ಹಾಸನ ನಗರದ ಪೆನ್ಷನ್ ಮೊಹಲ್ಲಾ ಹಾಗೂ ಸುತ್ತಮುತ್ತ ಗೋವುಗಳನ್ನು ಕಡಿದು ತೂಗು ಹಾಕಿದ ಘಟನೆಗಳು ನಡೆದರೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು. ನೆನ್ನೆ ರಾತ್ರಿ ಗೋಚರ್ಮ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರಿಗೆ ಒಪ್ಪಿಸಿದ ಬಳಿಕ ಸಿಟಿ ಪಿಎಸ್‌ಐ ಸುಮೊಟೊ ಕೇಸು ದಾಖಲಿಸಿರುವುದನ್ನು ಸ್ವಾಗತಿಸಿದರೂ, ನಿರಂತರವಾಗಿ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಏಕೆ ಇವರ ಮೇಲೆ ಏಕೆ ಸ್ವಯಂ ಪ್ರೇರಿತ ಪ್ರಕರಣಗಳು ದಾಖಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಪ್ರಭವಾರ್ತೆ ಹಾಸನ
ನಗರದಲ್ಲಿ ಗೋವುಗಳ ಅಕ್ರಮ ಸಾಗಣೆ ಹಾಗೂ ಕಸಾಯಿಖಾನೆಗೆ ಕರೆದೊಯ್ಯುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಎಸ್ಪಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಸಿದೆ.ನಗರದ ಎಸ್ಪಿ ಕಚೇರಿ ಮುಂದೆ ಶ್ರೀರಾಮಸೇನೆ ರಾಜ್ಯ ಉಪಾಧ್ಯಕ್ಷ ಹೇಮಂತ್ ಜಾನೆಕೆರೆ ಮಾತನಾಡಿ, ನಗರದ ಶ್ರೀರಾಮ ಸೇನೆಯ ನಗರಾಧ್ಯಕ್ಷ ದರ್ಶನ್ ಹಾಗೂಜಿಲ್ಲಾಧ್ಯಕ್ಷ ಧರ್ಮ ನಾಯಕ್ ಅವರು ಒಂದು ದಿನದ ಹಿಂದೆ 350ಕ್ಕೂ ಹೆಚ್ಚು ಗೋಮಾತೆಯ ಚರ್ಮಗಳನ್ನು ವಾಹನ ಸಮೇತ ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಲಾಗಿದೆ. ಕಳೆದ ಮೂರು ತಿಂಗಳಿಂದ ಪ್ರತಿದಿನವೂ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರನೀಡಿದರೂ ಇದುವರೆಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಹಾಸನ ನಗರದ ಪೆನ್ಷನ್ ಮೊಹಲ್ಲಾ ಹಾಗೂ ಸುತ್ತಮುತ್ತ ಗೋವುಗಳನ್ನು ಕಡಿದು ತೂಗು ಹಾಕಿದ ಘಟನೆಗಳು ನಡೆದರೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು. ನೆನ್ನೆ ರಾತ್ರಿ ಗೋಚರ್ಮ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರಿಗೆ ಒಪ್ಪಿಸಿದ ಬಳಿಕ ಸಿಟಿ ಪಿಎಸ್‌ಐ ಸುಮೊಟೊ ಕೇಸು ದಾಖಲಿಸಿರುವುದನ್ನು ಸ್ವಾಗತಿಸಿದರೂ, ನಿರಂತರವಾಗಿ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಏಕೆ ಇವರ ಮೇಲೆ ಏಕೆ ಸ್ವಯಂ ಪ್ರೇರಿತ ಪ್ರಕರಣಗಳು ದಾಖಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಮ್ಮ ಶ್ರೀರಾಮಸೇನೆ ಕಾರ್ಯಕರ್ತರು ಹಿಡಿದಿರುವ ಗೋವುಗಳನ್ನು ನಾವೆ ಹಿಡಿದಿದ್ದೀವಿ! ನಾವೇ ಮುಂದಾಳತ್ವವಹಿಸಿ ತೆಗೆದುಕೊಂಡಿರುವುದಾಗಿ ಎಂದುಸುಮೋಟೊ ಕೇಸು ದಾಖಲಿಸಿರುವುದಕ್ಕೆ ನಮಗೆ ಎಷ್ಟು ನೋವಾಗುತ್ತಿದೆ! ಗೋವು ಸಾಗಣಿಕೆ ಮಾಡುವ ಕಳ್ಳರು ನಿಮಗೆ ಕಾಣಿಸುತ್ತಿಲ್ಲವೇ? ನಾವುಗಳು ಹಿಡಿದು ಕೊಟ್ಟಾಗ ಮಾತ್ರ ಕೇಸು ದಾಖಲಿಸುತ್ತೀರಾ, ನೈತಿಕತೆ ಇದ್ದರೇ ಈಗಲೇ ಪೆನ್ಷನ್ ಮೊಹಲ್ಲಾ ಸುತ್ತ ಇರುವ ಏರಿಯಕ್ಕೆ ಹೋಗಿ ಪರಿಶೀಲಿಸಿ, ಹಾಸನದಲ್ಲೇ ನೂರಕ್ಕೂ ಹೆಚ್ಚು ಕಸಾಯಿ ಖಾನೆಗಳಿವೆ. ರಸ್ತೆ ಬದಿಯಲ್ಲೇ ಗೋವುಗಳನ್ನು ಕಡಿದು ತೂಗು ಹಾಕಲಾಗುತ್ತಿದೆ. ಇಂತಹ ಸ್ಥಳಗಳ ಮೇಲೆ ದಾಳಿ ನಡೆಸಿ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದರೇ ಶ್ರೀರಾಮ ಸೇನೆಯಿಂದ ಎಸ್ಪಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.ಶ್ರೀರಾಮಸೇನೆ ಜಿಲ್ಲಾ ಅಧ್ಯಕ್ಷ ಧರ್ಮನಾಯಕ್ ಮತ್ತು ನಗರಾಧ್ಯಕ್ಷ ದರ್ಶನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.