ಸಾರಾಂಶ
ಕುಷ್ಟಗಿ ಪಟ್ಟಣದಲ್ಲಿನ ನಿರ್ಮಿಸುತ್ತಿರುವ ಕಾಮಗಾರಿಗೆ ಅಡೆತಡೆಯುಂಟು ಮಾಡುತ್ತಿರುವ ಅಕ್ರಮ ಕಟ್ಟಡಗಳ ಒತ್ತುವರಿ ತೆರವುಗೊಳಿಸುವ ಮೂಲಕ ಕಾಮಗಾರಿ ನಡೆಸಲು ತೀರ್ಮಾನಿಸಲಾಯಿತು.
ಕುಷ್ಟಗಿ:
ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮಹಾಂತೇಶ ಕಲಬಾವಿ ಅಧ್ಯಕ್ಷತೆಯಲ್ಲಿ ತುರ್ತು ಸಾಮಾನ್ಯ ಸಭೆ ನಡೆಯಿತು.ಸಭೆಯಲ್ಲಿ ಪಟ್ಟಣದಲ್ಲಿನ ನಿರ್ಮಿಸುತ್ತಿರುವ ಕಾಮಗಾರಿಗೆ ಅಡೆತಡೆಯುಂಟು ಮಾಡುತ್ತಿರುವ ಅಕ್ರಮ ಕಟ್ಟಡಗಳ ಒತ್ತುವರಿ ತೆರವುಗೊಳಿಸುವ ಮೂಲಕ ಕಾಮಗಾರಿ ನಡೆಸಲು ತೀರ್ಮಾನಿಸಲಾಯಿತು. ಪಟ್ಟಣದಲ್ಲಿ ಸ್ವಚ್ಛತೆ, ಸುತ್ತಮುತ್ತಲು ಇರುವ ರಾಜಕಾಲುವೆಗಳ ಹೂಳೆತ್ತಿಸುವ ಮೂಲಕ ಸ್ವಚ್ಛತೆಗೆ ಕ್ರಮಕೈಗೊಳ್ಳುವುದು, ರಾಜ ಕಾಲುವೆ ನಿರ್ಮಾಣದ ಕುರಿತು ಚರ್ಚಿಸಲಾಯಿತು.
ಪುರಸಭೆಯಲ್ಲಿ ಕೆಲಸ ನಿರ್ವಹಿಸಲು ಕಡಿಮೆ ಸಿಬ್ಬಂದಿಗಳಿದ್ದು ಕೆಲಸಗಳು ಸಮರ್ಪಕವಾಗಿ ಸಾಗುತ್ತಿಲ್ಲ. ತಾತ್ಕಾಲಿಕವಾಗಿ ಇನ್ನಷ್ಟು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಹೈಮಾಸ್ಟ್ ದೀಪ ಹಾಗೂ ಸೋಲಾರ ಲೈಟ್ ಅಳವಡಿಸಬೇಕು. ಸ್ಮಶಾನದ ಹತ್ತಿರ ಲೈಟ್ ಹಾಕಿಸುವುದು, ಸರ್ಕಾರಿ ಶೌಚಾಲಯ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡುತ್ತಿದ್ದು ರಕ್ಷಿಸುವುದು, ಸಾರ್ವಜನಿಕರು ಮನೆಗಳಿಗೆ ವಿದ್ಯುತ್ ಸೌಲಭ್ಯ ನೀಡಲು ಕೆಇಬಿ ತಕರಾರು ತೆಗೆದಿದ್ದು ಈ ಕುರಿತು ಮುಖ್ಯಾಧಿಕಾರಿಗಳು ಕೆಇಬಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದು ಸೇರಿದಂತೆ ಅನೇಕ ಚರ್ಚೆಗಳು ನಡೆದವು. ನೂತನವಾಗಿ ನಿರ್ಮಿಸುತ್ತಿರುವ ಕೆಲ ಲೇಔಟ್‌ಗಳಿಗೆ ಅನುಮೋದನೆ ನೀಡಲಾಯಿತು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ಬೀಳಗಿ, ಉಪಾಧ್ಯಕ್ಷೆ ನಾಹಿನಾಬೇಗಂ ಮುಲ್ಲಾ ಸೇರಿದಂತೆ ಪುರಸಭೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಇದ್ದರು..