ಅಕ್ರಮ ಹೋಂ ಮೇಡ್‌ ವೈನ್‌ ಮಾರಾಟ: ವ್ಯಕ್ತಿ ಬಂಧನ

| Published : Mar 19 2024, 12:46 AM IST

ಅಕ್ರಮ ಹೋಂ ಮೇಡ್‌ ವೈನ್‌ ಮಾರಾಟ: ವ್ಯಕ್ತಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಮಾಡ್ರಹಳ್ಳಿ ಬಳಿ ಕೊಡಗು ಜಿಲ್ಲೆಯ ಹೋಂ ಮೇಡ್ ವೈನ್ ಮಾರಾಟದ ಆರೋಪದ ಮೇಲೆ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ ಘಟನೆ ಭಾನುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಮಾಡ್ರಹಳ್ಳಿ ಬಳಿ ಕೊಡಗು ಜಿಲ್ಲೆಯ ಹೋಂ ಮೇಡ್ ವೈನ್ ಮಾರಾಟದ ಆರೋಪದ ಮೇಲೆ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ ಘಟನೆ ಭಾನುವಾರ ನಡೆದಿದೆ.

ಮೈಸೂರು, ಊಟಿ ಹೆದ್ದಾರಿಯ ಮಾಡ್ರಹಳ್ಳಿ ಬಳಿ ಅಂಗಡಿ ಮಳಿಗೆಯಲ್ಲಿ ವ್ಯಾಪಾರ ಮಾಡುತ್ತಿದ್ದ ದಿನೇಶ್ ನಾಯ್ಡು ರೆಂಬ ಆರೋಪಿಯನ್ನು ಬಂಧಿಸಿ 285 ಲೀಟರ್ ಹೋಂ ಮೇಡ್‌ ವೈನ್‌ ವಶಕ್ಕೆ ಪಡೆದಿದ್ದಾರೆ. ಅಬಕಾರಿ ನಿರೀಕ್ಷಕ ಮಂಜು ನಾಯ್ಕ ಆರ್ ಈ ಸಂಬಂಧ ಕೇಸು ದಾಖಲಿಸಿದ ಬಳಿಕ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿ ನ್ಯಾಯಾಧೀಶರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಫಕೀರಪ್ಪ ಹೆಚ್ ಛಲುವಾದಿ, ಅಬಕಾರಿ ಉಪ ಆಯುಕ್ತ ನಾಗಶಯನ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಅಬಕಾರಿ ಮುಖ್ಯ ಪೇದೆ ಭಾಸ್ಕರ್, ಅಬಕಾರಿ ಪೇದೆಗಳಾದ ಷಣ್ಮುಖ,ಕುಮಾರ ಸ್ವಾಮಿ, ಸಿದ್ದೇಶ್ ಹಾಜರಿದ್ದರು.ಅಬಕಾರಿ ಅಧಿಕಾರಿಗಳ ಇಬ್ಬಗೆ ನೀತಿ?ಗುಂಡ್ಲುಪೇಟೆ ಅಬಕಾರಿ ಇಲಾಖೆ ಅಧಿಕಾರಿಗಳ ಹೋಂ ಮೇಡ್‌ ವೈನ್‌ ಮಾರಾಟ ಸಂಬಂಧ ಪರಾಕ್ರಮ ತೋರಿಸಿದ್ದು ದುರಂತ ಎಂದರೆ ಡಾಬಾಗಳಲ್ಲಿ ಅಕ್ರಮವಾಗಿ ರಾಜಾ ರೋಷವಾಗಿ ಮದ್ಯ ಕುಡಿಯುತ್ತಿದ್ದರೂ ಕ್ರಮ ತೆಗೆದುಕೊಳ್ಳದೆ ಅಬಕಾರಿ ಅಧಿಕಾರಿಗಳು ಇಬ್ಬಗೆಯ ನೀತಿ ತೋರಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹೋಂ ಮೇಡ್‌ ವೈನ್‌ ಎಲ್ಲೆಂದರಲ್ಲಿ ಮಾರಾಟ ಮಾಡುತ್ತಿದ್ದಾರೆ ಆದರೆ ಅಲ್ಲಿ ಅಬಕಾರಿ ಇಲಾಖೆಯ ಕೇಸು ದಾಖಲಿಸಿದ್ದಾರೆ. ಹೋಂ ಮೇಡ್‌ ವೈನ್‌ ನಿಯಮ ಮೀರಿ ಮಾರಾಟ ಮಾಡುತ್ತಿದ್ದರೆ ಕೇಸು ದಾಖಲಿಸಲಿ ವೈನ್‌ ಪ್ರಿಯರ ಮಾತು. ಆದರಿಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇರುವ ಸಿಎಲ್‌-೨ ಸನ್ನದಿನಲ್ಲಿ ರಾಜರೋಷವಾಗಿ ವೈನ್‌ ಶಾಪ್‌ನಲ್ಲಿ ಕುಡಿಯಲು ಅವಕಾಶ ವಿಲ್ಲ ಆದರೂ ಸಿಎಲ್‌-೨ ನಲ್ಲೂ ಕುಡಿಯುತ್ತಿದ್ದಾರೆ ಅವರ ಮೇಲೆ ಕೇಸು ದಾಖಲಿಸಲು ಅಬಕಾರಿ ಇಲಾಖೆ ಅಧಿಕಾರಿಗಳು ಮುಂದಾಗುತ್ತಿಲ್ಲ.

