ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟಅಂಗಡಿಗಳ ಮೇಲೆ ಆರೋಗ್ಯಾಧಿಕಾರಿಗಳ ದಾಳಿ

| Published : Nov 29 2024, 01:01 AM IST

ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟಅಂಗಡಿಗಳ ಮೇಲೆ ಆರೋಗ್ಯಾಧಿಕಾರಿಗಳ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಅನನುಕೂಲತೆಗಳ ಬಗ್ಗೆ ಐಇಸಿ ಅರಿವು ಮೂಡಿಸಿ, ವ್ಯಸನ ಮುಕ್ತರಾಗಿ ಬರುವಂತೆ ಸಲಹೆ ನೀಡಲಾಯಿತು.

ಅಂಗಡಿಗಳ ಮೇಲೆ ಆರೋಗ್ಯಾಧಿಕಾರಿಗಳ ದಾಳಿ, ದಂಡ ವಸೂಲಿ

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಕೆ.ಹೊನ್ನಲಗೆರೆ ವ್ಯಾಪ್ತಿಯ ಶಾಲಾ ಕಾಲೇಜುಗಳ ಬಳಿ ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಗುರುವಾರ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ದಂಡ ವಸೂಲಿ ಮಾಡಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ. ಮೋಹನ್ ಮಾರ್ಗದರ್ಶನದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್. ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ. ರವೀಂದ್ರ ಬಿ.ಗೌಡ. ಜಿಲ್ಲಾ ಸಲಹೆಗಾರ ತಿಮ್ಮರಾಜು ತಂಡ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ನಂದಿನಿ ಪಾರ್ಲರ್ ಹಾಗೂ ಅಂಗಡಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳ ವಿರುದ್ಧ ಕೋಟ್ಪಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ 6,800 ರು. ದಂಡ ವಿಧಿಸಲಾಗಿದೆ.

ಅಲ್ಲದೆ ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಅನನುಕೂಲತೆಗಳ ಬಗ್ಗೆ ಐಇಸಿ ಅರಿವು ಮೂಡಿಸಿ, ವ್ಯಸನ ಮುಕ್ತರಾಗಿ ಬರುವಂತೆ ಸಲಹೆ ನೀಡಲಾಯಿತು. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯ ಇರುವ ವ್ಯಸನ ಮುಕ್ತ ಕೇಂದ್ರದ ಉಚಿತ ಸೇವಾ ಸೌಲಭ್ಯಗಳನ್ನು ಬಳಸಿಕೊಂಡು ಆರೋಗ್ಯವಂತ ಜೀವನ ನಡೆಸಲು ತಂಬಾಕು ವ್ಯಸನಿಗಳಿಗೆ ಅಧಿಕಾರಿಗಳ ತಂಡ ಸಲಹೆ ನೀಡಿತು. ಕಾರ್ಯಾಚರಣೆಯಲ್ಲಿ ಸಮಾಜ ಸೇವಾ ಕಾರ್ಯಕರ್ತರಾದ ವೈ.ಕೆ. ಮೋಹನ್ ಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕ ತಮ್ಮಯ್ಯ, ಎಎಸ್ಐ ಗಣೇಶ್ ಬಾಬು, ಮತ್ತಿತರರು ಇದ್ದರು.