ಯುವ ಪೀಳಿಗೆ ಇತಿಹಾಸ ಅರಿಯಲಿ

| Published : Nov 05 2024, 12:42 AM IST

ಸಾರಾಂಶ

69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜಾರೋಹಣ

ಕನ್ನಡಪ್ರಭ ವಾರ್ತೆ ಮೈಸೂರು

ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.

ನಗರದ ದಿವಾನ್ಸ್ ರಸ್ತೆಯ ಲೋಕಾಯುಕ್ತ ಕಚೇರಿ ಮುಂಭಾಗ ಮೈಸೂರು ಯುವ ಬಳಗದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಅದು ನಮ್ಮ ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದಲೇ ಭಾಷೆಗೂ ನೆಲದ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಸ್ವಾಭಿಮಾನ ಹಾಗೂ ಸಹಬಾಳ್ವೆಯ ಸಂಕೇತವೇ ರಾಜ್ಯೋತ್ಸವ ಎಂದು ಹೇಳಿದರು.

ನಂತರ ಹಿರಿಯ ಆಟೋ ಚಾಲಕರಾದ ಜಗದೀಶ್, ಬಸವರಾಜ್, ಪುರುಷೋತ್ತಮ್, ಜಗ್ಗಪ್ಪ ಅವರನ್ನು ಸನ್ಮಾನಿಸಿದರು,

ಈ ವೇಳೆ ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಗುರುರಾಜ್ ಶೆಟ್ಟಿ, ನವೀನ್, ಉತ್ತನಹಳ್ಳಿ ಶಿವಣ್ಣ, ರವಿ ಚಂದ್ರ, ಪ್ರಮೋದ್ ಗೌಡ, ಮಂಜುಳಾ, ಶಾಂತಾ, ಮಂಗಳಾ, ತೊಣಚಿಕೊಪ್ಪಲ್ ರಾಜು, ಪವನ್, ಹರೀಶ್ ಗೌಡ, ನಂಜುಂಡಸ್ವಾಮಿ, ಮಂಜುನಾಥ್, ನಿತಿನ್, ಶರವಣ, ಪ್ರಜ್ವಲ್ ರೈನಾ, ಮಹಾನ್ ಶ್ರೇಯಸ್ ಮೊದಲಾದವರು ಇದ್ದರು.