ಸಾರಾಂಶ
ಪಕ್ಕದ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತೀರ ಹದಗೆಟ್ಟಿವೆ. ಅವುಗಳನ್ನು ಹಂತ, ಹಂತವಾಗಿ ಸುಧಾರಣೆ ಮಾಡಲಾಗುವುದು ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಪಕ್ಕದ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತೀರ ಹದಗೆಟ್ಟಿವೆ. ಅವುಗಳನ್ನು ಹಂತ, ಹಂತವಾಗಿ ಸುಧಾರಣೆ ಮಾಡಲಾಗುವುದು ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.ರಾಮದುರ್ಗ ತಾಲೂಕಿನ ಉಜ್ಜಿನಕೊಪ್ಪ ಗ್ರಾಮದ ಮೂಲಕ ಬೆನಕಟ್ಟಿಗೆ ಹೋಗುವ ರಸ್ತೆಯನ್ನು ₹21 ಲಕ್ಷ ವೆಚ್ಚದಲ್ಲಿ ಉಜ್ಜಿನಕೊಪ್ಪ-ಜೀವಾಪೂರ ರಸ್ತೆ ಸುಧಾರಣೆ ಮಾಡುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೊನೆಯ ಹಳ್ಳಿಗಳಲ್ಲಿ ಪಕ್ಕದ ತಾಲೂಕಿಗೆ ಹೋಗುವ ರಸ್ತೆಗಳನ್ನು ಸಮೀಕ್ಷೆ ಮಾಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.ರಾಜ್ಯ ಸರ್ಕಾರ 5 ಯೋಜನೆಗಳನ್ನು ಜಾರಿ ಮಾಡಿ ಹೆಸರು ಮಾಡಿಕೊಂಡಿರುವುದು ವಿರೋಧ ಪಕ್ಷಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಗೆ ಹಣ ಇಲ್ಲ ಎಂದು ಸುಳ್ಳು ಹೇಳುತ್ತಿವೆ. ಅಭಿವೃದ್ಧಿ ಕಾರ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಾವು ತೆಗೆದುಕೊಳ್ಳುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಬಾಳಪ್ಪ ಹಂಜಿ, ಗುತ್ತಿಗೆದಾರ ಎಸ್.ಬಿ. ಹೊಸಮನಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.