ಸಾರಾಂಶ
ತಾಲೂಕಿನ ಗುಂಡಾಲ್ ಸಮೀಪ ಮತ್ತು ಇರಮ್ಮನದೊಡ್ಡಿ ಗ್ರಾಮದಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದಇಬ್ಬರು ಆರೋಪಿಗಳು ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ತಾಲೂಕಿನ ಗುಂಡಾಲ್ ಸಮೀಪ ಮತ್ತು ಇರಮ್ಮನದೊಡ್ಡಿ ಗ್ರಾಮದಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದಇಬ್ಬರು ಆರೋಪಿಗಳು ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಂಗರಹಳ್ಳಿಯ ನಾಗರಾಜು ಅಲಿಯಾಸ್ ಬಕಾಸುರ, ಪುಟ್ಟಿರಮ್ಮನ ದೊಡ್ಡಿಯ ರಂಗೇಗೌಡ ಅಲಿಯಾಸ್ ರಂಗಸ್ವಾಮಿ ಬಂಧಿತರುನಾಗರಾಜು ಗುಂಡಾಲ್ ಕಡೆಯಿಂದ ಕಾಮಗೆರೆಗೆ ಮಾರಾಟ ಮಾಡುವ ಸಲುವಾಗಿ 322 ಗ್ರಾಂ ಒಣ ಗಾಂಜಾವನ್ನು ಅಕ್ರಮವಾಗಿ
ತೆಗೆದುಕೊಂಡು ಬರುವಾಗ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿ ಯಿಂದ 1ಬೈಕ್, 322ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.ಅದೇ ರೀತಿಯಲ್ಲಿ ಮತ್ತೊಂದು ಪ್ರಕರಣದಲ್ಲಿ ಇರಮ್ಮನದೊಡ್ಡಿಯ ರಂಗೇಗೌಡ ಅಲಿಯಾಸ್ ರಂಗಸ್ವಾಮಿ ಪುಟ್ಟಿರಮ್ಮನದೊಡ್ಡಿ ಈತ ಅಕ್ರಮ ಗಾಂಜಾ ಮಾರಾಟ ತೆಗೆದುಕೊಂಡು ತೆರಳುವ ವೇಳೆ ಖಚಿತ ಮಾಹಿತಿ ಹಿನ್ನೆಲೆ ಪಿಎಸ್ಐ ಎಸ್ ಎ ಸುಪ್ರೀತ್, , ಡಿ ಎಸ್ ಪೂಜೇರಿ, ಸಹಾಯಕ ಎಸೈ ಗೋವಿಂದ್, ಸಿಬ್ಬಂದಿ ಮನೋಹರ್ ದಿನೇಶ್ ಸಿದ್ದರಾಜು, ವಿಜಯ್ ಕುಮಾ ಇನ್ನಿತರರು ಪಾಲ್ಗೊಂಡು ಆರೋಪಿಯಿಂದ 140 ಗ್ರಾಂ ಒಣ ಗಾಂಜವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.