ಕನ್ನಡಪ್ರಭ ವಾರ್ತೆ ಸಿದ್ದಾಪುರ
ಅಕ್ರಮವಾಗಿ ಬೀಟೆ ಮರ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿ, ಸುಮಾರು ₹10 ಲಕ್ಷ ರು. ಮೌಲ್ಯದ ಬೀಟೆ ನಾಟಾಗಳನ್ನು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ವಿರಾಜಪೇಟೆ ತಾಲೂಕಿನ ಕದನೂರು ಗ್ರಾಮದ ನಿವಾಸಿಗೆ ಸೇರಿದ ಕಾಫಿ ತೋಟದಲ್ಲಿ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಈ ವೇಳೆ 7.108 ಘನ ಮೀಟರ್ ಪ್ರಮಾಣದ ಬೀಟೆ ನಾಟಾ ಪತ್ತೆಯಾಗಿದ್ದು, ಅವುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ, ಒಂದು ಸ್ಕೂಟಿ ಮತ್ತು ಒಂದು ಬೈಕ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟದ ಮಾಲೀಕ ಸಹಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಬಲೆ ಬೀಸಿದೆ.ಡಿಎಫ್ಒ ಜಗನ್ನಾಥ್ ಅವರ ಮಾರ್ಗದರ್ಶನದಲ್ಲಿ ಆರ್ ಎಫ್ ಒ ಶಿವರಾಮ್, ಡಿಆರ್ ಎಫ್ ಒ ರಾಘವ, ಶ್ರೀನಿವಾಸ್, ಲೋಕೇಶ್ ಹಾಗೂ ಇಲಾಖೆ ವಾಹನ ಚಾಲಕರಾದ ಆಶೋಕ್, ನಂದೀಶ್ ಮತ್ತು ಸಿಬ್ಬಂದಿ ಹರೀಶ್, ಮಹೇಶ್, ಸುರೇಶ್, ಮುರುಗ, ಅನಿಲ್, ಮೊಣ್ಣಪ್ಪ, ಹರ್ಷಿತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಅಕ್ರಮ ಬೀಟೆ ಮರ ಸಾಗಾಟ ಪತ್ತೆ: 10 ಲಕ್ಷ ರು. ಮೌಲ್ಯದ ನಾಟಾ, ವಾಹನ ವಶ
ಅಕ್ರಮವಾಗಿ ಬೀಟೆ ಮರ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿ, ಸುಮಾರು ₹10 ಲಕ್ಷ ರು. ಮೌಲ್ಯದ ಬೀಟೆ ನಾಟಾಗಳನ್ನು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.