ಸಿಎಲ್‌-೨ ಸನ್ನದು ಬಿಟ್ಟು,ಸಿಎಲ್‌ -೭ ಸನ್ನದಿನಲ್ಲಿ ಗ್ರಾಹಕರಿಗೆ ಮದ್ಯ ಮಾರಾಟಕ್ಕೆ ಅವಕಾಶವೇ ಇಲ್ಲ. ಆದರೂ ಅಬಕಾರಿ ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ಸಿಎಲ್‌-೨ ನಂತೆ ಮಾರಾಟ ಮಾಡುತ್ತಿದ್ದಾರೆ ಅಲ್ಲದೆ ಸಿಎಲ್‌-೯ ನಂತೆ ಕುಡಿಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಜಾಣ ಮೌನ ವಹಿಸಿ ಸಿಎಲ್-‌೨.ಸಿಎಲ್‌-೭ ಸನ್ನದು ದಾರರೊಂದಿಗೆ ಶಾಮೀಲಾಗಿದ್ದಾರೆ.ಪರಾಕ್ರಮ ತೋರಲಿ:

ಪಟ್ಟಣ ಸೇರಿದಂತೆ ತಾಲೂಕಿನ ಡಾಬಾ ಹಾಗೂ ಸಿಎಲ್-೨,ಸಿಎಲ್-‌೭ ಸನ್ನದು ನಲ್ಲಿ ಅಬಕಾರಿ ಇಲಾಖೆಯ ಎಲ್ಲಾ ನಿಯಮ ಮೀರಿ ಮದ್ಯ ಮಾರಾಟ ಮಾಡುವ ಸನ್ನದುದಾರರ ಮೇಲೆ ಅಬಕಾರಿ ಇಲಾಖೆ ಅಧಿಕಾರಿ ಪರಾಕ್ರಮ ತೋರಲಿ ಎಂದು ವೈನ್‌ ಪ್ರಿಯರು ಸವಾಲು ಹಾಕಿದ್ದಾರೆ.ಪೊಲೀಸರು ಮೌನ?:

