ವಕ್ಫ್‌ ಅಧಿಕಾರಿ ವಿರುದ್ಧ ಡೆತ್‌ ಫ್ರೀಜರ್‌ ಹಂಚಿಕೆಯಲ್ಲಿ ಅಕ್ರಮ ಆರೋಪ

| Published : Jan 23 2025, 12:47 AM IST

ವಕ್ಫ್‌ ಅಧಿಕಾರಿ ವಿರುದ್ಧ ಡೆತ್‌ ಫ್ರೀಜರ್‌ ಹಂಚಿಕೆಯಲ್ಲಿ ಅಕ್ರಮ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ವಕ್ಫ್ ಬೋರ್ಡ್ ಅಧಿಕಾರಿ ಜರೀನಾ ಬೇಗಂರವರ ಬಗ್ಗೆ ಅನುಮಾನ ಇರುವುದರಿಂದ ಜಿಲ್ಲೆಯ ವಕ್ಫ್‌ ಬೋರ್ಡ್‌ನಲ್ಲಿ ಇಲ್ಲಿವರೆಗೂ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಬಿ.ಎಚ್. ಸುಲೇಮಾನ್ ಆಗ್ರಹಿಸಿದರು. ತಿಂಗಳಿಗೆ ಒಮ್ಮೆ ಸಲಹಾ ಸಮಿತಿಯ ಸಭೆಯನ್ನು ಕರೆಯುವ ಪದ್ಧತಿ ಇದ್ದು, ಅದನ್ನು ಉಲ್ಲಂಘಿಸಿದ್ದಾರೆ. ರಾಜ್ಯದಿಂದ ೦೮ ಡೆತ್ ಫ್ರೀಜರ್‌ಗಳನ್ನು ತಾಲೂಕುವಾರು ವಿತರಿಸಲು ರಾಜ್ಯ ವಕ್ಫ್‌ ಬೋರ್ಡ್‌ನಿಂದ ಹಾಸನ ಜಿಲ್ಲಾ ವಕ್ಫ್‌ ಬೋರ್ಡ್‌ಗೆ ಬಂದಿರುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ವಕ್ಫ್ ಬೋರ್ಡ್ ಅಧಿಕಾರಿ ಜರೀನಾ ಬೇಗಂರವರ ಬಗ್ಗೆ ಅನುಮಾನ ಇರುವುದರಿಂದ ಜಿಲ್ಲೆಯ ವಕ್ಫ್‌ ಬೋರ್ಡ್‌ನಲ್ಲಿ ಇಲ್ಲಿವರೆಗೂ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಬಿ.ಎಚ್. ಸುಲೇಮಾನ್ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಹಾಸನ ಜಿಲ್ಲೆಯ ವಕ್ಸ್ ಬೋರ್ಡ್‌ನಲ್ಲಿ ೨೧ ಜನರ ಸಲಹೆ ಸಮಿತಿ ಇದ್ದರೂ ಸಹ ಲೆಕ್ಕಕ್ಕೆ ಉಂಟು ಆಟಕ್ಕೆ ಇಲ್ಲ ಎನ್ನುವಂತೆ ವಕ್ಫ್‌ ಬೋರ್ಡಿನ ಅಧ್ಯಕ್ಷರೂ ಮತ್ತು ಜಿಲ್ಲಾ ವಕ್ಫ್‌ ಬೋರ್ಡ್ ಅಧಿಕಾರಿಯಾದ ಜರೀನಾ ಬೇಗಂರವರು ಸೇರಿಕೊಂಡು ಜಿಲ್ಲಾ ವಕ್ಫ್‌ ಬೋರ್ಡಿನಲ್ಲಿ ನಡೆಯುತ್ತಿರುವಂತಹ ಯಾವುದೇ ವಿಚಾರಗಳನ್ನು ಸಲಹ ಸಮಿತಿಗಳಿಗೆ ತಿಳಿಸದೇ ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದು, ಇದರಿಂದ ಸಲಹಾ ಸಮಿತಿಯ ನಿರ್ದೇಶಕರುಗಳಿಗೆ ಉಪಾಧ್ಯಕ್ಷರುಗಳಿಗೆ ಬಹಳಷ್ಟು ಅವಮಾನವನ್ನು ಮಾಡಿರುತ್ತಾರೆ ಎಂದು ದೂರಿದರು.

