ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವ ಒಂದೇ ಉದ್ದೇಶ ಇಟ್ಟುಕೊಳ್ಳದೆ ಏಕಾಗ್ರತೆ, ಧೈರ್ಯ, ಸಾಹಸ, ಪುರುಷಾರ್ಥಗಳಿಂದ ಭವಿಷ್ಯ ಜೀವನಕ್ಕೆ ಆದರ್ಶ ಪಡೆಯಬೇಕೆಂದು ಜೀತೇಂದ್ರ ಮಜೇಥಿಯಾ ಹೇಳಿದರು.
ಹುಬ್ಬಳ್ಳಿ:
ವರ್ತಮಾನದಲ್ಲಿ ಮಾನವನ ಮನಸ್ಸು ಸಮಸ್ಯೆಗಳಿಂದ ತಲ್ಲಣಗೊಳ್ಳುತ್ತಿದೆ. ಮನಸ್ಸಿಗೆ ಶಾಂತಿ, ನೆಮ್ಮದಿ, ತೃಪ್ತಿ ಇಲ್ಲದಾಗಿದೆ. ಭಗವದ್ಗೀತೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನ ಪಾವನವಾಗುತ್ತದೆ ಎಂದು ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜೀತೇಂದ್ರ ಮಜೇಥಿಯಾ ಹೇಳಿದರು.ಇಲ್ಲಿನ ಭೈರಿದೇವರಕೊಪ್ಪದಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಭಗವದ್ಗೀತಾ ಜ್ಞಾನಲೋಕದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವದ್ಗೀತಾ 5162ನೇ ಗೀತಾ ಜಯಂತಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವ ಒಂದೇ ಉದ್ದೇಶ ಇಟ್ಟುಕೊಳ್ಳದೆ ಏಕಾಗ್ರತೆ, ಧೈರ್ಯ, ಸಾಹಸ, ಪುರುಷಾರ್ಥಗಳಿಂದ ಭವಿಷ್ಯ ಜೀವನಕ್ಕೆ ಆದರ್ಶ ಪಡೆಯಿರಿ ಎಂದು ಕರೆ ನೀಡಿದರು.
ಪ್ರಾಂಶುಪಾಲ ಸಂಜಯ ಪೀಠಾಪುರ, ಡಾ. ಬಸವರಾಜ ರಾಜಋಷಿಗಳು ಮಾತನಾಡಿದರು. ಚಿನ್ಮಯಾ ಪಿ.ಯು. ಕಾಲೇಜು, ಮಹೇಶ ಪಿ.ಯು. ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು. ಪ್ರಿನ್ಸಿಪಾಲ್‌ರಾದ ಸಂಜಯ್ ಪೀಠಾಪುರ, ಶ್ರುತಿ ಬುಲಬುಲೆ, ವಾಣಿ ಕೆ, ಉಪನ್ಯಾಸಕರಾದ ಶೋಭಾ ಸಿಂಧೆ, ಚಂದ್ರಶೇಖರ, ಪ್ರಸನ್ನ ಡಿ.ಎಲ್, ಅಶ್ವಿನಿ ಕೆ. ಮತ್ತು ಸುನೀಲ್, ಅಶ್ವಿನಿ ಕುಕನೂರ ಉಪಸ್ಥಿತರಿದ್ದರು.