ಪು-2ಕ್ಕೆ...ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಕೌಶಲ ಅಳವಡಿಸಿ

| Published : May 21 2024, 12:32 AM IST

ಪು-2ಕ್ಕೆ...ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಕೌಶಲ ಅಳವಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮಹಾವಿದ್ಯಾಲಯದ ಪ್ರಾಂಶುಪಾಲರುಗಳು ಕಲಿಕೆಯಲ್ಲಿ ತಮ್ಮ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಪಯುಕ್ತವಾಗುವಂತಹ, ಹೊಸ ಹೊಸ ಕೌಶಲ ಅಭಿವೃದ್ಧಿಗಳ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಸಲಹೆ ಮಾರ್ಗದರ್ಶನ ನೀಡಬೇಕು ಎಂದು ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾವಿದ್ಯಾಲಯದ ಪ್ರಾಂಶುಪಾಲರುಗಳು ಕಲಿಕೆಯಲ್ಲಿ ತಮ್ಮ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಪಯುಕ್ತವಾಗುವಂತಹ, ಹೊಸ ಹೊಸ ಕೌಶಲ ಅಭಿವೃದ್ಧಿಗಳ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಸಲಹೆ ಮಾರ್ಗದರ್ಶನ ನೀಡಬೇಕು ಎಂದು ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.

ಬಿ.ಎಲ್.ಡಿ.ಇ ಸಂಸ್ಥೆಯ ಆವರಣದಲ್ಲಿರುವ ಡಾ.ಫ.ಗು. ಹಳಕಟ್ಟಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಸಭಾಂಗಣದಲ್ಲಿ Navigating Youth Towards AmruthaKal: Knowledge Transfer Through Technology and Skill Development” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕುಲಸಚಿವೆ ರಾಜಶ್ರೀ ಜೈನಾಪೂರ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹೆಚ್ಚನ ಅಂಕ ಗಳಿಸುವುದಕ್ಕಿಂತಲೂ ತಮ್ಮ ಜೀವನಕ್ಕೆ ಉಪಯುಕ್ತವಾಗುವ ಕೌಶಲಗಳನ್ನು ಕಲಿಯಲು ಪ್ರಯತ್ನಿಸಬೇಕು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಮೂರು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಮೊದಲನೇ ಗೋಷ್ಠಿಯನ್ನು ಶ್ರೀನಿವಾಸ ಪಿ, ಅವರು Revolutionising ArtificalInteligence in Knowledge Transfer ಎಂಬ ವಿಷಯದ ಬಗ್ಗೆ, ಎರಡನೇ ಗೋಷ್ಠಿಯನ್ನು ಐಐಟಿ ದೆಹಲಿಯ ಡಿ.ಎಸ್. ಮಂಜುನಾಥ ಅವರು ToC Critical Chain-Theory of Constriants Tools Industry 4.0 Innovation ಎಂಬ ವಿಷಯದ ಕುರಿತು, ಮೂರನೇಯ ಗೋಷ್ಠಿಯನ್ನು ಆರ್.ಕೆ.ಇಂಡಸ್ಟ್ರೀಸ್‌ನ ನಿರ್ದೇಶಕ ಸೂರಜ ನಾಡಿಗ Empowering Institutions through Skill Development and Entrepreneurship ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಉಪ ಕುಲಸಚಿವ ಡಾ.ಡಿ.ಕೆ ಕಾಂಬಳೆ, ಬಿಎಲ್‌ಡಿಇ ಸಂಸ್ಥೆಯ ಪ್ರಾಂಶುಪಾಲ್‌ ವಿ.ಜಿ. ಸಂಗಮ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರೊ.ಎಸ್.ಎಂ. ಗಂಗಾಧರಯ್ಯ ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರ ವಿಜಯಪುರದ ನಿರ್ದೇಶಕ ಡಾ.ದಯಾನಂದ ಸಾವಕಾರ ವಂದಿಸಿದರು. ಡಾ.ಪೂರ್ಣಿಮಾ ದಾಮನ್ನವರ ಹಾಗೂ ಡಾ.ರೂಪಾ ಇಂಗಳೆ ಕಾರ್ಯಕ್ರಮವನ್ನು ನಿರೂಪಿಸಿದರು. ವೈಷ್ಣವಿ ನಾಗರಾಳ ಹಾಗೂ ಶ್ರೀರಕ್ಷಾ ಕುಲಕರ್ಣಿ ಗೋಷ್ಠಿಗಳನ್ನು ನಿರ್ವಹಿಸಿದರು.