ಸಾರಾಂಶ
ಪ್ರತಿಯೊಬ್ಬರ ಜೀವನ ಅತ್ಯಮೂಲ್ಯವಾದ್ದು ಮನೆಗಳಿಗೆ, ಬಣವಿಗಳಿಗೆ, ಅರಣ್ಯಗಳಿಗೆ ಬೆಂಕಿ ಹತ್ತಿ ಜಾನುವಾರುಗಳು ಮನುಷ್ಯರ ಜೀವನ ಹಾನಿಯಾಗದಂತೆ ಇಲಾಖೆಯೊಂದಿಗೆ ಸರ್ವರೂ ಕೈಜೊಡಿಸಬೇಕು
ಯಲಬುರ್ಗಾ: ಬೆಂಕಿ ಅವಘಡಗಳು ಸಂಭವಿಸಿದಾಗ ಪ್ರತಿಯೊಬ್ಬರು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳಿಗೆ ದೂರವಾಣಿ ಕರೆಯನ್ನು ಮಾಡಿ ಮಾಹಿತಿಯನ್ನು ನೀಡಿ ಅವುಗಳನ್ನು ತಡೆಯುವ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಶ್ರೀಮಂಜುನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಶ್ರೀ ಮಂಜುನಾಥ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಅಗ್ನಿ ಶಾಮಕ ಇಲಾಖೆ ಸಹಯೋಗದಲ್ಲಿ ನಡೆದ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಅಗ್ನಿ ಸುರಕ್ಷತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬರ ಜೀವನ ಅತ್ಯಮೂಲ್ಯವಾದ್ದು ಮನೆಗಳಿಗೆ, ಬಣವಿಗಳಿಗೆ, ಅರಣ್ಯಗಳಿಗೆ ಬೆಂಕಿ ಹತ್ತಿ ಜಾನುವಾರುಗಳು ಮನುಷ್ಯರ ಜೀವನ ಹಾನಿಯಾಗದಂತೆ ಇಲಾಖೆಯೊಂದಿಗೆ ಸರ್ವರೂ ಕೈಜೊಡಿಸಬೇಕು ಎಂದರು.ಅಗ್ನಿ ಶಾಮಕದಳ ಪ್ರಭಾರಿ ಅಧಿಕಾರಿ ಜಗದೀಶ ವೈ.ಕೆ ಉಪನ್ಯಾಸ ನೀಡಿ ಮಾತನಾಡಿ ಅಗ್ನಿ ಸುರಕ್ಷತೆ ಹಾಗೂ ಮುಂಜಾಗೃತ ಕ್ರಮಗಳನ್ನು ಕುರಿತು ಅಗ್ನಿ ಶಾಮಕ ೬೭೭ ಇವರು ನೀಡಿದರು. ಮತ್ತು ಬೆಂಕಿ ನಂದಿಸುವ ವಿಧಾನಗಳು, ಲೋಹಗಳು, ಎಲ್‌ಪಿಜಿ, ಎ,ಬಿ,ಸಿ,ಡಿ ಅನಿಲಗಳು ಮತ್ತು ನೀರಿನಲ್ಲಿ ಬಿದ್ದಾಗ ಯಾವ ರೀತಿ ಕಾಪಾಡಿಕೊಳ್ಳುವುದು ಗಾಳಿಯ ಜೊತೆ ವರ್ತಿಸುವ ಮತ್ತು ವರ್ತಿಸದೇ ಇರುವ ಅನಿಲಗಳ ಕುರಿತು ಮಕ್ಕಳಿಗೆ ಮನ ಮುಟ್ಟುವ ಹಾಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಚಾರ್ಯ ಗಂಗಾಧರ ದಫೇದ, ಮುಖ್ಯಶಿಕ್ಷಕ ಎಸ್.ಕೆ.ಪಾಟೀಲ, ಮಂಜುನಾಥ ಅಕ್ಕಸಾಲಿಗರ, ಅಗ್ನಿ ಶಾಮಕ ಸಿಬ್ಬಂದಿಗಳಾದ ಮಂಜುನಾಥ ಬಂಡಿ, ಮಧು ನಾಯಕ್, ಆನಂದ, ಪ್ರಕಾಶ ರಾಠೋಡ ಮತ್ತಿತರರು ಇದ್ದರು.