ಕಮಲನಗರ ಪಟ್ಟಣದ ಎಪಿಎಮ್ಸಿ ಮಾರ್ಕೆಟ್ ಯಾರ್ಡ್ನಲ್ಲಿರುವ ಅಂಬಾ ಭವಾನಿ ಮಾತಾ ದಸರಾ ಹಬ್ಬದ ಸಮಾರೋಪದ ಅಂಗವಾಗಿ ಭಾನುವಾರ ಸಾಯಂಕಾಲ ಹುಣ್ಣಿಮೆ ದಿನದಂದು ಅಂಬಾಭವಾನಿ ದೇವಿಯ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು.

ಮಂಗಳವಾದ್ಯಗಳು, ಡೊಳ್ಳು-ತಾಳಗಳ ಸದ್ದು ಹಾಗೂ ಭಕ್ತರ ಜಯಘೋಷಗಳೊಂದಿಗೆ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಎಪಿಎಮ್ಸಿ ಮಾರ್ಕೆಟ್ನಿಂದ ಅಲ್ಲಮ ಪ್ರಭು ವೃತ್ತ, ಸೋನಾಳ ರಸ್ತೆಯ ಮೂಲಕ ಅತಿಥಿ ಗೃಹ, ಬಸವೇಶ್ವರ ವೃತ್ತ, ಗ್ರಾಪಂ, ಹನುಮಾನ್ ಮಂದಿರದ ರಸ್ತೆ ಮೂಲಕ ಕೊನೆಗೊಳ್ಳಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರು, ಯುವಕರು, ಹಿರಿಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಅಂಬಾಭವಾನಿ ದೇವಿಯ ದರ್ಶನ ಪಡೆದು ಭಕ್ತಿಯನ್ನು ಸಮರ್ಪಿಸಿದರು. ಕೆಲವು ಕಡೆಗಳಲ್ಲಿ ಸಾಂಪ್ರದಾಯಿಕ ವಾದ್ಯಮೇಳಗಳು ಹಾಗೂ ಭಕ್ತಿಗೀತೆಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಈ ಸಂದರ್ಭದಲ್ಲಿ ಶಿವಕುಮಾರ ಬಿರಾದಾರ, ಉಪಾಧ್ಯಕ್ಷ ಸಂಜುಕುಮಾರ ತಳವಾಡೆ, ಕಾರ್ಯದರ್ಶಿ ಬಾಲಾಜಿ ಬಿರಾದಾರ, ಸದಸ್ಯರಾದ ಸಂತೋಷ ಬಿರಾದಾರ, ಓಂ ವಡ್ಡೆ, ಜಗು ಕಾರಬಾರಿ, ಮಲ್ಲು ನವಾಡೆ, ಸಂಗಮೆಶ ಬಿರಾದಾರ, ಪ್ರಭುರಾವ ಕಳಸೆ, ರಮೆಶ ಕುಡ್ತೆ, ರವಿ ಕಾರಬಾರಿ, ಕಾಶಿನಾಥ ಬಾವಗೆ ಹಾಗೂ ಸುತ್ತಮುತ್ತಲಿನ ಭಕ್ತರು ಹಾಜರಿದ್ದರು.