ಸಾರಾಂಶ
ಪಾಡಿ ಇಗ್ಗುತ್ತಪ್ಪ ದೇವಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಭಕ್ತ ಜನಸಂಘವನ್ನು ಟ್ರಸ್ಟ್ ಎಂದು ಬದಲಾಯಿಸುವಂತೆ ಶ್ರೀ ಇಗ್ಗುತ್ತಪ್ಪ ಭಕ್ತ ಜನ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಲಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಪಾಡಿ ಇಗ್ಗುತ್ತಪ್ಪ ದೇವಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಭಕ್ತ ಜನಸಂಘವನ್ನು ಟ್ರಸ್ಟ್ ಎಂದು ಬದಲಾಯಿಸುವಂತೆ ಶ್ರೀ ಇಗ್ಗುತ್ತಪ್ಪ ಭಕ್ತ ಜನ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಂಘದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಕ್ಷೇತ್ರ ವಾಸಕ್ಕೆ ಕಟ್ಟಡ ನಿರ್ಮಿಸುವ ಬಗ್ಗೆ ಹಾಗೂ ಇಗ್ಗುತಪ್ಪದೇವರ ಮೂಲಸ್ಥಾನವಾದ ಮಲ್ಮ ಬೆಟ್ಟದಲ್ಲಿ ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಿ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸೋಲಾರ್ ತಂತಿ ಬೇಲಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಚರ್ಚಿಸಲಾಯಿತು. ದೇವಾಲಯದಲ್ಲಿ ನಾಮಕರಣ, ಲಗ್ನಪತ್ರಿಕೆ ಮಾಡಿಸಲು ಆಸಕ್ತಿ ಹೊಂದಿದ ಭಕ್ತರು ಹೆಚ್ಚಿನ ಆಡಂಬರ ಮಾಡದೆ ದೇವಸ್ಥಾನದ ಕಟ್ಟು ಕಟ್ಟಳೆಗೆ ಒಳಪಟ್ಟು ಸರಳತೆಗೆ ಒತ್ತುಕೊಟ್ಟು ಆಚರಣೆ ಮಾಡುವಂತೆ ಸಭೆಯಲ್ಲಿ ಚರ್ಚಿಸಲಾಯಿತು.
ವೇದಿಕೆಯಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳಾದ, ಕಲ್ಯಾಣಂಡ ಟಿ ಅಪ್ಪಣ್ಣ, ಬಟ್ಟೀರ ಚೋದಮ್ಮಮೇದಪ್ಪ, ಅಂಜಪರವಂಡ ಎ.ಕುಶಾಲಪ್ಪ, ಪರದಂಡ ಕೆ.ನಾಣಯ್ಯ, ಅನ್ನಾಡಿಯಂಡ ಪಿ. ದಿಲೀಪ್, ಅಲ್ಲಾರಂಡ ಎಸ್ .ಅಯ್ಯಪ್ಪ, ಕುಲ್ಲೇಟಿರ ಅರುಣ್ ಬೇಬ, ಕುಟ್ಟಂಜೆಟ್ಟಿರ ಶ್ಯಾಮ್ ಬೋಪಣ್ಣ, ಕಾಂಡಂಡ ಎಂ.ಪೂವಯ್ಯ, ಕೇಲೇಟಿರೆ ರಂಜನ್, ಕಲಿಯಂಡ ಎಸ್.ಗಣೇಶ್, ಅಪ್ಪಾರಂಡ ಪಿ. ಮಂದಣ್ಣ ಹಾಗೂ ಮಾಜಿ ಅಧ್ಯಕ್ಷ ಕಾಂಡಂಡ ಜೋಯಪ್ಪ, ಪ್ರಮುಖರಾದ ಭಾಚಮಂಡ ರಾಜ ಪೂವಣ್ಣ, ಉದಿಯಂಡ ಮೋಹನ್, ಕಲಿಯಂಡ ಹ್ಯಾರಿ ಮಂದಣ್ಣ, ಮೇಚಂಡ ಚೇತನ್, ಮುಕ್ಕಾಟಿರ ಚೋಟು ಅಪ್ಪಯ್ಯ, ಬಾಚಮಂಡ ಲವ ಚಿಣ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಉಪಾಧ್ಯಕ್ಷ ಕಲ್ಯಾಟಂಡ ಟಿ. ಅಪ್ಪಣ್ಣ ವಂದಿಸಿದರು. ಭಕ್ತಾದಿಗಳು, ಸದಸ್ಯರು ಹಾಜರಿದ್ದರು.