ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ ಬಳಿ ನಡೆಯುತ್ತಿರುವ ಅಕ್ರಮ ಸ್ಫೋಟದಿಂದ ಮನೆ ಮತ್ತು ಜಮೀನಲ್ಲಿರುವ ಬೆಳೆ ಹಾನಿಯಾಗುತ್ತಿವೆ ಎಂದು ಆರೋಪಿಸಿ, ರೈತನೊಬ್ಬ ಕುಟುಂಬ ಸಹಿತ ತಾಲೂಕು ಕಚೇರಿ ಗೇಟುಗಳಿಗೆ ರಾಸುಗಳ ಕಟ್ಟಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಜಕ್ಕನಹಳ್ಳಿ ಬಳಿ ನಡೆಯುತ್ತಿರುವ ಅಕ್ರಮ ಸ್ಫೋಟದಿಂದ ಮನೆ ಮತ್ತು ಜಮೀನಲ್ಲಿರುವ ಬೆಳೆ ಹಾನಿಯಾಗುತ್ತಿವೆ ಎಂದು ಆರೋಪಿಸಿ, ರೈತನೊಬ್ಬ ಕುಟುಂಬ ಸಹಿತ ತಾಲೂಕು ಕಚೇರಿ ಗೇಟುಗಳಿಗೆ ರಾಸುಗಳ ಕಟ್ಟಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಗ್ರಾಮದ ಮನೋಜ್ ತಮ್ಮ ಪತ್ನಿ ಮಕ್ಕಳೊಂದಿಗೆ ಕಚೇರಿ ಮುಂದೆ ನಿಂತು ತಮ್ಮ ಮನೆ ಮತ್ತು ಜಮೀನುಗಳ ಸುತ್ತಲು ಇರುವ ಕ್ರಷರ್‌ಗಳಿಂದ ಆಗುತ್ತಿರುವ ಹಾನಿ ಕುರಿತು ಸಾರ್ವಜನಿಕರೊಂದಿಗೆ ತಮ್ಮ ಅಳಲು ತೋಡಿಕೊಂಡರು.
ಜಕ್ಕನಹಳ್ಳಿಯ ನನ್ನ ಅಜ್ಜಿ ನಿಂಗಮ್ಮ ಅವರ ಹೆಸನಲ್ಲಿರುವ ಸರ್ವೇ ನಂ 83ರಲ್ಲಿ ಜಮೀನಿದ್ದು, 1 ಎಕರೆ ಜಮೀನಿನಲ್ಲಿ ನಾನು ಮತ್ತು ನನ್ನ ಕುಟುಂಬ ಸಣ್ಣ ಮನೆ ಕಟ್ಟಿಕೊಂಡು ವ್ಯಸಾಯ ಮಾಡುತ್ತಿದ್ದೇವೆ. ಜೊತೆಗೆ ಹಸುಕರುಗಳ ಕಟ್ಟಿಕೊಂಡಿದ್ದೇವೆ. ನಮ್ಮ ಜಮೀನು ಸುತ್ತಲೂ ಅಕ್ರಮ ಗಣಿಗಾರಿಕೆ ಕ್ರಷರ್‌ಗಳು ತಲೆ ಎತ್ತಿಕೊಂಡು ರಾತ್ರೋರಾತ್ರಿ ಭಾರೀ ಸಿಡಿಮದ್ದುಗಳ ಸಿಡಿಸಿ ಮನೆ ಗೋಡೆಗಳು ಬಿರುಕುಗೊಂಡು ಮನೆ ಜಖಂಗೊಂಡಿದೆ. ಈ ವಿಷಯವಾಗಿ ಈಗಾಗಲೇ ಕೋರೆ ನಡೆಸುತ್ತಿರುವವರನ್ನು ಪ್ರಶ್ನಿಸಿದ್ದಕ್ಕೆ ನನ್ನ ಒಂದು ಹಸುವನ್ನು ಸಾಯಿಸಿ ಎಲ್ಲೋ ಮುಚ್ವಿ ಹಾಕಿದ್ದಾರೆ ಎಂದು ಆರೋಪಿಸಿದರು.ಅಲ್ಲದೇ, ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮೇಲೆ ಗಣಿ ಧೂಳುಬಿದ್ದು ಬೆಳೆ ಹಾನಿಯಾಗಿ ದನಕರುಗಳಿಗೆ ಮೇವಿಲ್ಲದಂತಾಗುತ್ತಿದೆ. ಈ ಬಗ್ಗೆ ಹಲವು ಬಾರಿ ತಾಲೂಕು ಕಚೇರಿಗೆ ಬಂದು ದೂರು ನೀಡಿದರೂ ತಹಸೀಲ್ದಾರ್ ಕೂಡ ಯಾವ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ದನಕರುಗಳ ಸಮೇತ ತಾಲೂಕು ಕಚೇರಿ ಗೇಟುಗಳಿಗೆ ಕಟ್ಟಿ ಪ್ರತಿಭಟಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.