ಸಾರಾಂಶ
ಶರಾವತಿ ಪಂಪ್ಡ್ ಸ್ಟೋರೇಜ್ ಹೆಸರಿನಲ್ಲಿ ಪಶ್ಚಿಮಘಟ್ಟದ ಹೃದಯವನ್ನು ಸೀಳುವ ಕೆಲಸ ಮಾಡಬೇಡಿ. ಇಂತಹ ಯೋಜನೆಗಳು ರಾಜಕಾರಣಿಗಳಿಗೆ ಹಣ ಮಾಡಿಕೊಳ್ಳಲೆ ಹೊರತು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಇದರಿಂದ ಲಭ್ಯವಾಗುವುದಿಲ್ಲ ಎಂದು ಪರಿಸರಕ್ಕಾಗಿ ನಾವು ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅಭಿಪ್ರಾಯಪಟ್ಟರು.
ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಹೆಸರಿನಲ್ಲಿ ಪಶ್ಚಿಮಘಟ್ಟದ ಹೃದಯವನ್ನು ಸೀಳುವ ಕೆಲಸ ಮಾಡಬೇಡಿ. ಇಂತಹ ಯೋಜನೆಗಳು ರಾಜಕಾರಣಿಗಳಿಗೆ ಹಣ ಮಾಡಿಕೊಳ್ಳಲೆ ಹೊರತು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಇದರಿಂದ ಲಭ್ಯವಾಗುವುದಿಲ್ಲ ಎಂದು ಪರಿಸರಕ್ಕಾಗಿ ನಾವು ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅಭಿಪ್ರಾಯಪಟ್ಟರು.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಶಿವಮೊಗ್ಗ ಜಿಲ್ಲಾ ರೈತ ಸಂಘದಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ನಡೆಸುತ್ತಿರುವ ೯ನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿ, ಶರಾವತಿ ಕಣಿವೆ ಭೌಗೋಳಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿ ಯೋಜನೆ ಅನುಷ್ಠಾನದಿಂದ ನದಿಮೂಲ ಬತ್ತುವ ಜೊತೆಗೆ ಜಲಕ್ಷಾಮ ಉಂಟಾಗುವ ಸಾಧ್ಯತೆಯೂ ಇದೆ ಎಂದರು. ಪರಿಸರಕ್ಕೆ ಮಾರಕವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಬೆಂಗಳೂರಿನಲ್ಲಿ ಪರಿಸರವಾದಿಗಳ ಸಭೆ ನಡೆಸಿದ್ದು, ಯೋಜನೆ ಯಾವುದೇ ಕಾರಣಕ್ಕೂ ಕೈಗೆತ್ತಿಕೊಳ್ಳಬಾರದು ಎಂದು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಕಾರ್ಪೋರೇಟ್ ವ್ಯಕ್ತಿಗಳಿಗೆ ಮಣೆ ಹಾಕುತ್ತಿದ್ದು, ಇಂತಹ ಯೋಜನೆ ಹಿಂದೆ ಸದುದ್ದೇಶ ಇಲ್ಲ. ಹಣಕ್ಕಾಗಿ ಏನು ಬೇಕಾದರೂ ಮಾಡುವ ಸ್ಥಿತಿಯಲ್ಲಿದೆ ರಾಜ್ಯ ಸರ್ಕಾರ ಎಂದು ದೂರಿದರು.ವಿದ್ಯುತ್‌ಗಾಗಿ ಪರ್ಯಾಯ ಮಾರ್ಗಗಳನ್ನು ಬಳಸಲು ಸಾಕಷ್ಟು ಅವಕಾಶ ಇದೆ. ಅದನ್ನು ಬಿಟ್ಟು ಪಶ್ಚಿಮಘಟ್ಟದ ಹೃದಯಭಾಗವನ್ನು ಬಗೆಯಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರಮುಖರಾದ ತೀ.ನ.ಶ್ರೀನಿವಾಸ್, ಹಿತಕರ ಜೈನ್, ವೀರಪ್ಪ ಹರಕೇರಿ, ಆರ್.ಜಿ.ತಿಮ್ಮಾಪುರ, ಡಾ.ರಾಜಶೇಖರ ಧಾರವಾಡ, ವಿಠ್ಠಲ ರಾವ್, ಮಾಧುರಿ ಅಶೋಕ್ ಧಾರವಾಡ, ಕವಿತಾ.ಎ.ಎಸ್, ಅಶ್ವಿನಿ ಚಿಪ್ಪಳಿ, ಪ್ರಕಾಶ್ ಶಿವಮೊಗ್ಗ, ಅಶೋಕಕುಮಾರ್, ಪರಶುರಾಮೆ ಗೌಡ, ಡಾ.ಬಸವರಾಜ್ ರಾಣಿಬೆನ್ನೂರು, ಬಾಪೆಗೌಡ, ನಾಡೆಗೌಡ ಕೋಲಾರ, ಪರಶುರಾಮ ಶಿವಮೊಗ್ಗ, ಹಿತಕರ ಜೈನ್, ರಮೇಶ್ ಕೆಳದಿ, ಭದ್ರೇಶ್ ಬಾಳಗೋಡು, ಕುಮಾರ ಗೌಡ ಮತ್ತಿತರರಿದ್ದರು.