ಸಾರಾಂಶ
ಎರಡು ದಿನಗಳಿಂದ ಹಳೇಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಮನೆ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸರ್ಕಾರದ ಸಾಧನೆಗಳ ತಿಳಿಸಿ ಪ್ರಚಾರ ನಡೆಸಿದರು.
ಗ್ರಾಪಂ ಸದಸ್ಯ ಚಂದ್ರಶೇಖರ್ ನೇತೃತ್ವ । ಮನೆಗಳಿಗೆ ಭೇಟಿ
ಹಳೇಬೀಡು: ಕರ್ನಾಟಕದಲ್ಲಿ ಐದು ಗ್ಯಾರಂಟಿಗಳಿಂದ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಅದೇ ರೀತಿ ಕೇಂದ್ರ ಸರ್ಕಾರದಲ್ಲೂ ಸಹ ಗ್ಯಾರಂಟಿ ಮೂಲಕ ಕಾಂಗ್ರೆಸ್ ಸರ್ಕಾರ ಬರುವುದು ನಿಶ್ಚಿತ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಬಿ.ಚಂದ್ರಶೇಖರ್ ತಿಳಿಸಿದರು.ಎರಡು ದಿನಗಳಿಂದ ಹಳೇಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಮನೆ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದಿಂದ ಜನರಿಗೆ ಅನುಕೂಲವಾದ ವಿಚಾರಗಳನ್ನು ತಿಳಿಸಿ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಬಂದರೆ ಯುವನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆ ನ್ಯಾಯ ಸೇರಿ ಐದು ಗ್ಯಾರಂಟಿ ಕೈ ಹಿಡಿದರೆ ಸರ್ಕಾರ ಮುನ್ನಡೆಯುತ್ತದೆ. ಅದರಂತೆ ಸರ್ಕಾರದಲ್ಲಿ ೧ ಲಕ್ಷ ರು. ವೇತನ ವಿದ್ಯಾವಂತ ಯುವಕರಿಗೆ ಉದ್ಯೋಗ, ಪ್ರತಿ ವರ್ಷ ಬಡ ಕುಟುಂಬಕ್ಕೆ ಒಂದು ಲಕ್ಷ ರು., ಸಾಲಮನ್ನಾ, ದಿನಕ್ಕೆ ೪೦೦ ರು. ಸೇರಿದೆ. ರಾಷ್ಟ್ರೀಯ ವೇತನ, ಜಾತಿ ಗಣತಿಯ ಪ್ರಕಾರ ಬಡವರಿಗೆ ಅನುಕೂಲ ಮಾಡಿಕೊಡುವುದು ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ ಎಂದು ತಿಳಿಸಿದರು.
ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎಂ.ವೀರಣ್ಣ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಮೊದಲು ಉದ್ಯೋಗ ಖಾತ್ರಿ, ಪ್ರತಿ ವಿದ್ಯಾರ್ಥಿಗೆ ಒಂದು ಲಕ್ಷ ರು. ಶಿಷ್ಯವೇತನ, ನೇಮಕಾತಿಯಲ್ಲಿ ೩೪ ಲಕ್ಷ ಹೊಸ ಸರ್ಕಾರಿ ಉದ್ಯೋಗಗಳ ಭರ್ತಿ, ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಮುಕ್ತ ಗೊಳಿಸುವುದು ,ಕೆಲಸಗಾರರಿಗೆ ಸಾಮಾಜಿಕ ಭದ್ರತೆ, ಯುವಕರಿಗೆ ಐದು ಕೋಟಿ ಹೊಸ ಸ್ಮಾರ್ಟ್ ಆಫ್ ನಿಧಿ, ಪ್ರತಿ ಬಡ ಕುಟುಂಬಕ್ಕೆ ಮಹಾಲಕ್ಷ್ಮಿಗೆ ಒಂದು ಲಕ್ಷ ನೀಡಲಾಗುವುದು ಅದೇ ರೀತಿ ಸಾಲಮನ್ನಾ ವಿಮಾ ಪಾವತಿ ಮತ್ತು ಶ್ರಮಕ್ಕೆ ಗೌರವ ಆರೋಗ್ಯ ಹಕ್ಕು, ಸಾಮಾಜಿಕ ಭದ್ರತೆ ಉದ್ಯೋಗ ಭದ್ರತೆ ನೀಡಲಾಗುವುದು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಬಂದರೆ ಬಡವರ ಪಕ್ಷವಾಗಿ ಎಲ್ಲರನ್ನು ಮುನ್ನಡೆಸುತ್ತದೆ ಎಂದು ತಿಳಿಸಿದರು.ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಯತೀಶ್, ಗ್ರಾಪಂ ಸದಸ್ಯ ಲಿಂಗಪ್ಪ, ಮಾಜಿ ಅಧ್ಯಕ್ಷ ಕೃಷ, ಭೈರೇಶ್ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ಹಳೇಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಬರುವ ಎಲ್ಲಾ ಮನೆಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರು.