ಸಾರಾಂಶ
ಎಚ್.ಎನ್.ನಾಗರಾಜು ಕನ್ನಡಪ್ರಭ ವಾರ್ತೆ ಕೊರಟಗೆರೆಕೊರಟಗೆರೆ ಸುತ್ತಮುತ್ತ ಅಕ್ರಮ ಮಣ್ಣು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ತಾಲೂಕು ಆಡಳಿತ ಕಂಡರು ಕಾಣದಂತೆ ಮೌನವಹಿಸಿದೆ. ಕೆಲವರು ಮಣ್ಣು ಹೊಡೆಯುವ ನೆಪದಲ್ಲಿ ಅಕ್ರಮವಾಗಿ ಮರಳು ಸಾಗಾಟ ಕಡಿವಾಣ ಹಾಕೋರು ಯಾರು ಇಲ್ಲದಂತಾಗಿದೆ.ಕೊರಟಗೆರೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಯಾವುದೇ ಪರವಾನಿಗೆ ಇಲ್ಲದೆ ಮಣ್ಣು ಸಾಗಟವಾಗುತ್ತಿದ್ದು, ಇದನ್ನು ತಡೆಯುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಪಟ್ಟಣ ಹಾಗೂ ಹೋಬಳಿ ಕೇಂದ್ರಗಳಲ್ಲಿ ಲೇಔಟ್‌ಗಳ ನಿರ್ಮಾಣಗಳು ನಡೆಯುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೊರಟಗೆರೆ ಕಡೆ ತಿರುಗಿ ಕೂಡ ನೋಡದೆ ಇರುವುದು ದುರದೃಷ್ಟಕರ ಸಂಗತಿಯಾಗಿದೆ.ರೈತರ ತಮ್ಮ ಜಮೀನುಗಳನ್ನ ಸಮತಟ್ಟು ಮಾಡಿಕೊಳ್ಳಲು ಕೆರೆಗಳಲ್ಲಿ ಹೂಳು ತೆಗೆಯಲು ಅನುಮತಿ ನೀಡಲು ಸ್ಥಳೀಯ ಗ್ರಾಪಂ, ಕೆರೆಗಳು, ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಉಚಿತವಾಗಿ ಮಣ್ಣುನ್ನ ರೈತರ ಹೊಡೆದುಕೊಳ್ಳಬಹುದು. ಆದರೆ ರೈತರು ಬಳಸಿಕೊಳ್ಳಲು ಯೋಗ್ಯವಲ್ಲದ ಮಣ್ಣನ್ನು ಪಿಡ್ಲ್ಯೂಡಿ ಇಲಾಖೆಯಿಂದ ಅನುಮತಿ ಪಡೆದು ಇಂತಿಷ್ಟು ಹಣವನ್ನು ರಾಯಲ್ಟಿ ಕಟ್ಟಿ ಮಣ್ಣನ್ನು ಹೊಡೆದುಕೊಳ್ಳಬಹುದಾಗಿದೆ. ಅದರೆ ಇಲ್ಲಿ ಯಾವುದೆ ಅನುಮತಿ ಇಲ್ಲದೆ ರಾಜರೋಷವಾಗಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ.ನಿಯಮ ಬಾಹಿರವಾಗಿ ಗಣಿಗಾರಿಕೆ:ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಹೋಬಳಿ ಕೇಂದ್ರದಲ್ಲಿ ಕೆರೆ ಹಾಗೂ ಬೆಟ್ಟ ಗುಡ್ಡಗಳಲ್ಲಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆಗಳ ಅನುಮತಿಯನ್ನು ಪಡೆಯದೆ ಜೆಸಿಬಿ, ಇಟಾಚಿ, ಟ್ರ್ಯಾಕ್ಟರ್ ಮೂಲಕ ಮಣ್ಣು ಮಾಫಿಯಾ ನಿರಂತರವಾಗಿ ನಡೆಯುತ್ತಿದೆ. ಕೆಲ ಅಧಿಕಾರಿಗಳು ಇವರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.