ಸಾರಾಂಶ
illigal mining transportation in chitradurga
ಚಿತ್ರದುರ್ಗ: ಅನಧಿಕೃತವಾಗಿ ಕಬ್ಬಿಣದ ಅದಿರು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಚಳ್ಳಕೆರೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ. ಎಂ.ಜೆ.ಮಹೇಶ್, ಹಿರಿಯ ಭೂ ವಿಜ್ಞಾನಿ ಕೆ.ಎಸ್.ನಾಗೇಂದ್ರಪ್ಪ ಅವರ ನೇತೃತ್ವದಲ್ಲಿ ಭೂ ವಿಜ್ಞಾನಿಗಳಾದ ಬಿ.ಎನ್.ಉಮಾಪತಿ ಮತ್ತು ಪಿ.ಮಂಜಪ್ಪ ಹಾಗೂ ಸಿಬ್ಬಂದಿ ಚೇತನ್ ಮತ್ತು ಜಾಕೀರ್ ಅವರೊಂದಿಗೆ ಗಸ್ತು ಕಾರ್ಯ ನಡೆಸಿ ಅನಧಿಕೃತವಾಗಿ ಕಬ್ಬಿಣದ ಅದಿರು ಸಾಗಾಣಿಕೆ ಮಾಡುತ್ತಿದ್ದ ಮೂರು ವಾಹನಗಳನ್ನು ವಶಪಡಿಸಿಕೊಂಡು ಚಳ್ಳಕೆರೆ ಪೊಲೀಸ್ ಠಾಣೆ ವಶಕ್ಕೆ ನೀಡಲಾಗಿದೆ. ಎಂ.ಎಂ (ಆರ್ ಅಂಡ್ ಡಿ) ಆಕ್ಟ್ 1957ರಂತೆ ವಾಹನಗಳ ಮಾಲೀಕರು, ಚಾಲಕರು ಹಾಗೂ ಇದಕ್ಕೆ ಭಾಗಿಯಾಗಿರುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
------------ಫೋಟೋ ಫೈಲ್ ನೇಮ್- 5 ಸಿಟಿಡಿ 3