ಶ್ರೀ ಶಿವಕುಮಾರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಬಸವಣ್ಣನವರು ಬಸವಕಲ್ಯಾಣದಲ್ಲಿ ಸಮಾನತೆಗಾಗಿ ಮಹಾ ಸಾಮಾಜಿಕ ಕ್ರಾಂತಿ ನಡೆಸಿದರು. ಹೆಣ್ಣು, ಹೊನ್ನು, ಮಣ್ಣು ಮತ್ತು ಅಧಿಕಾರಕ್ಕಾಗಿ ಅನೇಕ ಕ್ರಾಂತಿಗಳು ನಡೆದಿದ್ದರೂ, ಸರ್ವ ಸಮಾನತೆಗಾಗಿ ನಡೆದ ಕ್ರಾಂತಿ “ಕಲ್ಯಾಣ ಕ್ರಾಂತಿಯಾಗಿದೆ. ಸಮಾನತೆ, ಸ್ವಾತಂತ್ರ್ಯ, ಕಾಯಕ, ದಾಸೋಹ, ಸೋದರತ್ವ ಹಾಗೂ ಸಹಬಾಳ್ವೆಯ ತತ್ವಗಳ ಆಧಾರದಲ್ಲಿ ವರ್ಣರಹಿತ, ವರ್ಗರಹಿತ ಸಮಾಜ ನಿರ್ಮಾಣವೇ ಬಸವಣ್ಣನವರ ಕನಸಾಗಿತ್ತು. ಜಾತೀಯತೆ, ಅಸ್ಪೃಶ್ಯತೆ ಮತ್ತು ಕಂದಾಚಾರದ ವಿರುದ್ಧ ಅವರು ಹೋರಾಟ ನಡೆಸಿದರು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಮಹಾಪುರುಷರ ಜಯಂತಿಗಳನ್ನು ಆಚರಿಸುವ ಮುಲಕ ಅವರ ತತ್ವ, ಆದರ್ಶ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಯುವಘಟಕ, ಬೇಲೂರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕ, ಬೇಲೂರು ತಾಲ್ಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಶ್ರೀ ಶಿವಕುಮಾರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಬಸವಣ್ಣನವರು ಬಸವಕಲ್ಯಾಣದಲ್ಲಿ ಸಮಾನತೆಗಾಗಿ ಮಹಾ ಸಾಮಾಜಿಕ ಕ್ರಾಂತಿ ನಡೆಸಿದರು. ಹೆಣ್ಣು, ಹೊನ್ನು, ಮಣ್ಣು ಮತ್ತು ಅಧಿಕಾರಕ್ಕಾಗಿ ಅನೇಕ ಕ್ರಾಂತಿಗಳು ನಡೆದಿದ್ದರೂ, ಸರ್ವ ಸಮಾನತೆಗಾಗಿ ನಡೆದ ಕ್ರಾಂತಿ “ಕಲ್ಯಾಣ ಕ್ರಾಂತಿಯಾಗಿದೆ. ಸಮಾನತೆ, ಸ್ವಾತಂತ್ರ್ಯ, ಕಾಯಕ, ದಾಸೋಹ, ಸೋದರತ್ವ ಹಾಗೂ ಸಹಬಾಳ್ವೆಯ ತತ್ವಗಳ ಆಧಾರದಲ್ಲಿ ವರ್ಣರಹಿತ, ವರ್ಗರಹಿತ ಸಮಾಜ ನಿರ್ಮಾಣವೇ ಬಸವಣ್ಣನವರ ಕನಸಾಗಿತ್ತು. ಜಾತೀಯತೆ, ಅಸ್ಪೃಶ್ಯತೆ ಮತ್ತು ಕಂದಾಚಾರದ ವಿರುದ್ಧ ಅವರು ಹೋರಾಟ ನಡೆಸಿದರು ಎಂದು ಹೇಳಿದರು.

