ಅಕ್ರಮ ಗೋಸಾಗಟ: ಪೊಲೀಸ್ ದಾಳಿ
KannadaprabhaNewsNetwork | Published : Nov 02 2023, 01:00 AM IST
ಅಕ್ರಮ ಗೋಸಾಗಟ: ಪೊಲೀಸ್ ದಾಳಿ
ಸಾರಾಂಶ
ಜಾನುವಾರುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ಆಟೋಗಳ ಮೇಲೆ ದಾಳಿ ಮಾಡಿದ ಪೊಲೀಸರು 21 ಜಾನುವಾರುಗಳನ್ನು ರಕ್ಷಣೆ ಮಾಡಿರುವ ಘಟನೆ ಕೆಆರ್ ಎಸ್ ಠಾಣೆ ವ್ಯಾಪ್ತಿಯ ಬಳಿ ನಡೆದಿದೆ.
ಶ್ರೀರಂಗಪಟ್ಟಣ: ಜಾನುವಾರುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ಆಟೋಗಳ ಮೇಲೆ ದಾಳಿ ಮಾಡಿದ ಪೊಲೀಸರು 21 ಜಾನುವಾರುಗಳನ್ನು ರಕ್ಷಣೆ ಮಾಡಿರುವ ಘಟನೆ ಕೆಆರ್ ಎಸ್ ಠಾಣೆ ವ್ಯಾಪ್ತಿಯ ಬಳಿ ನಡೆದಿದೆ. ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿ.ಎಸೈ ಬಸವರಾಜು ಬುಧವಾರ ಬೆಳಗ್ಗೆ ಖಚಿತ ಮಾಹಿತಿ ಕೆ.ಆರ್.ಸಾಗರ -ಮೈಸೂರು ರಸ್ತೆಯ ಪಂಪ್ ಹೌಸ್ ಸರ್ಕಲ್ ಬಳಿ ಇಲವಾಲ ಕಡೆಯಿಂದ ಬರುತ್ತಿದ್ದ 6 ಗೂಡ್ಸ್ ಆಟೋಗಳನ್ನು ತಡೆದು ತಪಾಸಣೆ ನಡೆಸಿದಾಗ ಗೂಡ್ಸ್ ಆಟೋದಲ್ಲಿ 21 ಜಾನವಾರು ಗಳನ್ನು ಕ್ರೂರವಾಗಿ ತುಂಬಿರುವುದನ್ನು ಕಂಡು ಬಂದು ಜಾನುವಾರು ಗಳನ್ನು ರಕ್ಷಣೆ ಮಾಡಿದ್ದಾರೆ. ಜಾನುವಾರುಗಳನ್ನು ಕೆ.ಆರ್.ನಗರ ಕಡೆಯ ಚುಂಚನ ಕಟ್ಟೆಯಿಂದ ತಂದಿರುವುದಾಗಿ ಚಾಲಕರು ತಿಳಿಸಿದ್ದು, ಪೊಲೀಸರು. ಗೂಡ್ಸ್ ಚಾಲಕರ ವಿಚಾರಣೆ ಮಾಡಿದಾಗ ಹಸು, ಎಮ್ಮೆ, ಎತ್ತು ಗಳನ್ನು ಯಾವುದೇ ಅನುಮತಿ ಪತ್ರ ಪಡೆಯದೆ ಕಸಾಯಿಖಾನೆಗೆ ಕೊಂಡ್ಯುಯುತ್ತಿದ್ದುದಾಗಿ ಗೊತ್ತಾಗಿದೆ. ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಚಾಲಕರಾದ ಮಂಜುನಾಥ, ನದೀಮ್, ಬೀಮರಾಜು, ಸಾಬ್‌ವುದ್ದಿನ್, ಬಸವರಾಜು ಮತ್ತು ಅಮಿತ್ ಪಾಷ ಎಂಬುವರನ್ನು ಬಂಧಿಸಿ ವಶಕ್ಕೆ ಪಡೆದು ಶ್ರೀರಂಗಪಟ್ಟಣ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡೆಸಿದ್ದಾರೆ. ಜಾನುವಾರುಗಳನ್ನು ಸ್ಥಳೀಯ ಪಶು ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿ ನೀಡಿದ ದಾಖಲಾತಿಯಂತೆ ಜಾನುವಾರುಗಳನ್ನು ಮಂಡ್ಯದ ಕಾಮಧೇನು ಗೋ ಶಾಲೆಗೆ ವಶಕ್ಕೆ ಪೊಲೀಸರು ನೀಡಿದ್ದಾರೆ. -------------- 1ಕೆಎಂಎನ್ ಡಿ31 ಗೂಡ್ಸ್ ಆಟೋಗಳಲ್ಲಿ ಜಾನುವಾರುಗಳನ್ನು ತುಂಬಿರುವುದು.