ಅಕ್ರಮ ಮಣ್ಣು ಗಣಿಗಾರಿಗೆ ಬೆಟ್ಟ ಗುಡ್ಡಗಳು ಮಾಯ:ತಾಲೂಕಿನ ಭೂ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದ್ದು, ತಾಲೂಕಿನ ಬಜ್ಜನಹಳ್ಳಿ ಸಮೀಪ ಇರುವ ನಾಲ್ಕು ಬೆಟ್ಟಗಳು ನೆಲಸಮವಾಗಿವೆ. ಇನ್ನೂ ತಾಲೂಕಿನ ಅನೇಕ ಗ್ರಾಮಗಳ ಸಣ್ಣ ಪುಟ್ಟ ಗುಡ್ಡಗಳು ಮಾಯವಾಗುತ್ತಿವೆ. ಪ್ರಶ್ನೆ ಮಾಡಲು ಹೋದ ಅಧಿಕಾರಿಗಳಿಗೆ ಗೃಹ ಸಚಿವ ಹೆಸರು ದುರ್ಬಳಕೆ ಮಾಡಿಕೊಂಡು ಮಣ್ಣು ಗಣಿಗಾರಿಕೆ ಮಾಡುತ್ತಿರುವ ಆರೋಪವು ಕೇಳಿ ಬರುತ್ತಿದೆ. ಕಳಂಕ ಇಲ್ಲದೆ ರಾಜಕಾರಣ ಮಾಡುತ್ತಿರುವ ಗೃಹ ಸಚಿವರ ಹೆಸರು ಕಳಂಕ ಬರುವಂತೆ ಮಾಡುತ್ತಿದ್ದಾರೆ. ಬೆಟ್ಟ ಗುಡ್ಡಗಳನ್ನು ರಕ್ಷಣೆ ಮಾಡಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿ ಪ್ರಭಾವಿ ನಾಯಕರ ಮಾತಿಗೆ ಕೈಕಟ್ಟಿ ಕೂತಿದ್ದಾರೆ.ಮಣ್ಣು ಹೊಡೆಯುವ ನೆಪದಲ್ಲಿ ಸಾಗಾಣಿಕೆ:ಜಟ್ಟಿ ಅಗ್ರಹಾರ ಗ್ರಾಪಂ ವ್ಯಾಪ್ತಿಯ ಕಂಬದಹಳ್ಳಿ ಕೆರೆಯಲ್ಲಿ ರೈತರಿಗೆ ಮಣ್ಣು ಹೊಡೆಯುವ ನೆಪದಲ್ಲಿ ರಾತ್ರಿ ಸಮಯದಲ್ಲಿ ಗ್ರಾಪಂನ ಯಾವುದೇ ಪರವಾನಿಗೆ ಇಲ್ಲದೆ, ಅಕ್ರಮ ಮಣ್ಣು ಸಾಗಾಟ ಮಾಡುತ್ತಿದ್ದಾರೆ. ಇದರ ಜೊತೆಗೆ ಕೆರೆಯಲ್ಲಿರುವ ಮರಳನ್ನು ಜೆಸಿಬಿ ಮೂಲಕ ಮರಳು ಸಾಗಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರ ಆರೋಪವಾಗಿದೆ. ಬಾಕ್ಸ್......ಎಲ್ಲೆಲ್ಲಿ ಅಕ್ರಮ ಮಣ್ಣಿನ ದಂಧೆತಾಲೂಕಿನ ಅಗ್ರಹಾರ ಗ್ರಾಪಂಯ ಕಂಬದಹಳ್ಳಿ ಕೆರೆ, ಬಜ್ಜನಹಳ್ಳಿ ಸಮೀಪ ಇರುವ ಗುಟ್ಟೆ, ಇರಕಸಂದ್ರ ಕಾಲೋನಿ ಸಮೀಪ ಇರುವ ಏತ್ತಿನಹೊಳೆಯ ಮಣ್ಣು, ಹುಲಿಕುಂಟೆ ಸಮೀಪ ಇರುವ ಕಸ ವಿಲೇವಾರಿ ಘಟಕ ಹತ್ತಿರ, ದೊಡ್ಡಸಾಗ್ಗೆರೆ ಕೆರೆ, ಮಾವತ್ತೂರು ಕೆರೆ, ತುಂಬಾಡಿ ಟೋಲ್ ಸಮೀಪ, ಸೋಂಪುರ ಕೆರೆ. (ಚಿತ್ರ ಇದೆ)೧೦ ಕೊರಟಗೆರೆ ಚಿತ್ರ೦೧;- ಹುಲಿಕುಂಟೆ ಸಮೀಪ ಇರುವ ಘನ ತ್ಯಾಜ್ಯ ಘಟಕದ ಸಮೀಪ ಅಕ್ರಮವಾಗಿ ಮಣ್ಣು ತುಂಬುತ್ತಿರುವ ಜೆಸಿಬಿ ಟ್ರ್ಯಾಕ್ಟರ್‌ಗಳು.೧೦ ಕೊರಟಗೆರೆ ಚಿತ್ರ೦೨;- ತಾಲೂಕಿನ ಕಂಬದಹಳ್ಳಿ ಸಮೀಪ ಇರುವ ಕೆರೆ ಬೆಟ್ಟಗಳನ್ನ ನೆಲಸಮ ಮಾಡುತ್ತಿರುವ ಜೆಸಿಬಿ.