ಸಾರಾಂಶ
ಉಪಚುನಾವಣೆ ಟಿಕೆಟ್ ಆಕಾಂಕ್ಷಿಗಳು ಶಿಗ್ಗಾಂವಿ-ಸವಣೂರು ಕ್ಷೇತ್ರದ ಎಲ್ಲ ಬೂತ್‌ಗಳಿಗೂ ಪ್ರವಾಸ ಮಾಡಬೇಕು. ಒಂದು ಬೂತ್‌ನಲ್ಲಿ ಯಾರು ಹೆಚ್ಚು ಸದಸ್ಯರನ್ನು ಮಾಡಿಸುತ್ತಾರೋ ಅವರ ಹೆಸರು ಮುಂಚೂಣಿಯಲ್ಲಿ ಇರಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನದಾಸ ಅಗರವಾಲ್ ಹೇಳಿದರು.
ಶಿಗ್ಗಾಂವಿ:ಉಪಚುನಾವಣೆ ಟಿಕೆಟ್ ಆಕಾಂಕ್ಷಿಗಳು ಶಿಗ್ಗಾಂವಿ-ಸವಣೂರು ಕ್ಷೇತ್ರದ ಎಲ್ಲ ಬೂತ್‌ಗಳಿಗೂ ಪ್ರವಾಸ ಮಾಡಬೇಕು. ಒಂದು ಬೂತ್‌ನಲ್ಲಿ ಯಾರು ಹೆಚ್ಚು ಸದಸ್ಯರನ್ನು ಮಾಡಿಸುತ್ತಾರೋ ಅವರ ಹೆಸರು ಮುಂಚೂಣಿಯಲ್ಲಿ ಇರಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನದಾಸ ಅಗರವಾಲ್ ಹೇಳಿದರು.
ಅವರು ಶಿಗ್ಗಾಂವಿಯಲ್ಲಿ ಶುಕ್ರವಾರ ನಡೆದ ಪಕ್ಷದ ಸಂಘಟನಾ ಸಭೆಯಲ್ಲಿ ಮಾತನಾಡಿದರು.ಪಕ್ಷ, ಪಕ್ಷದ ವರಿಷ್ಠರು ಅಂತಿಮವಾಗಿ ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಾಗಿರುವಂತೆ ಪ್ರಮಾಣವನ್ನು ಪಡೆಯಲಾಗಿದ್ದು, ಪಕ್ಷದ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದ ಪ್ರತಿಯೊಂದು ಬೂತ್‌ಗೆ ತೆರಳಿ ಪ್ರತಿ ಬೂತ್‌ನಿಂದ ಕನಿಷ್ಠ ಎರಡು ನೂರಕ್ಕೂ ಹೆಚ್ಚು ಜನರನ್ನು ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ನೋಂದಣಿ ಮಾಡಿಸುವುದರ ಜೊತೆಗೆ ಬಿಜೆಪಿಯ ಸಾಧನೆ ಕ್ಷೇತ್ರದ ಅಭಿವೃದ್ಧಿಯನ್ನು ತಿಳಿಸುವ ಮೂಲಕ ಉಪಚುನಾವಣೆಗೆ ಸಜ್ಜಾಗಬೇಕು ಎಂದರು.
ಶಿಗ್ಗಾಂವಿ ಕ್ಷೇತ್ರದಿಂದ ಕನಿಷ್ಠ ಒಂದು ಲಕ್ಷಕ್ಕೂ ಹೆಚ್ಚು ಸದಸ್ಯತ್ವವನ್ನು ಹೊಂದುವ ಗುರಿಯನ್ನು ಪಕ್ಷ ನಿಗದಿಗೊಳಿಸಲಾಗಿದ್ದು, ಸ್ಪರ್ಧೆ ಬಯಸುವ ಪ್ರತಿಯೊಬ್ಬ ಆಕಾಂಕ್ಷಿಗಳು ಪಕ್ಷದ ಸದಸ್ಯತ್ವದ ಜೊತೆಗೆ ಜನಮನ ಗೆಲ್ಲುವಲ್ಲಿ ಮುಂದಾಗಬೇಕು. ಅತಿ ಹೆಚ್ಚು ಸಂಘಟನೆಗೆ ಒಳಗಾಗುವವರನ್ನು ಪಕ್ಷ ಪರಿಗಣಿಸಲಾಗುತ್ತದೆ ಎಂದರು.ಪಕ್ಷದ ಮಾಜಿ ಸಚಿವರು ಹಾಗೂ ಕೆಲ ಹಾಲಿ ಶಾಸಕರಿಗೆ ಕ್ಷೇತ್ರದ ಐದು ಜಿಪಂ ಕ್ಷೇತ್ರಗಳ ಹಾಗೂ ಪಟ್ಟಣದ ಪ್ರದೇಶದ ಹೊಣೆಗಾರಿಕೆ ನೀಡಲಾಗಿದೆ. ಇತರ ಶಕ್ತಿ ಕೇಂದ್ರಗಳ ಜವಾಬ್ದಾರಿಯನ್ನು ಪ್ರಮುಖರಿಗೆ ನೀಡಲಾಗಿದೆ. ಆ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ಅವರೇ ವಹಿಸಬೇಕು ಎಂದು ಅಗರವಾಲ ಹೇಳಿದರು.ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಮಾತನಾಡಿ, ಪಕ್ಷವು ಚುನಾವಣೆಗೆ ಕೊಟ್ಟಷ್ಟು ಮಹತ್ವವನ್ನು ಸಂಘಟನೆಗೂ ಕೊಡುತ್ತದೆ. ಎಲ್ಲರೂ ಸದಸ್ಯತ್ವವ ಪಡೆದುಕೊಳ್ಳಬೇಕು, ಪ್ರತಿ ಬೂತ್‌ನಲ್ಲಿ ೫-೫ ಜನರನ್ನು ಸದಸ್ಯತ್ವದಲ್ಲಿ ತೊಡಗಲು ಸೂಚಿಸಬೇಕು. ಪಕ್ಷ ಸಂಘನೆಯಲ್ಲಿ ಶಿಗ್ಗಾಂವಿ ಮುಂದಿದೆ ಎಂಬ ರೀತಿಯಲ್ಲಿ ಸಂಘಟನೆ ಆಗಬೇಕು, ೨೪೧ ಬೂತ್‌ಗಳಲ್ಲಿ ಕನಿಷ್ಠ ೨೦೦ ಬೂತ್‌ಗಳಲ್ಲಿಯಾದರೂ ಪ್ರಧಾನಿಯವರ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಿಸುವಂತೆ ನೋಡಿಕೊಳ್ಳಿ, ಸಂಘಟನೆಯ ಜೊತೆಗೆ ಸ್ವಚ್ಛತೆ ಹಾಗೂ ರಕ್ತದಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಪ್ರತಿಯೊಬ್ಬರೂ ನಾನು ಮೋದಿ ಪರಿವಾರದ ಸದಸ್ಯ ಎಂಬ ರೀತಿಯಲ್ಲಿ ಸದಸ್ಯತ್ವ ಅಭಿಯಾನಗಳಾಗಬೇಕು, ಪ್ರತಿಜ್ಞೆಯನ್ನು ಪಡೆದಿದ್ದು ಎಲ್ಲರಿಗೂ ಟಿಕೆಟ್ ಸಿಗೊಲ್ಲ, ಕಮಲವೇ ನಮ್ಮ ಅಭ್ಯರ್ಥಿ ಎಂದು ಹೇಳಿ ಚುನಾವಣೆ ಮಾಡಬೇಕಿದೆ. ಬೊಮ್ಮಾಯಿಯವರಿಗೆ ರಾಜಕೀಯ ಶಕ್ತಿ ನೀಡಿದ ಕ್ಷೇತ್ರ ಇದು, ಆ ಇತಿಹಾಸ ಅಳಿಸಬಾರದು, ಉಳಿಯಬೇಕು, ಆ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲಿ ಗೆಲ್ಲಿಸಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ ಪೂಜಾರ, ರಾಷ್ಟ್ರಿಯ ಕಾರ್ಯದರ್ಶಿ ರಾಧಾಮೋಹನ್ ಅಗರವಾಲ್, ಅರವಿಂದ ಬೆಲ್ಲದ್ , ಮಹೇಶ ಟೆಂಗಿನಕಾಯಿ, ಶಂಕರ್ ಪಾಟೀಲ ಮುನೇನಕೊಪ್ಪ, ಬಿ.ಸಿ. ಪಾಟೀಲ, ಬಸವರಾಜ ಕೆಲಗಾರ, ಶಿವರಾಜ ಸಜ್ಜನ್, ವಿರೂಪಾಕ್ಷಪ್ಪ ಬಳ್ಳಾರಿ, ಎಂ.ಆರ್. ಪಾಟೀಲ, ಅಮೃತ ದೇಸಾಯಿ, ಶಿಗ್ಗಾಂವಿ ತಾಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ, ಸವಣೂರ ತಾಲೂಕು ಬಿಜೆಪಿ ಅದ್ಯಕ್ಷ ಹನುಮಂತಗೌಡ ಮುದಿಗೌಡ್ರ, ಸೃಷ್ಟಿ ಪಾಟೀಲ, ಸುಭಾಸ್ ಚೌಹಾಣ್ ಇದ್ದರು.ಇದಕ್ಕೂ ಪೂರ್ವದಲ್ಲಿ ಮಾಜಿ ಶಾಸಕ ಪಿ. ರಾಜೀವ ಹಾಗೂ ಮಹೇಶ ಟೇಂಗಿನಕಾಯಿ, ಶ್ರೀಕಾಂತ ದುಂಡಿಗೌಡ್ರ ಸೇರಿದಂತೆ ಹಲವರು ವೀರ ರಾಣಿ ಕಿತ್ತೂರ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.ಪೊಟೋ ಪೈಲ್ ನೇಮ್ ೧೩ಎಸ್ಜಿವಿ೧ಸಂಸದ ಬಸವರಾಜ ಬೊಮ್ಮಾಯಿಯವರ ಶಿಗ್ಗಾಂವಿಯ ಸಭಾ ಭವನದಲ್ಲಿ ಜರುಗಿದ ಕಾರ್ಯಕರ್ತರ ಹಾಗೂ ಆಕಾಂಕ್ಷಿಗಳ ಸಂಘಟನಾ ಸಭೆಯನ್ನು ಬಿಜೆಪಿ ರಾಜ್ಯ ಉಸ್ತುವಾರಿ ಡಾ. ರಾಧಾಮೋಹನದಾಸ ಅಗರವಾಲ ಉದ್ಘಾಟಿಸಿದರು.