ಬದಲಾವಣೆಯ ಕ್ರಾಂತಿ:

ಶಾಸಕ ಎಚ್ ಕೆ ಸುರೇಶ್‌ ಮಾತನಾಡಿ, ಬಸವಣ್ಣನವರ “ಕಾಯಕವೇ ಕೈಲಾಸ” ತತ್ವವು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಜಗತ್ತಿನ ಮೊದಲ ಪ್ರಜಾಪ್ರಭುತ್ವ ಸಂಸತ್ತಾದ ಅನುಭವ ಮಂಟಪವನ್ನು ಸ್ಥಾಪಿಸಿ ಸಮಾನತೆ, ನ್ಯಾಯ ಹಾಗೂ ಚಿಂತನೆಯ ಸಂಸ್ಕೃತಿಯನ್ನು ಬೆಳೆಸಿದ ಮಹಾನ್ ಜ್ಞಾನಿ ಬಸವಣ್ಣನವರು. ಮಹಿಳಾ ಸಮಾನತೆ ಕುರಿತು ಸುಮಾರು ೯೦೦ ವರ್ಷಗಳ ಹಿಂದೆಯೇ ಸ್ತ್ರೀ-ಪುರುಷ ಸಮಾನತೆಯನ್ನು ಸಾರಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಅಕ್ಕಮಹಾದೇವಿ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ ಸೇರಿದಂತೆ ಅನೇಕ ಶರಣರನ್ನು ಒಗ್ಗೂಡಿಸಿ ಸಮಾಜದಲ್ಲಿ ಬದಲಾವಣೆಯ ಕ್ರಾಂತಿ ತಂದರು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಮಹಿಳೆಯರಿಗೆ ನೀಡಲಾಗುತ್ತಿರುವ ಮೀಸಲಾತಿಯ ಹಿನ್ನೆಲೆ ಬಸವ ತತ್ವಗಳೇ ಕಾರಣವಾಗಿವೆ. ಮಹಿಳೆಯರೇ ಈ ದೇಶದ ನಿಜವಾದ ಶಕ್ತಿ ಎಂದರು. ಸಚಿವರಿಗೆ ಬೇಡಿಕೆ ಇಟ್ಟ ಶಾಸಕ :

ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಬಳಿ ದೊಡ್ಡ ಅನುಭವ ಮಂಟಪ ನಿರ್ಮಿಸಲು ₹೨೫ ಕೋಟಿ ಅನುದಾನ ಬಿಡುಗಡೆ ಮಾಡುಬೇಕು. ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ವನ ಅಥವಾ ಸ್ಮಾರಕ ನಿರ್ಮಿಸಬೇಕು. ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಮಠಕ್ಕೆ ಆಗಮಿಸುವ ಭಕ್ತರ ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಹಾಳಾಗಿರುವ ಟೂರಿಸ್ಟ್ ಬಂಗ್ಲೋವನ್ನು ಮಠಕ್ಕೆ ಅಥವಾ ಸೂಕ್ತ ನಿರ್ವಹಣೆಗೆ ಹಸ್ತಾಂತರಿಸಬೇಕು.