ಸಲಹಾ ಸಮಿತಿಯ ೨೧ ಜನರ ಆಯ್ಕೆಯಾಗಿ ೨೬ ತಿಂಗಳು ಕಳೆದರೂ ಇದುವರೆಗೆ ೪ ಸಭೆಗಳನ್ನು ಮಾಡಿರುತ್ತಾರೆ. ಹಾಗೂ ಯಾವುದೇ ಸಭಾ ವಿಷಯಗಳನ್ನು ಸಭೆಯಲ್ಲಿ ಚರ್ಚಿಸದೆ ತಮಗೆ ಇಷ್ಟ ಬಂದಂತೆ ತೀರ್ಮಾನವನ್ನು ತೆಗೆದುಕೊಂಡಿರುತ್ತಾರೆ. ತಿಂಗಳಿಗೆ ಒಮ್ಮೆ ಸಲಹಾ ಸಮಿತಿಯ ಸಭೆಯನ್ನು ಕರೆಯುವ ಪದ್ಧತಿ ಇದ್ದು, ಅದನ್ನು ಉಲ್ಲಂಘಿಸಿದ್ದಾರೆ. ದಿನಾಂಕ: ೨೫/೧೦/೨೦೨೪ರಂದು ರಾಜ್ಯದಿಂದ ೦೮ ಡೆತ್ ಫ್ರೀಜರ್‌ಗಳನ್ನು ತಾಲೂಕುವಾರು ವಿತರಿಸಲು ರಾಜ್ಯ ವಕ್ಫ್‌ ಬೋರ್ಡ್‌ನಿಂದ ಹಾಸನ ಜಿಲ್ಲಾ ವಕ್ಫ್‌ ಬೋರ್ಡ್‌ಗೆ ಬಂದಿರುತ್ತದೆ. ಆದರೆ ಈ ಡೆತ್ ಫ್ರೀಜರ್‌ಗಳು ಹಾಸನ ಜಿಲ್ಲೆಗೆ ಬಂದಿರುವುದಾಗಲೀ ಅಥವಾ ಇವುಗಳನ್ನು ಯಾವ ತಾಲೂಕುಗಳಿಗೆ ಹಂಚಬೇಕೆಂದು ಸಲಹಾ ಸಮಿತಿಗೆ ತಿಳಿಸದೆ ತಮಗೆ ಮನಬಂದಂತೆ ಅಧ್ಯಕ್ಷರು ಹಾಗೂ ಜಿಲ್ಲಾ ವಕ್ಫ್‌ ಬೋರ್ಡ್ ಅಧಿಕಾರಿಯಾದ ಜರೀನಾ ಬೇಗಂರವರು ತಾಲ್ಲೂಕಿನ ಹಳ್ಳಿಗಳಿಗೆ ಡೆತ್ ಫ್ರೀಜರ್‌ಗಳನ್ನು ಹಂಚಿಕೆ ಮಾಡಿರುತ್ತಾರೆ. ಇದರಲ್ಲಿ ಬಹಳಷ್ಟು ಭ್ರಷ್ಟಾಚಾರಗಳು ನಡೆದಿರುವ ಬಗ್ಗೆ ಅನುಮಾನ ಇದ್ದು ತಾಲೂಕಿನ ಪ್ರಮುಖ ಮಸೀದಿಗಳಿಗೆ ಹಂಚಬೇಕಾದ ಡೆತ್ ಫ್ರೀಜರ್‌ಗಳನ್ನು ಸಲಹ ಸಮಿತಿಗೆ ಗೊತ್ತಿಲ್ಲದೆ ಹಂಚಿರುವುದು ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಂತೆ ಆಗಿದೆ. ೨೬ ತಿಂಗಳು ಕಳೆದರೂ ಜಿಲ್ಲಾ ವಕ್ಫ್‌ ಬೋರ್ಡ್‌ನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿರುವುದಿಲ್ಲ. ತಾಲೂಕುವಾರು ಮಸೀದಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಆಯ್ಕೆ ಆಗಿರುವುದಿಲ್ಲ. ಸುಮಾರು ವರ್ಷದಿಂದ ಅರ್ಜಿಯನ್ನು ಸಲ್ಲಿಸಿದ ಮಸೀದಿ ಅಧ್ಯಕ್ಷರುಗಳಿಗೆ ಅರ್ಜಿಯನ್ನು ವಿಲೇವಾರಿ ಮಾಡಿರುವುದಿಲ್ಲ ಹಾಗೂ ವಕ್ಫ್‌ ಬೋರ್ಡಿನಿಂದ ಮಸೀದಿಗಳಿಗೆ ಯಾವುದೇ ಮಾಹಿತಿಯನ್ನು ಕೊಟ್ಟಿರುವುದಿಲ್ಲ. ಅಧಿಕಾರಿಯವರು ಸಬೂಬು ಹೇಳಿಕೊಂಡು ಮುಂದೂಡುತ್ತಿದ್ದಾರೆ. ಜಿಲ್ಲಾ ವಕ್ಫ್‌ ಬೋರ್ಡ್ ಅಧಿಕಾರಿ ಜರೀನಾ ಬೇಗಂರವರು ಬಿ.ಪಿ.ಎಲ್ ಕಾರ್ಡ್ ಹೊಂದಿದ್ದು, ಜಿಲ್ಲಾ ವಕ್ಫ್ ಬೋರ್ಡ್‌ನಲ್ಲಿ ಸುಮಾರು ೩೦ ವರ್ಷಗಳಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇವರು ೨೦೧೨ರಿಂದ ೨೦೨೪ರವರೆಗೆ ಪಡಿತರ ಪದಾರ್ಥಗಳನ್ನು ಪಡೆದು ರು. ೧,೩೫,೬೩೮ ರು.ಗಳ ದಂಡವನ್ನು ಸರ್ಕಾರಕ್ಕೆ ಪಾವತಿಸಿರುತ್ತಾರೆ. ಅಲ್ಲದೆ ಇವರು ೩೦ ವರ್ಷಗಳಿಂದ ಜಿಲ್ಲಾ ವಕ್ಫ್ ಬೋರ್ಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇಲ್ಲಿಯವರೆಗೆ ಏನೆಲ್ಲಾ ಭ್ರಷ್ಟಾಚಾರ ಮಾಡಿರುವ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಿ ತಮ್ಮಲ್ಲಿ ಈ ಮೂಲಕ ಕೋರಿಕೊಳ್ಳುತ್ತೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸುಭೇರ್ ಅಹಮದ್, ಅನ್ಸರ್ ಪಾಷಾ, ಸಬ್ಬಿ, ಅಬ್ದೂಲ್ ರಫೀಕ್ ಇತರರು ಪಾಲ್ಗೊಂಡಿದ್ದರು.