ಸಾರಾಂಶ
ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ವಿಷಯ ಕುರಿತಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ಹಿನ್ನೆಲೆ ಬೆಳೆಗಾರರ ಹಿತಾಸಕ್ತಿ ಕಾಯುವಂತೆ ಒತ್ತಾಯಿಸಿ, ಅಡಕೆ ಸಹಕಾರ ಸಂಘಗಳ ಮಹಾಮಂಡಲ ನೇತೃತ್ವದ ನಿಯೋಗ ದೆಹಲಿಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಗವಾಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕನ್ನಡಪ್ರಭ ವಾರ್ತೆ, ಸಾಗರ
ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ವಿಷಯ ಕುರಿತಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ಹಿನ್ನೆಲೆ ಬೆಳೆಗಾರರ ಹಿತಾಸಕ್ತಿ ಕಾಯುವಂತೆ ಒತ್ತಾಯಿಸಿ, ಅಡಕೆ ಸಹಕಾರ ಸಂಘಗಳ ಮಹಾಮಂಡಲ ನೇತೃತ್ವದ ನಿಯೋಗ ದೆಹಲಿಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಗವಾಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.ನಿಯೋಗದ ನೇತೃತ್ವ ವಹಿಸಿದ್ದ ಅಧ್ಯಕ್ಷ ಎಚ್.ಎಸ್. ಮಂಜಪ್ಪ ಬೆಳೆಗಾರರ ಬದುಕಿಗೆ ನ್ಯಾಯಾಲಯದಲ್ಲಿರುವ ಪ್ರಕರಣದಿಂದ ಆಗುವ ಅಪಾಯದ ಕುರಿತು ಸಚಿವರಿಗೆ ಮನವರಿಕೆ ಮಾಡಿದರು. ಅಡಕೆಯ ಸಂಸ್ಕರಣದ ಸಂದರ್ಭದಲ್ಲಿ, ಕಳಪೆ ಮಾಲುಗಳನ್ನು ಸಾಂಪ್ರದಾಯಿಕ ಪರಿಷ್ಕೃತ ಅಡಕೆ ಜೊತೆ ಸೇರಿಸುವ ಸಂದರ್ಭದಲ್ಲಿ ರಾಸಾಯನಿಕಗಳನ್ನು, ಆರೋಗ್ಯಕ್ಕೆ ಹಾನಿಕಾರಕ ಅಂಶಗಳನ್ನು ಬೆರೆಸುತ್ತಿದ್ದರೆ, ಅದನ್ನು ತಡೆಯುವ ಕ್ರಮಗಳನ್ನು ಸರ್ಕಾರಗಳು ತೆಗೆದುಕೊಳ್ಳಬೇಕು ಎಂದರು.
ಮೂಲದಲ್ಲಿ ಹಾಗೂ ಪ್ರಾಚೀನ ಕಾಲದಿಂದ ಬಂದಿರುವ ಪದ್ಧತಿಯಲ್ಲಿ ಅಡಕೆ ಪರಿಷ್ಕರಿಸಿದರೆ ಯಾವುದೇ ಅಪಾಯವಿಲ್ಲ ಎಂಬುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರು. ಇದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ, ಮನದಟ್ಟು ಮಾಡಿಕೊಳ್ಳಲು ಅಡಕೆ ಬೆಳೆಯುತ್ತಿರುವ ಮೂಲನೆಲೆಯಲ್ಲಿನ ಅಡಕೆಯನ್ನು ಆಯ್ದು ಪರೀಕ್ಷೆಗೆ ಒಳಪಡಿಸಬಹುದು. ಆದರೆ ಈಗಾಗಲೇ ಅಡಕೆ ಹಾನಿಕರವಲ್ಲ ಎಂಬುದನ್ನು ವೈಜ್ಞಾನಿಕ ಸಂಶೋಧನೆಗಳು ರುಜುವಾತುಪಡಿಸಿರುವುದು ನಮ್ಮ ಮುಂದಿದೆ. ಅದರ ಆಧಾರದಲ್ಲಿ ಕೇಂದ್ರ ಸರ್ಕಾರ ನ್ಯಾಯಾಲಯ ಮುಂದೆ ಸತ್ಯವಾದ, ಅಡಕೆ ಬೆಳೆಗಾರರಿಗೆ ಪೂರಕವಾದ ಅಫಿಡವಿಟ್ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.ಸಚಿವರ ಭರವಸೆ:
ಅಡಕೆ ಕುರಿತು ತಪ್ಪು ಮಾಹಿತಿಗಳು ದಾಖಲಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಶತಶತಮಾನಗಳಿಂದ ಕೃಷಿ ನಡೆಸಿರುವ ಅಡಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುತ್ತೇವೆ. ಸಾಂಪ್ರದಾಯಿಕ ಅಡಕೆಗೆ ಬಂದಿರುವ ಅಪವಾದವನ್ನು ತೊಡೆಯಲು ವೈಜ್ಞಾನಿಕ ಹಾಗೂ ಕಾನೂನಾತ್ಮಕ ಹೆಜ್ಜೆಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.ನಿಯೋಗದಲ್ಲಿ ಅಡಕೆ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ವೈ.ಎಸ್. ಸುಬ್ರಹ್ಮಣ್ಯ ಯಡಗೆರೆ, ಸಾಗರದ ಆಪ್‌ಕೋಸ್ ಅಧ್ಯಕ್ಷ ಬಿ.ಎ. ಇಂದೂಧರ ಗೌಡ, ಮಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ರಾಜೇಶ್ ಕುಮಾರ್ ಖೇರ್, ಶಿರಸಿ ಟಿಎಸ್ಎಸ್ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಭಟ್ ಇದ್ದರು.
- - --೭ಕೆ.ಎಸ್.ಎ.ಜಿ.೩:
ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ವಿಷಯ ಕುರಿತಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ಹಿನ್ನೆಲೆ ಬೆಳೆಗಾರರ ಹಿತಾಸಕ್ತಿ ಕಾಯುವಂತೆ ಒತ್ತಾಯಿಸಿ, ಸಾಗರದ ಅಡಕೆ ಸಹಕಾರ ಸಂಘಗಳ ಮಹಾಮಂಡಲ ನೇತೃತ್ವದ ನಿಯೋಗ ದೆಹಲಿಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಗವಾಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.