಕ್ಕೆ ಆಗಮಿಸಿ ನಮ್ಮ ಆಚರಣೆಗೆ ಶುಭಾಶಯ ಕೋರುವುದು ವಾಡಿಕೆ. ಅದರಂತೆ ಶಾಸಕ ಶರತ್ ಬಚ್ಚೇಗೌಡರು ಆಗಮಿಸಿ ಸಮುದಾಯಕ್ಕೆ ರಂಜಾನ್ ಶುಭಾಶಯ ಕೋರಿದ್ಧಾರೆ ಎಂದರು.

ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿವಿ.ಭೈರೇಗೌಡ, ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಅದ್ಯಕ್ಷ ಬಲ್ಪ್ ಮಂಜುನಾಥ್, ಉಪಾಧ್ಯಕ್ಷ ಭೈರಿಜಾನ್, ನಿರ್ದೇಶಕರಾದ ಗೋಪಾಲ್, ನಾಗರಾಜ್, ಸರೋಜಮ್ಮ, ವಿಷ್ಣು, ಬಿಎಂಆರ್‌ಡಿಎ ಸದಸ್ಯ ಎಚ್.ಎಂ.ಸುಬ್ಬರಾಜ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಅಮ್ಜದ್ ಬೇಗ್ ಸೇರಿದಂತೆ ಹಲ ಗಣ್ಯರು ಹಾಜರಿದ್ದರು.

ಪೋಟೋ: 25 ಹೆಚ್‌ಎಸ್‌ಕೆ 2


ಹೊಸಕೋಟೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಹಮ್ಮಿಕೊಂಡಿದ್ದ ಇಫ್ತಿಯಾರ್ ಕೂಟದಲ್ಲಿ ಶಾಸಕ ಶರತ್ ಬಚ್ಚೇಗೌಡ ಅವರನ್ನು ಟೌನ್ ಬ್ಯಾಂಕ್ ಉಪಾಧ್ಯಕ್ಷ ಭೈರಿಜಾನ್ ಸೇರಿದಂತೆ ಸಮುದಾಯದ ಮುಖಂಡರು ಸನ್ಮಾನಿಸಿದರು.