ಇದೇ ವೇಳೆ ಹಲವಾರು ವರ್ಷಗಳಿಂದ ಕಾಡಾನೆ ದಾಳಿಗೆ ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಭಾಗದ ರೈತರು ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಸಚಿವರ ಗಮನ ಸೆಳೆದ ಅವರು, ರೈತರ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪುಷ್ಪಗಿರಿ ಮಹಾ ಸಂಸ್ಥಾನದ ಸ್ವಾಮೀಜಿ ಸೋಮಶೇಖರ ಸ್ವಾಮೀಜಿ ಮಾತನಾಡಿ ಬಸವಣ್ಣನವರ ವಚನ ವಿಚಾರ ವೇದಿಕೆಗೆ ಸೀಮಿತವಾಗಬಾರದು, ಆಚರಣೆಗೆ ತರಲು ವೇದಿಕೆಗಳು ವಿಪಲವಾಗುತ್ತಿದೆ, ನಾವು ಬೇರೆಯವರನ್ನು ದುಷಿಸುವ ಮೊದಲು ನಾವು ಸರಿಯಾಗಿದ್ದೀವಾ ಎಂದು ಮೊದಲು ಅರಿಯಬೇಕು, ಬಸವಣ್ಣನವರ ವಿಷಯಗಳನ್ನು ಅಧ್ಯಯನ ಮಾಡುವ ಕೆಲಸ ಮಾಡಬೇಕು, ಅಂದಿನ ಜಯಂತಿಗೂ ಇಂದಿನ ಜಯಂತಿಗೆ ಅಜಗಜಾಂತರ ಇದೆ. ಅಂದು ರಾಜಕೀಯ ಸನ್ನಿವೇಶ ಹತ್ತಿರ ಬರುತ್ತಿರಲಿಲ್ಲ, ಇಂದು ರಾಜಕೀಯ ವಿಚಾರಗಳು ಅವಲಂಬಿತವಾಗಿದೆ, ಧಾರ್ಮಿಕ, ಸಾಂಸ್ಕೃತಿಕ ವಿಚಾರ ನಶಿಸುತ್ತಿದೆ, ಅಂದಿನಿಂದ ಇಂದಿನ ತನಕ ಧರ್ಮದ ಗುರುಗಳು ತನಕ ವಚನ ಯಾರೂ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಕಾರಣ ಅರ್ಥ ಮಾಡಿಕೊಳ್ಳವ ಸಮಯ, ಮನಸ್ಸು ಮಾಡುತ್ತಿಲ್ಲ, ಇಂದು ನಾನು ಮೇಲು, ನೀನು ಕೀಳು ಎಂಬುದು ತಾಂಡವವಾಡುತ್ತಿದೆ,ನಮ್ಮ ಕುಟುಂಬದಲ್ಲಿ ಮೊದಲು ಬಸವಣ್ಣನವರ ವಿಚಾರ ದಾರೆಗಳನ್ನು ಅರಿತಿರಬೇಕು ನಂತರ ವೇದಿಕೆಯಲ್ಲಿ ಹಂಚಿಕೊಳ್ಳುವ ಕೆಲಸ ಮಾಡಬೇಕು, ಇಂದು ನಡೆಯುವ ಕಾರ್ಯಕ್ರಮಗಳು ಬಸವಣ್ಣನವರ ಕಾರ್ಯಕ್ರಮವಾಗಿರಬೇಕು ಕೇವಲ ಭಾಷಣಕ್ಕೆ ಸೀಮಿತವಾಗಿರಬಾರದು ಜಾತಿ ತಾರತಮ್ಯ, ಹೋಗಲಾಡಿಸಿದರೆ ಮಾತ್ರ ಬಸವಣ್ಣನವರ ಜಯಂತಿಗೆ ಅರ್ಥ ಸಿಗುತ್ತದೆ ಎಂದರು. ಅಖಿಲ ಭಾರತ ವೀರ ಶೈವ ಲಿಂಗಾಯತ ಮಹಾ ಸಭಾ ರಾಷ್ಟ್ರೀಯ ಮಹಿಳಾ ಘಟಕ ಅಧ್ಯಕ್ಷರಾದ ವೀಣಾ ಕಾಶಪ್ಪನವರು ಮಾತನಾಡಿ, ಭೂಮಿ ಮೇಲೆ ಹುಟ್ಟಿದ ಮೇಲೆ ಸಾರ್ಥಕ ಕೆಲಸಗಳನ್ನು ಮಾಡಬೇಕು, ಬಸವಣ್ಣನವರ ವಚನ, ತತ್ವಗಳು ಅವರು ಬಿಟ್ಟು ಹೋಗಿರುವ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಮನುಷ್ಯನಲ್ಲಿ ಮೇಲು ಕೀಳು