ಇಳಕಲ್ಲ: ಸಂಭ್ರಮದ ಬನಶಂಕರದೇವಿ ರಥೋತ್ಸವ

| Published : Jan 26 2024, 01:48 AM IST

ಸಾರಾಂಶ

ಇಳಕಲ್ಲ: ಬಾದಾಮಿಯ ಬನಶಂಕರಿ ದೇವಿಯ ಅಕ್ಕನೆಂದು ಕರೆಯು ಇಳಕಲ್ಲಿನ ಮುನವಳ್ಳಿ ಪೇಟಯ ಬನಶಂಕರಿ ದೇವಸ್ಥಾನದ ವೈಭವದ ರಥೋತ್ಸವ ಗುರುವಾರ ಸಂಜೆ ೬ ಗಂಟೆಗೆ ಅನೇಕ ವಾದಮೇಳ, ಸಹಸ್ರಾರು ಭಕ್ತರ ಮಧ್ಯೆ ಅತ್ಯಂತ ವಿಜ್ರಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಬಾದಾಮಿಯ ಬನಶಂಕರಿ ದೇವಿಯ ಅಕ್ಕನೆಂದು ಕರೆಯು ಇಳಕಲ್ಲಿನ ಮುನವಳ್ಳಿ ಪೇಟಯ ಬನಶಂಕರಿ ದೇವಸ್ಥಾನದ ವೈಭವದ ರಥೋತ್ಸವ ಗುರುವಾರ ಸಂಜೆ ೬ ಗಂಟೆಗೆ ಅನೇಕ ವಾದಮೇಳ, ಸಹಸ್ರಾರು ಭಕ್ತರ ಮಧ್ಯೆ ಅತ್ಯಂತ ವಿಜ್ರಂಭಣೆಯಿಂದ ಜರುಗಿತು.

ರಥೋತ್ಸವಕ್ಕೂ ಮುಂಚೆ ಪಾಲಕಿಯಲ್ಲಿ ಬನಶಂಕರಿ ದೇವರ ಉತ್ಸವ ಮೂರ್ತಿಯನ್ನು ಸಮಾಜ ಬಾಂಧವರು ಪಲ್ಲಕ್ಕಿಯಲ್ಲಿ ತೆಗೆದುಕೊಂಡು ನಗರದ ಪ್ರಮುಖ ಬೀದಗಳಲ್ಲಿ ಮೆರವಣಿಗೆ ನಡೆಸಿ ನಂತರ ರಥದಲ್ಲಿ ಬನಶಂಕರಿ ಮೂರ್ತಿಯನ್ನು ಇಡಲಾಯಿತು. ಭಕ್ತರು ಬನಶಂಕರಿ ದೇವಿ ನಿನ್ನ ಪಾದಕ ಶಂಭುಕೋ ಎಂದು ಘೋಷಣೆ ಮೂಲಕ ರಥವನ್ನು ಎಳೆದರು. ಸಮಾಜದ ಹಿರಿಯರಾದ ಪಂಪಣ್ಣ ಕಾಳಗಿ, ಬಾಬಣ್ಣ ಸಜ್ಜಿ ಹಾಗು ಇತರರು ಜಾತ್ರೆಯ ನೇತೃತ್ವ ವಹಿಸಿದ್ದರು. ನಗರ ಪಿಎಸ್‌ಐ ನಾಯಕ ಬಂದೊ ಬಸ್ತ್‌ ಏರ್ಪಡಿಸಿದ್ದರು.