ರೈತರಿಗೆ ಹೊಸ ನಾಟಿ ಹಾಗೂ ಬೆಳೆ ಕಟಾವು ಹಂತದಲ್ಲಿ ಎಕರೆಗೆ ತಲಾ 30ಸಾವಿರ ಆರ್ಥಿಕ ಸಹಾಯ ಧನ ನೀಡುವಂತ ಹೊಸ ಯೋಜನೆ ಜಾರಿಗೊಳಿಸುವ ಮೂಲಕ ರೈತರ ರಕ್ಷಣಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪೂಜಾರಪ್ಪ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ರೈತರಿಗೆ ಹೊಸ ನಾಟಿ ಹಾಗೂ ಬೆಳೆ ಕಟಾವು ಹಂತದಲ್ಲಿ ಎಕರೆಗೆ ತಲಾ 30ಸಾವಿರ ಆರ್ಥಿಕ ಸಹಾಯ ಧನ ನೀಡುವಂತ ಹೊಸ ಯೋಜನೆ ಜಾರಿಗೊಳಿಸುವ ಮೂಲಕ ರೈತರ ರಕ್ಷಣಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪೂಜಾರಪ್ಪ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಪಟ್ಟಣದ ಹೊರವಲಯ ರಾಜವಂತಿ ಕೃಷಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಇದುವರೆವಿಗೂ ರೈತರಿಗೆ ಅನುಕೂಲ ಅಗುವಂತಹ ಯಾವುದೇ ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿಲ್ಲ. ಅನ್ನದಾತ ರೈತನಿಗೆ ಪೂರಕವಾಗಿ ಸರ್ಕಾರ ಯೋಜನೆ ರೂಪಿಸಿ ಉತ್ತೇಜನ ನೀಡಿದರೆ. ದೇಶ ಹಾಗೂ ರೈತನ ಬದುಕು ಹಸನಾಗಲು ಸಾಧ್ಯವಾಗಲಿದೆ ಎಂದು ಹೇಳಿದ ಅವರು, ಬರಗಾಲ ಹಾಗೂ ಮಳೆಯ ಅಭಾವದಿಂದ ಬೆಳೆ ನಷ್ಟಕ್ಕೀಡಾಗುತ್ತಿದೆ. ಹೀಗಾಗಿ ನರೇಗಾದಲ್ಲಿ ಆಹಾರ ಧಾನ್ಯಗಳ ಬೆಳೆಗೆ ಆದ್ಯತೆ ಸೇರಿದಂತೆ, ಬೆಳೆ ನಾಟಿ ಹಾಗೂ ಕಟಾವು ಹಂತದಲ್ಲಿ ಕೂಲಿಕಾರರಿಗೆ ಆರ್ಥಿಕ ಸಹಾಯ ಕಲ್ಪಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗೆ ಬರುವಂತೆ ಒತ್ತಾಯಿಸಿದರು.ತಾಲೂಕು ರೈತ ಸಂಘದ ಆಧ್ಯಕ್ಷ ಜಿ.ಎನ್.ನರಸಿಂಹರೆಡ್ಡಿ ಕೊಂಡನ್ನ,ವೀರಭದ್ರಪ್ಪ, ತಾಲೂಕು ಕೃಷಿ ಇಲಾಖೆ ಸಹಾಯ ನಿರ್ದೇಶಕ ಅಜಯ್ ಕುಮಾರ್ ನಾಯ್ಕ ವಿಸ್ತಾರಣಾಧಿಕಾರಿ ಶಂಷದ್ದೀನ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥ ಗೌಡ ಸಹಾಯಕ ಅಧಿಕಾರಿ ಚೈತ್ರ ಹಾಗೂ ಸಿಬ್ಬಂದಿ ವರ್ಗದವರಿದ್ದರು.