ಸಾರಾಂಶ
ನಾಟ್ಯಶಾಸ್ತ್ರ, ನಮ್ಮ ಸಂಸ್ಕೃತಿ ಪರಂಪರೆಯ ಬೇರು. ಸಂಸ್ಕತಿ ರಕ್ಷಣೆಗೆ ಆದಿಶಂಕರರು ದೇಶದಾದ್ಯಂತ ಸಂಚರಿಸಿದರು. ಸಂಗೀತ, ನೃತ್ಯ, ಯಕ್ಷಗಾನ ಕಲೆಯ ಮೂಲಕ ಧರ್ಮದ ರಕ್ಷಣೆಯಾಗುತ್ತಿದೆ. ಸತ್ಯ, ನಂಬಿಕೆಯಡಿ ಇವೆಲ್ಲ ಯಜ್ಞ ಕಾರ್ಯ ಮಾಡಿದಂತೆ ಎಂದು ವಿಶ್ಲೇಷಿಸಿದರು.
ಕನ್ನಡಪ್ರಭ ವಾರ್ತೆ ಸಾಗರ ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಗೆ ಮಹತ್ವದ ಸ್ಥಾನವಿದೆ. ಗುರುವು ಶಿಷ್ಯನ ಕಣ್ಣು ತೆರೆಸುತ್ತಾನೆ ಎಂದು ಅಂತರ ರಾಷ್ಟ್ರೀಯ ಖ್ಯಾತ ನೃತ್ಯ ಕಲಾವಿದೆ ಎಂದು ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಪದ್ಮಾ ಸುಬ್ರಹ್ಮಣ್ಯಂ ಅಭಿಪ್ರಾಯಪಟ್ಟರು.
ಪಟ್ಟಣದ ನಾಟ್ಯತರಂಗ ಟ್ರಸ್ಟ್ ಹಮ್ಮಿಕೊಂಡಿರುವ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಸಂಸ್ಥೆ ನೀಡಿದ `ಸಾಂಸ್ಕೃತಿಕ ಸಾರಥಿ'''''''' ಗೌರವ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಕಲೆಯ ಕಲಿಕೆಗೆ ಗುರುಭಕ್ತಿ ಬೇಕು. ಶಿಷ್ಯನಾದವನು ಗುರುವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.ನಾಟ್ಯಶಾಸ್ತ್ರ, ನಮ್ಮ ಸಂಸ್ಕೃತಿ ಪರಂಪರೆಯ ಬೇರು. ಸಂಸ್ಕತಿ ರಕ್ಷಣೆಗೆ ಆದಿಶಂಕರರು ದೇಶದಾದ್ಯಂತ ಸಂಚರಿಸಿದರು. ಸಂಗೀತ, ನೃತ್ಯ, ಯಕ್ಷಗಾನ ಕಲೆಯ ಮೂಲಕ ಧರ್ಮದ ರಕ್ಷಣೆಯಾಗುತ್ತಿದೆ. ಸತ್ಯ, ನಂಬಿಕೆಯಡಿ ಇವೆಲ್ಲ ಯಜ್ಞ ಕಾರ್ಯ ಮಾಡಿದಂತೆ ಎಂದು ವಿಶ್ಲೇಷಿಸಿದರು.
ನಾಟ್ಯತರಂಗದ ಮುಖ್ಯಸ್ಥ ವಿದ್ವಾನ್ ಜಿ.ಬಿ.ಜನಾರ್ದನ್ ಮಾತನಾಡಿ, ಗುರುಗಳಾದ ಡಾ.ಪದ್ಮಾ ಸುಬ್ರಹ್ಮಣ್ಯಂ ಅವರನ್ನು ಈ ರಂಗಮಂದಿರಕ್ಕೆ ಕರೆಸಬೇಕು ಎನ್ನುವ ನನ್ನ ಬಹಳ ವರ್ಷದ ಆಸೆ ನೆರವೇರಿದೆ. ಜಗದ್ವಿಖ್ಯಾತ ಕಲಾವಿದರು ನಮ್ಮಲ್ಲಿಗೆ ಬಂದರು ಎಂಬ ನೆನಪು ಶಾಶ್ವತವಾಗಿ ಉಳಿಯುತ್ತದೆ. ಅವರಿಂದ ಸಂಸ್ಕಾರ, ಸದಭಿರುಚಿ, ಮಾನವೀಯ ಮೌಲ್ಯಗಳನ್ನು ನಾನು ಕಲಿತಿದ್ದೇನೆ ಎಂದು ಹೇಳಿದರು.ಚೆನ್ನೈ ಕಲಾವಿದೆ ಗಾಯತ್ರಿ ಕಣ್ಣನ್, ಕಲಾ ಪೋಷಕ ಸತೀಶ್ ಶೆಣೈ, ನಾಟ್ಯತರಂಗದ ಪ್ರಮುಖರಾದ ಐ.ವಿ.ಹೆಗಡೆ, ವರದಾಂಬಿಕೆ ಜನಾರ್ದನ್, ಲಲಿತಾಂಬಿಕೆ, ಸಮುದ್ಯತಾ, ಸಮನ್ವಿತಾ, ಶಿಶಿರ, ಸಂತೋಷ್, ಸಮೀರ್ ರಾವ್ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಡಾ.ಪದ್ಮಾ ಸುಬ್ರಹ್ಮಣ್ಯಂ ಅವರು `ಬಾರೋ ಕೃಷ್ಣಯ್ಯ'''''''' ನೃತ್ಯ ರೂಪಕದ ತುಣುವು ಪ್ರದರ್ಶಿಸಿ ಪ್ರೇಕ್ಷಕರ ಮನ ತಣಿಸಿದರು. ಅನಂತರ ಡಾ.ಪದ್ಮಾ ಸುಬ್ರಹ್ಮಣ್ಯಂ ಅವರ ಶಿಷ್ಯೆ ಮಹತಿ ಕಣ್ಣನ್ ಭರತನಾಟ್ಯ ಪ್ರದರ್ಶಿಸಿದರು.- - - -11ಕೆ.ಎಸ್.ಎ.ಜಿ.1:
ಸಾಗರದಲ್ಲಿ ನಾಟ್ಯತರಂಗ ಸಂಸ್ಥೆ ವತಿಯಿಂದ ಡಾ.ಪದ್ಮಾ ಸುಬ್ರಹ್ಮಣ್ಯಂ ಅವರಿಗೆ ಸಾಂಸ್ಕೃತಿಕ ಸಾರಥಿ ಪುರಸ್ಕಾರ ನೀಡಿ ಗೌರವಿಸಲಾಯಿತು.