ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯ ರೈತರ ಮಕ್ಕಳಿಗೆ ಅನುಕೂಲವಾಗುವಂತೆ ಅವಶ್ಯವಿರುವ ‘ವಿದ್ಯಾ ಸಹಕಾರ’ ಹೆಸರಿನ ವಿದ್ಯಾಭ್ಯಾಸ ಸಾಲದ ಯೋಜನೆಯನ್ನು ಬ್ಯಾಂಕಿನಲ್ಲಿ ಪ್ರಥಮವಾಗಿ ಜಾರಿಗೊಳಿಸಿ ವೈಯಕ್ತಿಕ ಗರಿಷ್ಠ ರು.60 ಲಕ್ಷ ವರೆಗೆ ಸಾಲ ನೀಡಲಾಗುತ್ತಿದೆ ಎಂದು ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, 2023-24 ನೇ ಸಾಲಿನಲ್ಲಿ ಒಟ್ಟು ವ್ಯವಹಾರ ರು.2926.07 ಕೋಟಿ ದಾಖಲಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ರು. 524.97 ಏರಿಕೆ ಕಂಡಿದೆ ಎಂದು ಹೇಳಿದ್ದಾರೆ.
ರೈತ ಸದಸ್ಯರ ಬೆಳೆ ಸಾಲದ ಬೇಡಿಕೆಯನ್ನು ಪೂರೈಸಲು ಅನುಕೂಲವಾಗುವಂತೆ ಬ್ಯಾಂಕು ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ತಹಲ್‌ವರೆಗೆ ರೂ.1006.94 ಕೋಟಿ ಮೊತ್ತದ ಎನ್.ಸಿ.ಎಲ್. ಮಂಜೂರಾತಿ ಮಾಡಿ ಈಗಾಗಲೇ ರೂ 730.36 ಕೋಟಿ ಅರ್ಹ ರೈತ ಸದಸ್ಯರಿಗೆ ಸಾಲ ವಿತರಣೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಜಿಲ್ಲೆಯ ಸದಸ್ಯ ಸಹಕಾರ ಸಂಘಗಳಿಗೆ ಹಾಗೂ ಇತರ ಖಾಸಗಿ ಸಂಘ/ ಸಂಸ್ಥೆಗಳಿಗೆ ಅನುಕೂಲವಾಗುವಂತೆ ನಿವೇಶನ/ ಕಟ್ಟಡ ಖರೀದಿಗಾಗಿ 2024-25 ನೇ ಸಾಲಿನಿಂದ ಹೊಸ ಸಾಲ ಯೋಜನೆ ರೂಪಿಸಲಾಗಿದೆ. ಹಾಲಿ ನೀಡುತ್ತಿರುವ ಸೋಲರ್ ಅಳವಡಿಕೆಗೆ ಇರುವ ಸಾಲದ ಮಿತಿಯನ್ನು ರು. 60 ಲಕ್ಷ ಗಳಿಗೆ ಹೆಚ್ಚಿಸಲಾಗಿದೆ. ಸಿಸಿಟಿವಿ ಮತ್ತು ಇನ್ವರ್ಟರ್ ಅಳವಡಿಕೆಗಾಗಿ ರು. 60 ಲಕ್ಷಗಳ ವರೆಗೆ ಸಾಲ ನೀಡಿಕೆಗೆ ಹೊಸ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಸಾಧಕ ಸಂಘಗಳಿಗೆ ಗೌರವ:ಕೊಡಗು ಜಿಲ್ಲೆಯ ಸಹಕಾರ ವಿವಿO ಸಹಕಾರ ಸಂಘಗಳು 2023-24ನೇ ಸಾಲಿನಲ್ಲಿ ಉತ್ತಮ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಿ ಪ್ರಶಸ್ತಿಗೆ ಆಯ್ಕೆಯಾಗಿವೆ. ಸಹಕಾರ ಸಂಘಗಳ ಪೈಕಿ ಮಡಿಕೇರಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರಥಮ ಭಾಗಮಂಡಲ ಪ್ರಾ.