ಅರಣ್ಯ ಕೃಷಿ ವಿಚಾರ ಸಂಕಿರಣ

| Published : Aug 10 2025, 01:30 AM IST

ಸಾರಾಂಶ

ಚಾಮರಾಜನಗರದ ಕೃಷಿ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ಹೆಗ್ಗವಾಡಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಅರಣ್ಯ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರದ ಕೃಷಿ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ಹೆಗ್ಗವಾಡಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಅರಣ್ಯ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಅರಣ್ಯ ಕೃಷಿಯ ಮಹತ್ವ ಹಾಗೂ ಅರಣ್ಯ ಸಸ್ಯಗಳ ಬಗ್ಗೆ ಮಾಹಿತಿಯನ್ನು ರೈತರಿಗೆ ತಿಳಿಸಲಾಯಿತು. ವಿದ್ಯಾರ್ಥಿಗಳು ಅರಣ್ಯಕೃಷಿಯ ವಿವಿಧ ರೀತಿಯ ಪದ್ಧತಿಗಳನ್ನು ಮಾದರಿಯ ಮುಖಾಂತರ ತಿಳಿಸಿದರು. ವಿವಿಧ ಅರಣ್ಯ ಸಸ್ಯಗಳ ಬಗ್ಗೆ ವಿಚಾರವನ್ನು ಹಂಚಿಕೊಂಡರು, ಗ್ರಾಮದಸ ಮಕ್ಕಳಿಂದ ಕಿರು ನಾಟಕ ಪ್ರದರ್ಶನ ಮಾಡಿ ಜನರಲ್ಲಿ ಅರಿವು ಮೂಡಿಸಿದರು .

ಡಾ. ಜೆ.ಮಹದೇವ ಅರಣ್ಯ ಕೃಷಿ ವಿಭಾಗದ ಸಹಾಯಕ ಪ್ರಾಧ್ಯಾಪಕರು ಇವರು ರೈತರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಅರಣ್ಯ ಮರಗಳಾದ ತೆಗ, ಸರ್ವೇ, ಹೆಬ್ಬೇವುಗಳನ್ನು ಬದುಗಳಲ್ಲಿ ನೆಡುವುದರಿಂದ ಅದರ ಎಲೆಗಳು ಉದುರಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ, ಬೆಳೆದ ಮರಗನ್ನು ಉಪಕರಣ ತಯಾರಿಸುವಲ್ಲಿ ಉಪಯೋಗಿಸಲಾಗುತ್ತದೆ, ಹಲವು ಹಣ್ಣುಗಳ ಮರಗಳನ್ನು ನೆಡುವುದರಿಂದ ರೈತರಿಗೆ ಉಪಯೋಗವಾಗುತ್ತದೆ. ಸರ್ಕಾರದ ಯೋಜನೆ "ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ " ಬಗ್ಗೆ ಮಾಹಿತಿ ತಿಳಿಸಿಕೊಟ್ಟರು. ನಂತರ ರೈತರಿಗೆ ಅರಣ್ಯ ಮರಗಳ ಆದಾಯದ ಬಗ್ಗೆ ಉದಾಹರಣೆ ಮೂಲಕ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ವಿದ್ಯಾರ್ಥಿಗಳು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.