ಸಾರಾಂಶ
ಚಳ್ಳಕೆರೆ: ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಮಾಹಿತಿ ನೀಡಬೇಕಾಗುತ್ತದಲ್ಲದೆ, ಅವಶ್ಯವಿದ್ದಲ್ಲಿ ಗ್ರಾಮ ಸಭೆಗಳ ಮೂಲಕ ಫಲಾನುಭವಿಗಳ ಆಯ್ಕೆಯನ್ನು ಮಾಡಿ ಸರ್ಕಾರಕ್ಕೆ ಕಳಿಸಿಕೊಡಬೇಕಾಗುತ್ತದೆ. ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಗ್ರಾಮ ಸಭೆಗಳ ಪಾತ್ರ ಮಹತ್ವವುಳ್ಳದ್ದು ಎಂದು ನಗರಂಗೆರೆ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ಡಾ.ಶ್ರೀನಿವಾಸ್‌ಬಾಬು ತಿಳಿಸಿದರು.
ಬುಧವಾರ ಗ್ರಾಮದ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಗೆ ಚಾಲನೆ ನೀಡಿ ಮಾತನಾಡಿದರು.ಕಳೆದ ಹಲವಾರು ವರ್ಷಗಳಿಂದ ಸರ್ಕಾರದ ಸೂಚನೆ ಮೇರೆಗೆ ಗ್ರಾಮ ಸಭೆಗಳನ್ನು ಆಯೋಜಿಸಿ ಫಲಾನುಭವಿಗಳನ್ನು ಗುರುತಿಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.
ಪಿಡಿಒ ಎಂ.ರಾಮಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮರಂಗಸ್ವಾಮಿ, ಉಪಾಧ್ಯಕ್ಷ ಓಬಣ್ಣ, ಸದಸ್ಯರಾದ ಎಂ.ಹಿದಾಯಿತ್‌ವುಲ್ಲಾ, ಅಂಗಡಿರಮೇಶ್, ರ‍್ರಮ್ಮಓಬಯ್ಯ, ಶಿವಲಿಂಗಮ್ಮ, ರಾಜು, ಕಾರ್ಯದರ್ಶಿ ವಿ.ಮಂಜುಳಾ, ತಿಪ್ಪೇಸ್ವಾಮಿ, ನಿರಂಜನ್, ಓಬಣ್ಣ, ಮಂಜುನಾಥ, ನಾಗರಾಜ, ಚೈತನ್ಯ, ರವಿ, ಲೋಹಿತ್ ಮತ್ತಿತರರಿದ್ದರು.