ರಾಜ್ಯ ಸರ್ಕಾರದ ಗ್ರಾಮಾಂತರ ಗೃಹ ಆರೋಗ್ಯ ಯೋಜನೆ ಮಾರ್ಚ್‌ನಲ್ಲಿ ಜಾರಿʼ : ಆರೋಗ್ಯ ಇಲಾಖೆ ಸಿದ್ದತೆ

| N/A | Published : Feb 16 2025, 01:50 AM IST / Updated: Feb 16 2025, 12:02 PM IST

ರಾಜ್ಯ ಸರ್ಕಾರದ ಗ್ರಾಮಾಂತರ ಗೃಹ ಆರೋಗ್ಯ ಯೋಜನೆ ಮಾರ್ಚ್‌ನಲ್ಲಿ ಜಾರಿʼ : ಆರೋಗ್ಯ ಇಲಾಖೆ ಸಿದ್ದತೆ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ತಾಲೂಕಿನಲ್ಲಿ ಗೃಹ ಆರೋಗ್ಯ ಯೋಜನೆಗೆ ಬ್ಯಾನರ್‌ ಸಿದ್ಧವಾಗಿರುವುದು.

  ಗುಂಡ್ಲುಪೇಟೆ :  ರಾಜ್ಯ ಸರ್ಕಾರ ಗ್ರಾಮಾಂತರ ಜನರ ಆರೋಗ್ಯದ ಹಿತದೃಷ್ಟಿಯಿಂದ ಗೃಹ ಆರೋಗ್ಯ ಯೋಜನೆ ಜಾರಿಗೆ ತಂದಿದ್ದು, ಬರುವ ಮಾರ್ಚ್‌ನಲ್ಲಿ ತಾಲೂಕಿನಲ್ಲಿ ಗೃಹ ಆರೋಗ್ಯ ಯೋಜನೆ ಆರಂಭಿಸಲು ತಾಲೂಕು ಆರೋಗ್ಯ ಇಲಾಖೆ ಸಿದ್ದತೆ ನಡೆಸಿದೆ.

ಕಳೆದ ಜ.೭ರಂದು ಗೃಹ ಆರೋಗ್ಯ ಯೋಜನೆ ಆರಂಭಿಸಲು ಸಿದ್ಧತೆ ನಡೆಸಿತ್ತು. ಕಾರಣಾಂತರಗಳಿಂದ ಮುಂದಿನ ತಿಂಗಳು ಆರಂಭಿಸಲು ತಾಲೂಕು ಆರೋಗ್ಯ ಇಲಾಖೆ ಮುಂದಾಗಿದೆ.

ಏನಿದು ಯೋಜನೆ:  ಗೃಹ ಆರೋಗ್ಯ ಯೋಜನೆಯಲ್ಲಿ ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಭೇಟಿ ನೀಡಿ ೩೦ ವರ್ಷ ಮೇಲ್ಪಟ್ಟ ಜನರ ತಪಾಸಣೆ ನಡೆಸಲಿದ್ದಾರೆ. ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಗೃಹ ಆರೋಗ್ಯ ಯೋಜನೆ ಕಾರ್ಯಕ್ರಮ ನಡೆಯಲಿದೆ.

1) ಪ್ರಮುಖ 6 ಅಸಾಂಕ್ರಾಮಿಕ ಕಾಯಿಲೆಗಳಿಗೆ ಪ್ರಾಥಮಿಕ ಹಂತದ ತಪಾಸಣೆ.

2) ಬಾಯಿ, ಸ್ತನ ಮತ್ತು ಗರ್ಭ ಕಂಠದ ಕ್ಯಾನ್ಸರ್‌ ಹಾಗೂ ಮಾನಸಿಕ ರೋಗಿಗಳಿಗೆ ಪ್ರಾಥಮಿಕ ಹಂತ ತಪಾಸಣೆ.

3) ಮಧು ಮೇಹ ಮತ್ತು ಅಧಿಕ ರಕ್ತದೊತ್ತಡ (ಬಿಪಿ)ಗೆ ಉಚಿತ ಔಷಧ ವಿತರಣೆ.4) ನಿದ್ರೆಯಲ್ಲಿ ಉಸಿರುಕಟ್ಟುವಿಕೆ (sleep apnea), ಬಿಎಂಸಿ ಅಸಮತೋಲನ, ಧೂಮಪಾನ ಮತ್ತು ಮಧ್ಯಪಾನದಂತ ಅಪಾಯಕಾರಿ ಲಕ್ಷಣಗಳ ಕುರಿತು ಆರೋಗ್ಯ ಶಿಕ್ಷಣ ಆಪ್ತ ಸಮಾಲೋಚನೆ.ರಾಜ್ಯಸರ್ಕಾರ ಗೃಹ ಆರೋಗ್ಯ ಯೋಜನೆ ಜಾರಿಗೆ ತಂದಿದೆ. ಇದು ಒಳ್ಳೆಯ ಯೋಜನೆ. ಗ್ರಾಮೀಣ ಜನರ ಆರೋಗ್ಯ ಕಾಪಾಡಿಕೊಳ್ಳಲು ಈ ಯೋಜನೆ ಅನುಕೂಲವಾಗಲಿದೆ. ಜನರು ಕೂಡ ತಪಾಸಣೆಗೆ ಒಳಗಾಗಿ ಆರೋಗ್ಯದ ಕಡೆಗೆ ಗಮನ ಹರಿಸಲಿ.

-ಎಚ್.ಎಂ.ಗಣೇಶ್‌ ಪ್ರಸಾದ್‌, ಶಾಸಕಈಗಾಗಲೇ ತಾಲೂಕಿನಲ್ಲಿ ೩೦ ವರ್ಷ ಮೇಲ್ಪಟ್ಟ ಜನರ ಸರ್ವೆ ನಡೆಸಲಾಗಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಪ್ರತಿ ಮನೆ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಬರುವ ಮಾರ್ಚ್‌ನಲ್ಲಿ ಶುರುವಾಗಲಿದೆ.

-ಡಾ.ಅಲೀಂ ಪಾಶ, ಟಿಎಚ್‌ಒ,ಗುಂಡ್ಲುಪೇಟೆ