ಬೀರೂರು ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಅಜ್ಜಂಪುರ- ಬೀರೂರು ರಸ್ತೆಯಲ್ಲಿ ಬುಧವಾರ ಆಹಾರ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ತಡೆದು, 130 ಕ್ವಿಂಟಲ್ ಅಕ್ಕಿ ಮತ್ತು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕು ಆಹಾರ ನಿರೀಕ್ಷಕ ಶ್ರೀನಿವಾಸ್ ಮಾಹಿತಿ
ಕನ್ನಡಪ್ರಭ ವಾರ್ತೆ ಬೀರೂರುಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಅಜ್ಜಂಪುರ- ಬೀರೂರು ರಸ್ತೆಯಲ್ಲಿ ಬುಧವಾರ ಆಹಾರ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ತಡೆದು, 130 ಕ್ವಿಂಟಲ್ ಅಕ್ಕಿ ಮತ್ತು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಬೀರೂರು ಪಟ್ಟಣದ ಮಾರ್ಗವಾಗಿ ಕಡೂರು ಕಡೆಯತ್ತ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಹಿನ್ನೆಲೆ ಯಲ್ಲಿ ಕಾರ್ಯಪ್ರವೃತ್ತರಾದ ಕಡೂರು ತಾಲೂಕು ಆಹಾರ ನಿರೀಕ್ಷಕ ಎಚ್. ಶ್ರೀನಿವಾಸ್, ಬೀರೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಿ.ವಿ. ತಿಪ್ಪೇಶ್ ನೇತೃತ್ವದಲ್ಲಿ ಅಜ್ಜಂಪುರ ರಸ್ತೆ ಬೈಪಾಸ್ ಕೆಳಸೇತುವೆ ಬಳಿ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಪಡಿತರ ಅಕ್ಕಿಯಂತೆ ಕಾಣುವ ತಲಾ 50 ಕೆ.ಜಿ ತೂಕದ 260 ಚೀಲ ಪತ್ತೆಯಾಗಿದೆ.ಹೊನ್ನಾಳಿ ತಾಲೂಕಿನವನಾದ ಚಾಲಕ ಚೇತನ್ ವಿಚಾರಣೆ ನಡೆಸಲಾಗಿದ್ದು, ಅಕ್ಕಿ ಸಾಗಣಿಕೆಗೆ ಯಾವುದೇ ದಾಖಲೆ ಅಥವಾ ಪರವಾನಗಿ ಹೊಂದಿರಲಿಲ್ಲ. ಹಾಗಾಗಿ 1955ರ ಅಗತ್ಯ ವಸ್ತುಗಳ ಕಾಯ್ದೆಯಡಿ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸ ಲಾಗಿದೆ ಎಂದು ಆಹಾರ ನಿರೀಕ್ಷಕ ಶ್ರೀನಿವಾಸ್ ಮಾಹಿತಿ ನೀಡಿದರು. ಕಾರ್ಯಾಚರಣೆಯಲ್ಲಿ ಆಹಾರ ನಿರೀಕ್ಷಕಿ ಶಿಲ್ಪಾ, ಕಚೇರಿ ಸಿಬ್ಬಂದಿ ಜಗದೀಶ್, ಪೊಲೀಸ್ ಸಿಬ್ಬಂದಿ ಶಿವಾನಂದ, ಎಸ್.ಜಿ. ಬಾಬು ಪಾಲ್ಗೊಂಡಿದ್ದರು.19 birur 1ಬೀರೂರು ಪಟ್ಟಣದ ಹೊರವಲಯದ ಅಜ್ಜಂಪುರ ರಸ್ತೆಯಲ್ಲಿ ಆಹಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಲಾರಿ ವಶಕ್ಕೆ ಪಡೆದಿರುವುದು