ಮೂಖಹಳ್ಳಿಲೀ ಸಾರ್ವಜನಿಕ ಕುಂದು ಕೊರತೆ ಸಭೆ

| Published : Feb 08 2024, 01:35 AM IST

ಸಾರಾಂಶ

ಶಾಸಕ ಎಚ್.ಎಂ ಗಣೇಶ್‌ ಪ್ರಸಾದ್‌ ಅಧ್ಯಕ್ಷತೆಯಲ್ಲಿ ತಾಲೂಕಿನ ಮೂಖಹಳ್ಳಿ ಗ್ರಾಮದಲ್ಲಿ ಗ್ರಾಪಂ ಮಟ್ಟದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಸಾಗುವಳಿ ಹಾಗೂ ನಿವೇಶನ ಹಕ್ಕುಪತ್ರಗಳ ಸಂಬಂಧ ದೂರುಗಳು ಕೇಳಿ ಬಂದಿವೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಶಾಸಕ ಎಚ್.ಎಂ ಗಣೇಶ್‌ ಪ್ರಸಾದ್‌ ಅಧ್ಯಕ್ಷತೆಯಲ್ಲಿ ತಾಲೂಕಿನ ಮೂಖಹಳ್ಳಿ ಗ್ರಾಮದಲ್ಲಿ ಗ್ರಾಪಂ ಮಟ್ಟದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಸಾಗುವಳಿ ಹಾಗೂ ನಿವೇಶನ ಹಕ್ಕುಪತ್ರಗಳ ಸಂಬಂಧ ದೂರುಗಳು ಕೇಳಿ ಬಂದಿವೆ.ಮೂಖಹಳ್ಳಿ ಗ್ರಾಪಂ ಕಚೇರಿ ಬಳಿ ನಡೆದ ಕುಂದು ಕೊರತೆ ಸಭೆಯಲ್ಲಿ ಗ್ರಾಪಂ ನಿವೇಶನ ಹಕ್ಕುಪತ್ರ ವಿತರಿಸಲು ಆಗಿಲ್ಲ. ಹಲವು ವರ್ಷಗಳು ಕಳೆದರೂ ನಿವೇಶನ ಹಂಚಿಕೆಯಾಗಿಲ್ಲ. ಗ್ರಾಪಂ ಜನಪ್ರತಿಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಗ್ರಾಮದ ಹಲವು ರೈತರು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೂ ಸಾಗುವಳಿ ಪತ್ರ ಸಿಕ್ಕಿಲ್ಲ. ಕೂಡಲೇ ಸಾಗುವಳಿ ಪತ್ರ ಕೊಡಿಸಿ ಎಂದು ರೈತರು ಶಾಸಕರಲ್ಲಿ ಅಲವತ್ತುಕೊಂಡರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ದರಕಾಸ್ತು ಸಮಿತಿ ರಚನೆ ಮಾಡಲಾಗಿದೆ. ಅರ್ಹ ರೈತರಿಗೆ ಸಾಗುವಳಿ ಪತ್ರ ಕೊಡಲು ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.ಈ ಬಾರಿಯ ಬಜೆಟ್‌ ನಂತರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬರಲಿದೆ. ಅನುದಾನ ಬಂದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ವಹಿಸುವೆ ಎಂದರು. ಗ್ರಾಪಂ ಅಧ್ಯಕ್ಷ ಮಹದೇವಪ್ಪ, ಉಪಾಧ್ಯಕ್ಷ ಮಡಹಳ್ಳಿ ಶಿವಮೂರ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಚಾರಿ,ಪ್ರವೀಣ್‌ ಕುಮಾರ್‌,ಬಸವಶೆಟ್ಟಿ,ಸದಸ್ಯರಾದ ರೂಪ, ಲಕ್ಷ್ಮೀ, ಸವಿತ, ಬಸಪ್ಪ, ನರಸಿಂಹ, ಸುನಂದಮ್ಮ, ಚೈತ್ರ, ರಾಚಯ್ಯ, ಗ್ರಾಪಂ ಪಿಡಿಒ ತೊರವಳ್ಳಿ ಎಸ್‌ ಪ್ರಸಾದ್‌, ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್. ಪರಶಿವಮೂರ್ತಿ ಸೇರಿದಂತೆ ತಾಲೂಕು ಮಟ್ಟದಲ್ಲಿ ಹಲವು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.