ಮೊದಲು ಬಿಡಬೇಕು, ಹೊಟ್ಟೆ ಕಿಚ್ಚು ಇರಲೇ ಬಾರದು, ತಾಲೂಕಿನಲ್ಲಿ 60 ಸಾವಿರಕ್ಕೂ ಅಧಿಕ ವೀರ ಶೈವ ಲಿಂಗಾಯತರಿದ್ದು ಸಮಾಜದಲ್ಲಿ ಒಡಕು ಹೆಚ್ಚಿದೆ, ಅದನ್ನು ಹೋಗಲಾಡಿಸಿದರೆ ಮಾತ್ರ ಸಮಾಜದ ಗಟ್ಟಿತನ ಬೆಳೆಯುತ್ತದೆ, ವೀರ ಶೈವ ಲಾಂಗಾಯತ ಒಂದೇ, ವೀರಶೈವ ಬೇರೆ, ಲಿಂಗಾಯತ ಬೇರೆ ಅಲ್ಲ, ನಮ್ಮಲ್ಲಿ ಸುಮಾರು 90 ಕ್ಕೂ ಅಧಿಕ ಉಪ ಜಾತಿಗಳಿದ್ದು ಕೊನೆಗೆ ವೀರಶೈವ ಲಿಂಗಾಯತ ಜಾತಿನೇ ಶ್ರೇಷ್ಠ, ಮಹಿಳೆಯರು ಸಮಾನತೆಯನ್ನು ತೋರಲು ಮುಂದೆ ಬರಬೇಕು, ವಚನಗಳ ಮೂಲಕ ಮಹಿಳೆಯರ ಬಗ್ಗೆ ತಿಳಿಸಿದ್ದ ಬಸವಣ್ಣನವರು, ಅದರಂತೆ ಮಹಿಳೆಯರು ಮುಂದೆ ಬರಲು ಅವರ ವಿಚಾರ ಧಾರೆಗಳನ್ನು ಅರಿತಿರಬೇಕು, ಮಹಿಳಾ ಸಬಲೀಕರಣಕ್ಕೆ ವಚನಗಳ ಮೂಲಕ ತಿಳಿಸಿಕೊಟ್ಟವರು ಬಸವಣ್ಣನವರು, ಅಂದೇ ಪಾರ್ಲಿಮೆಂಟ್ ಅನುಭವ ಮಂಟಪವಾಗಿತ್ತು ಮಹಿಳೆಯರು ಎಲ್ಲಾ ರಂಗದಲ್ಲೂ ಮುಂದೆ ಬರಬೇಕು, ಹೆಣ್ಣು ಮನಸ್ಸು ಮಾಡಿದರೆ ಸಾದಿಸುವ ಕೆಲಸ ಕಠಿಣವಾಗಲ್ಲ, ಮನುಷ್ಯ ಜನ್ಮಕ್ಕೆ ಮುಕ್ತಿ ಸಿಗಬೇಕಂದರೆ ತತ್ವ ವಚನ ವಿಚಾರ ಲಿಂಗ ಭೇದ ಮಾಡದೇ ಬದುಕಿದರೆ ಮಾತ್ರ ಮುಕ್ತಿ ಸಿಗುತ್ತದೆ ಎಂದರು,ಕಾರ್ಯಕ್ರಮದಲ್ಲಿ ಅರಕಲಗೂಡು ದೊಡ್ಡಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾದರನಹಳ್ಳಿ ನಟರಾಜ್, ರಾಷ್ಟ್ರೀಯ ಸದಸ್ಯ ಗ್ರಾನೈಟ್ ರಾಜಶೇಖರ್, ರಾಷ್ಟ್ರೀಯ ಉಪಾಧ್ಯಕ್ಷೆ ಬಿ.ಕೆ.ಚಂದ್ರಕಲಾ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ವೀಣಾ ಕಾಶಪ್ಪನವರ್, ಹಾಸನ ಜಿಲ್ಲಾ ಅಧ್ಯಕ್ಷ ನವಿಲೆ ಪರಮೇಶ್, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ತಾಲೂಕು ಅಧ್ಯಕ್ಷ ಎ.ಎಸ್.ಬಸವರಾಜು, ಮಹಿಳಾ ಅಧ್ಯಕ್ಷೆ ಇಂಪು ಸಂತೋಷ್, ಯುವ ಘಟಕ ಅಧ್ಯಕ್ಷ ಹಳೇಬೀಡು ಚೇತನ, ರಾಜ್ಯ ಯುವ ಘಟಕದ ಕಾರ್ಯದರ್ಶಿ ವಿಕ್ರಮ್ ಕೌರಿ, ಉಪಾಧ್ಯಕ್ಷೆ ಗೀತಾಪುಟ್ಟಸ್ವಾಮಿ ಮುಂತಾದವರು ಹಾಜರಿದ್ದರು.