ಶಾಮನೂರು ಶುಗರ್ಸ್‌ನಿಂದ ಅಕ್ರಮವಾಗಿ ರೈತರ ಭೂ ಕಬಳಿಕೆ: ಹೈ ಕೋರ್ಟ್‌ ಮೊರೆ

| Published : Oct 31 2025, 02:30 AM IST

ಶಾಮನೂರು ಶುಗರ್ಸ್‌ನಿಂದ ಅಕ್ರಮವಾಗಿ ರೈತರ ಭೂ ಕಬಳಿಕೆ: ಹೈ ಕೋರ್ಟ್‌ ಮೊರೆ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ತಾಲೂಕಿನ ಚಿಕ್ಕಬಿದರಿ, ಹರಪನಹಳ್ಳಿ ತಾಲೂಕಿನ ದುಗ್ಗಾವತಿ, ಕಡತಿ ಗ್ರಾಮಗಳಲ್ಲಿ ಶಾಮನೂರು ಶುಗರ್ಸ್‌, ಸ್ಯಾಂಸನ್‌ ಡಿಸ್ಟಿಲರಿಯವರು ಸುತ್ತಮುತ್ತಲ ಜಮೀನು ಕಬಳಿಸಿ, ರೈತರಿಗೆ ಮೋಸ ಮಾಡಿ, ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಚಿಕ್ಕಬಿದರಿ, ದುಗ್ಗಾವತಿ ಗ್ರಾಮದ ರೈತರು ದಾವಣಗೆರೆಯಲ್ಲಿ ಆರೋಪಿಸಿದ್ದಾರೆ.

- ನಕಲಿ ಸಹಿ ಬಳಕೆ । ಚಿಕ್ಕಬಿದರಿ, ದುಗ್ಗಾವತಿ, ಕಡತಿ ರೈತರ ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರ ತಾಲೂಕಿನ ಚಿಕ್ಕಬಿದರಿ, ಹರಪನಹಳ್ಳಿ ತಾಲೂಕಿನ ದುಗ್ಗಾವತಿ, ಕಡತಿ ಗ್ರಾಮಗಳಲ್ಲಿ ಶಾಮನೂರು ಶುಗರ್ಸ್‌, ಸ್ಯಾಂಸನ್‌ ಡಿಸ್ಟಿಲರಿಯವರು ಸುತ್ತಮುತ್ತಲ ಜಮೀನು ಕಬಳಿಸಿ, ರೈತರಿಗೆ ಮೋಸ ಮಾಡಿ, ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಚಿಕ್ಕಬಿದರಿ, ದುಗ್ಗಾವತಿ ಗ್ರಾಮದ ರೈತರು ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಮೇನಹಳ್ಳಿ ಆಕಾಶ ಬಣಕಾರ್‌, ರೈತರಾದ ಚಿಕ್ಕಬಿದರಿ ಕಾಳಪ್ಪ, ಹರಪನಹಳ್ಳಿ ತಾಲೂಕಿನ ರಿ.ಸ.ನಂ. 236/ಸಿನಲ್ಲಿ ಸುಮಾರು 67 ಎಕರೆ ಕೃಷಿ ಜಮೀನನ್ನು ರೈತರಿಗೂ ತಿಳಿಸದೇ ಜಮೀನು ಕಬಳಿಸಿದ್ದಾರೆ. ಜಮೀನುಗಳ ಮಾಲೀಕ ರೈತರು ಸಹಿ ಮಾಡಲು ನಕಲಿ ಹೆಬ್ಬೆಟ್ಟು ಒತ್ತುವವರ ಬಳಸಿ ಪೋರ್ಜರಿ ಸಹಿ ಮಾಡಲಾಗಿದೆ. ರೈತರಿಂದ ಕಬಳಿಸಿದ ಭೂಮಿಯನ್ನು ದುಗ್ಗಾವತಿ ಕಾರ್ಖಾನೆ ಮಾಲೀಕರು ತಮ್ಮ ಹಿಂಬಾಲಕರ ಮೂಲಕ ರೈತರೇ ಹೊಲಗಳನ್ನು ನೀಡಿದ್ದಾರೆಂಬುದಾಗಿ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ದೂರಿದರು.

ಕಾರ್ಖಾನೆ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಆಗುತ್ತಿದೆ. ದುಗ್ಗಾವತಿ, ಕಡತಿ, ಚಿಕ್ಕಬಿದರಿ ಗ್ರಾಮಗಳಲ್ಲಿ ಹರಿಯುವ ಹಳ್ಳವನ್ನೇ ಮುಚ್ಚಿ, ಕಾರ್ಖಾನೆಯ ತ್ಯಾಜ್ಯನೀರನ್ನು ರೈತರ ಹೊಲಗಳಿಗೆ ಹರಿಸಿ, ತೊಂದರೆ ನೀಡುತ್ತಿದ್ದಾರೆ. ಯಾವುದೇ ರೈತರೂ ಸ್ವಯಂ ಪ್ರೇರಿತರಾಗಿ ಜಮೀನು ನೀಡಿಲ್ಲ. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಒಡೆತನದ ಶಾಮನೂರು ಶುಗರ್ಸ್‌, ಸ್ಯಾಮ್‌ಸನ್ ಡಿಸ್ಟಿಲರಿ ಕಾರ್ಖಾನೆಗಳು ರೈತರಿಗೆ ದ್ರೋಹ ಬಗೆದಿವೆ ಎಂದು ಅಳಲು ತೋಡಿಕೊಂಡರು.

40 ಜನ ರೈತರ 67 ಎಕರೆ ವಿಚಾರವಾಗಿ 2008 ರಿಂದಲೇ ಉಪವಿಭಾಗಾಧಿಕಾರಿ, ತಹಸೀಲ್ದಾರ್‌ ಕೋರ್ಟ್‌ಗೆ ಹೋಗಿದ್ದರೂ ಪ್ರಯೋಜನವಾಗಿಲ್ಲ. ಅಂತಿಮವಾಗಿ ನೊಂದ ರೈತರು ಹೈಕೋರ್ಟ್ ಮೊರೆ ಹೋಗಿದ್ದೇವೆ ಎಂದರು.

ಈ ಸಂದರ್ಭ ರೈತರಾದ ನಾಗೇನಹಳ್ಳಿ ಅಂಜಿನಪ್ಪ, ಯೋಗೇಶ ದುಗ್ಗಾವತಿ, ಮಾರುತಿ ದುಗ್ಗಾವತಿ, ಗುಡ್ಡಪ್ಪ ಚಿಕ್ಕಬಿದರಿ ಇತರರು ಇದ್ದರು.

- - -

-29ಕೆಡಿವಿಜಿ7: