ಸಾರಾಂಶ
ತಾಲೂಕಿನಲ್ಲಿ ನಡೆದ ಲೋಕಸಭೆ ಚುನಾವಣೆ ಮತ್ತು ವಿವಿಧೆಡೆ ಮನೆ, ಅಂಗಡಿ ಮಳಿಗೆಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ವೇಳೆ ಅಬಕಾರಿ ಮತ್ತು ಪೋಲಿಸ್ ಇಲಾಖೆ ದಾಳಿ ನಡೆಸಿ ವಿವಿಧ ಪ್ರಕರಣ ದಾಖಲಿಸಿ ಜಪ್ತಿ ಮಾಡಿಕೊಂಡ ಅಕ್ರಮ ಮದ್ಯವನ್ನು ತುಮಕೂರು ಅಬಕಾರಿ ಉಪ ಆಯುಕ್ತರ ಆದೇಶದಂತೆ ಶನಿವಾರ ಬೋಡಬಂಡೇನಹಳ್ಳಿ ರಸ್ತೆಯ ಪಪಂ ಕಸ ವಿಲೇವಾರಿ ಘಟಕದಲ್ಲಿ ನಾಶ ಪಡಿಸಲಾಯಿತು
ಕೊರಟಗೆರೆ: ತಾಲೂಕಿನಲ್ಲಿ ನಡೆದ ಲೋಕಸಭೆ ಚುನಾವಣೆ ಮತ್ತು ವಿವಿಧೆಡೆ ಮನೆ, ಅಂಗಡಿ ಮಳಿಗೆಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ವೇಳೆ ಅಬಕಾರಿ ಮತ್ತು ಪೋಲಿಸ್ ಇಲಾಖೆ ದಾಳಿ ನಡೆಸಿ ವಿವಿಧ ಪ್ರಕರಣ ದಾಖಲಿಸಿ ಜಪ್ತಿ ಮಾಡಿಕೊಂಡ ಅಕ್ರಮ ಮದ್ಯವನ್ನು ತುಮಕೂರು ಅಬಕಾರಿ ಉಪ ಆಯುಕ್ತರ ಆದೇಶದಂತೆ ಶನಿವಾರ ಬೋಡಬಂಡೇನಹಳ್ಳಿ ರಸ್ತೆಯ ಪಪಂ ಕಸ ವಿಲೇವಾರಿ ಘಟಕದಲ್ಲಿ ನಾಶ ಪಡಿಸಲಾಯಿತು.
ತಹಸೀಲ್ದಾರ್ ಕಚೇರಿ, ಮಧುಗಿರಿ ಅಬಕಾರಿ ಉಪ ವಿಭಾಗ, ಕೊರಟಗೆರೆ ಅಬಕಾರಿ ವಲಯ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರ ಸಮಕ್ಷಮದಲ್ಲಿ ಅಬಕಾರಿ ಮತ್ತು ಪೋಲಿಸ್ ಇಲಾಖೆ ಲೋಕಸಭೆ ಚುನಾವಣೆ ವೇಳೆ ಜಪ್ತಿ ಮಾಡಿಕೊಂಡ 28, 000 ರು. ಮೌಲ್ಯದ ೬೩.೯೯೦ಲೀ ಮದ್ಯ, ೧೯೫೦ ಲೀ ಬಿಯರ್‌ನ್ನು ನಾಶ ಮಾಡಲಾಯಿತು.ಮಧುಗಿರಿ ಅಬಕಾರಿ ಉಪ ಅಧೀಕ್ಷಕ ದೀಪಕ್.ಎಸ್ ಮಾತನಾಡಿ, ಅಬಕಾರಿ ಮತ್ತು ಪೋಲಿಸ್ ಇಲಾಖೆಯಿಂದ ಜಪ್ತಿ ಮಾಡಿ ವಿವಿಧ ಪ್ರಕರಣದಲ್ಲಿ ದಾಖಲಾಗಿದ್ದ ಮದ್ಯ ಹಾಗೂ ಬಿಯರ್‌ನ್ನು ತುಮಕೂರು ಅಬಕಾರಿ ಉಪ ಆಯುಕ್ತರ ಆದೇಶದಂತೆ ಶನಿವಾರ ತಹಸೀಲ್ದಾರ್ ಕಚೇರಿ, ಮಧುಗಿರಿ ಮತ್ತು ಕೊರಟಗೆರೆ ಅಬಕಾರಿ ವಲಯ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರ ಸಮಕ್ಷಮದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ನಾಶ ಪಡಿಸಲಾಗಿದೆ ಎಂದು ಹೇಳಿದರು. ಗ್ರೇಡ್-೨ ತಹಶೀಲ್ದಾರ್ ರಾಮ್‌ಪ್ರಸಾದ್, ಗ್ರಾಮ ಆಡಳಿತಾಧಿಕಾರಿ ಪವನ್‌ಕುಮಾರ್.ಸಿ, ಕೊರಟಗೆರೆ ಅಬಕಾರಿ ನಿರೀಕ್ಷಕ ನಾಗರಾಜ ಹೆಚ್.ಕೆ, ಉಪ ನಿರೀಕ್ಷಕ ಪ್ರಭಾಕರ್, ಸಿಬ್ಬಂದಿಗಳಾದ ಕುಮಾರ್, ಹಮೀದ್ ಬುಡಕಿ, ಮಲ್ಲಿಕಾರ್ಜುನ್ ಹಾಜರಿದ್ದರು.