ತಾಲೂಕಿನಾದ್ಯಂತ ಇರುವ ವೈನ್‌ ಶಾಪ್‌,ಸಿಎಲ್‌-೭ ಸನ್ನದಿನಲ್ಲಿ ನಿಯಮ ಮೀರಿ ಮದ್ಯ ಮಾರಾಟ ನಡೆಯುತ್ತಿದ್ದರೂ ಪೊಲೀಸರು ಸನ್ನದುದಾರರೊಂದಿಗೆ ಶಾಮೀಲಾಗಿ ಜಾಣ ಮೌನ ತೋರಿದ್ದಾರೆ. ಡಾಬಾ ಹಾಗೂ ಸಿಎಲ್-‌೨ ಸನ್ನದಿನಲ್ಲಿ ಮದ್ಯ ಕುಡಿಯುವುದಕ್ಕೆ ಅವಕಾಶ ಇಲ್ಲ. ಸಿಎಲ್‌- ೭ ಸನ್ನದು ನಲ್ಲಿಯೂ ಗ್ರಾಹಕರಿಗೆ ಮದ್ಯ ಮಾರಾಟ ಹಾಗೂ ಕುಡಿಯಲು ಅವಕಾಶವಿಲ್ಲದಿದ್ದರೂ ಅಬಕಾರಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಕೇಸು ದಾಖಲಿಸಲು ಸಂಪೂರ್ಣ ವಿಫಲರಾಗಿದ್ದಾರೆ.ಸಾಕ್ಷಿ ಕೂಡ ಇದೆ?:

ವೈನ್‌ ಶಾಪ್‌, ಸಿಎಲ್-‌೭,ಸಿಎಲ್-‌೯ ನಲ್ಲೂ ಅಬಕಾರಿ ಇಲಾಖೆಯ ನಿಯಮ ಮೀರಿ ಬೇಗ ಬಾಗಿಲು ಓಪನ್‌ ಮಾಡುವುದು, ವಿಳಂಭಗಾಗಿ ಬಾಗಿಲು ಬಂದ್‌ ಮಾಡುವುದು ಜೊತೆಗೆ ಸಿಎಲ್‌-೨ ನಲ್ಲಿ ಮಳಿಗೆಯಲ್ಲಿ ಗ್ರಾಹಕರು ಕುಡಿಯುವುದು ಹಾಗೂ ಸಿಎಲ್-‌೭ ನಲ್ಲಿ ಗ್ರಾಹಕರಿಗೆ ಮದ್ಯ ಮಾರಾಟ ಮತ್ತು ಕುಡಿಯುವ ದೃಶ್ಯ ಸಿಎಲ್‌-೨,ಸಿಎಲ್‌-೭ ನಲ್ಲಿರುವ ಸಿಸಿ ಕ್ಯಾಮೆರಾ ಪುಟೇಜ್‌ ಅಧಿಕಾರಿಗಳು ತೆಗೆದರೆ ಸತ್ಯ ಬಯಲಾಗಲಿದೆ.ʼಅಬಕಾರಿ ಇಲಾಖೆಯು ಹೋಂ ಮೇಡ್‌ ವೈನ್‌ ಶಾಪ್‌ಗೆ ದಾಳಿ ಮಾಡಿದೆ. ಕಾನೂನು ಪ್ರಕಾರ ಅಬಕಾರಿ ಇಲಾಖೆ ಕ್ರಮ ಸ್ವಾಗತಾರ್ಹ.ಆದರೆ ಅಬಕಾರಿ ಇಲಾಖೆಯು ನಿಯಮ ಮೀರಿ ವೈನ್‌ ಶಾಪ್‌, ಡಾಬಾಗಳಲ್ಲಿ ಮದ್ಯ ಕುಡಿಯಲು ಅವಕಾಶ ಮಾಡಿರುವುದು ಸರೀನಾ? ಇವರ ಮೇಲೂ ಕ್ರಮ ತೆಗೆದುಕೊಂಡು ಕೇಸು ದಾಖಲಿಸಲಿ.

ಎನ್.ಕುಮಾರ್‌ ಪುರಸಭೆ ಸದಸ್ಯ ಗುಂಡ್ಲುಪೇಟೆ