ಕೃ.ಪ.ಸ.ಸಂಘ ನಿ,.ದ್ವಿತೀಯ ಪಾರಾಣೆ ಪ್ರಾ.ಕೃ.ಪ.ಸ.ಸಂಘ ನಿ, ತೃತೀಯ ಮದೆ ಪ್ರಾ.ಕೃ.ಪ.ಸ. ಸಂಘನಿ, ಸೋಮವಾರಪೇಟೆ ತಾಲ್ಲೂಕು ಪ್ರಥಮ ಮಾದಾಪುರ ಪ್ರಾ.ಕೃ.ಪ.ಸ.ಸಂಘ, ದ್ವಿತೀಯ ರಾಮೇಶ್ವರ ಕೂಡುಮಂಗಳೂರು ಪ್ರಾ.ಕೃ.ಪ.ಸ.ಸಂಘ ನಿ., ಕೂಡಿಗೆ, ತೃತೀಯ ಐಗೂರು. ಪ್ರಾ.ಕೃ.ಪ.ಸ. ಸಂಘ ನಿ., ವಿರಾಜಪೇಟೆ ತಾಲ್ಲೂಕು: ಪ್ರಥಮ ಹಾತೂರು ಪ್ರಾ.ಕೃ.ಪ.ಸ.ಸಂಘ ನಿ., ದ್ವಿತೀಯ ಬೆಳ್ಳುಮಾಡು ಪ್ರಾ.ಕೃ.ಪ.ಸ.ಸಂಘ ನಿ., ತೃತೀಯ ಟಿ. ಶೆಟ್ಟಿಗೇರಿ ಪ್ರಾ.ಕೃ.ಪ.ಸ.ಸಂಘ ನಿ., ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳಲ್ಲಿ ಪ್ರಥಮ ಕುಶಾಲನಗರ ಎ.ಪಿ.ಸಿ.ಎಂ.ಎಸ್ ದ್ವಿತೀಯ ಬಾಳೆಲೆ ಎ.ಪಿ.ಸಿ.ಎಂ.ಎಸ್ ತೃತೀಯ ಮೂರ್ನಾಡು ಎ.ಪಿ.ಸಿ.ಎಂ.ಎಸ್, ಸಹಕಾರ ದವಸ ಭಂಡಾರಗಳು ಪೈಕಿ: ಪ್ರಥಮ ಬಲಮುರಿ ಸಹಕಾರ ಧವಸ ಭಂಡಾರ, ದ್ವಿತೀಯ ಕುಟ್ಟಿಚಾತ ದವಸ ಭಂಡಾರ ಪೊನ್ನಂಪೇಟೆ, ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಪೈಕಿ: ಪ್ರಥಮ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘ ಸೋಮವಾರಪೇಟೆ, ದ್ವಿತೀಯ ನಾಡಪ್ರಭು ಪತ್ತಿನ ಸಹಕಾರ ಸಂಘ, ಕುಶಾಲನಗರ ತೃತೀಯ ಸೋಮವಾರಪೇಟೆ ವಿವಿಧೋದ್ದೇಶ ಸಹಕಾರ ಸಂಘ ನಿ., ಸೋಮವಾರಪೇಟೆ, ಪಟ್ಟಣ/ ಮಹಿಳಾ ಸಹಕಾರ ಬ್ಯಾಂಕುಗಳಲ್ಲಿ: ಪ್ರಥಮ ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ ನಿ, ಮಡಿಕೇರಿ. ಸಹಕಾರ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಲ್ಲಿ: ಪ್ರಥಮ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕು ನಿ, ವಿರಾಜಪೇಟೆ. ಸೌಹಾರ್ದ ಪತ್ತಿನ ಸಹಕಾರ ಸಂಘಗಳಲ್ಲಿ: ಪ್ರಥಮ ಕೊಡಗು ಸೌಹಾರ್ಧ ಪತ್ತಿನ ಸಹಕಾರ ಸಂಘ ನಿ., ಮಡಿಕೇರಿ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಸಂಘಗಳನ್ನು ಮಹಾಸಭೆಯಲ್ಲಿ ಗೌರವಿಸಿ ಪ್ರೋತ್ಸಾಹಿಸಲಾಗಿದೆ ಎಂದು ಕೊಡಂದೇರ ಬಾಂಡ್ ಗಣಪತಿ ತಿಳಿಸಿದ್ದಾರೆ.