ಅಂಬೇಡ್ಕರ್ ಚಿಂತನೆಗಳಲ್ಲಿ ಮಾನವೀಯತೆಯೇ ಜೀವಾಳ: ಬಂಡೆ

| Published : Apr 16 2024, 01:04 AM IST

ಸಾರಾಂಶ

ವಿಜಯಪುರ: ಅಂಬೇಡ್ಕರ್ ಚಿಂತನೆಗಳಲ್ಲಿ ಮಾನವೀಯತೆಯೇ ಜೀವಾಳ. ನಮ್ಮ ದೇಶದಲ್ಲಿ ಸಾಮರಸ್ಯ ಮೂಡಿಸಿ, ಭೇದ ತೊಲಗಿಸಿ ಸಮಸಮಾಜ ಕಟ್ಟಲು ಅಂಬೇಡ್ಕರ್ ಚಿಂತನೆಗಳು ಹೆಚ್ಚು ಪ್ರಸ್ತುತ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಅನಿಸಿಕೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ಅಂಬೇಡ್ಕರ್ ಚಿಂತನೆಗಳಲ್ಲಿ ಮಾನವೀಯತೆಯೇ ಜೀವಾಳ. ನಮ್ಮ ದೇಶದಲ್ಲಿ ಸಾಮರಸ್ಯ ಮೂಡಿಸಿ, ಭೇದ ತೊಲಗಿಸಿ ಸಮಸಮಾಜ ಕಟ್ಟಲು ಅಂಬೇಡ್ಕರ್ ಚಿಂತನೆಗಳು ಹೆಚ್ಚು ಪ್ರಸ್ತುತ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಅನಿಸಿಕೆ ವ್ಯಕ್ತಪಡಿಸಿದರು.ನಗರದ ಹನುಮಾನ ದೇವಸ್ಥಾನದಲ್ಲಿ ವಿಜಯಪುರ ಜಿಲ್ಲಾ ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದಿಂದ ಅಂಬೇಡ್ಕರ್ ಜಯಂತಿ ನಿಮಿತ್ತ ಸಮಾನತಾ ದಿನವನ್ನು ಆಚರಿಸಲಾಯಿತು. ಅಂಬೇಡ್ಕರ್‌ರ ತತ್ವಾದರ್ಶ ಇಂದಿಗೂ ಪ್ರಸ್ತುತ. ಅವರು ಶೋಷಿತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗಗಳಿಗೂ ನೆರವಾದರು. ಇಂದಿನ ಪೀಳಿಗೆ ಇಡೀ ಬದುಕಿನಲ್ಲಿ ಅವರ ಆಶಯ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿ, ಅಸಮಾನತೆ, ಅಸ್ಪೃಶ್ಯತೆ ತೊಡೆದು ಹಾಕುವಲ್ಲಿ ಅಂಬೇಡ್ಕರ್‌ ಕೊಡುಗೆ ಅಪಾರವಾಗಿದೆ ಎಂದರು.

ಸಾಹಿತಿ ಎ.ಎಚ್.ಕೊಳಮೇಲಿ ಮಾತನಾಡಿ, ಸ್ವಾತಂತ್ಯ್ರ, ಸಮಾನತೆ ಮತ್ತು ಸೋದರತೆ ತಳಹದಿಯ ಮೇಲೆ ನವ ಭಾರತ ನಿರ್ಮಾಣ ಮಾಡುವಲ್ಲಿ ಅಂಬೇಡ್ಕರ್ ಗಟ್ಟಿ ತಳಪಾಯ ಹಾಕಿದರು ಎಂದು ಸ್ಮರಿಸಿದರು. ಸಂಘದ ಅಧ್ಯಕ್ಷ ಪ್ರಶಾಂತ ಕಿರಣಗಿ, ಸುನೀಲ ಜೈನಾಪುರ, ಎಸ್.ವೈ.ದೊಡಮನಿ, ಗೌಡಪ್ಪ ಬಾಗೇವಾಡಿ, ಸಿದ್ದು ಕಲ್ಲೂರ, ಮೋತಿಲಾಲ ದೊಡಮನಿ, ಮಂಜುನಾಥ ಹೊನಕೇರಿ, ರಾಜು ಹೊನಕೇರಿ, ಜಗದೀಶ ಮನಗೂಳಿ, ರಾಚಪ್ಪ ದೊಡಮನಿ, ಸಂಜಯ ಹೊನಕೇರಿ, ಸುಭಾಸ ಹೊನಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.