ವಿದ್ಯಾರ್ಥಿಗಳು ಅಪಘಾತ ನಡೆದ ಸಮಯದಲ್ಲಿ ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿಯದೆ ಗಾಯಾಳುವಿಗೆ ಮೊದಲು ಪ್ರಥಮ ಚಿಕಿತ್ಸೆ ನೆರವನ್ನು ನೀಡಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆಯಬೇಕು ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸಂಜಯ ಸಾವುಕಾರ ಹೇಳಿದರು.
ರಾಣಿಬೆನ್ನೂರು: ವಿದ್ಯಾರ್ಥಿಗಳು ಅಪಘಾತ ನಡೆದ ಸಮಯದಲ್ಲಿ ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿಯದೆ ಗಾಯಾಳುವಿಗೆ ಮೊದಲು ಪ್ರಥಮ ಚಿಕಿತ್ಸೆ ನೆರವನ್ನು ನೀಡಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆಯಬೇಕು ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸಂಜಯ ಸಾವುಕಾರ ಹೇಳಿದರು.
ನಗರದ ರಾತಾಶಿ ಸಂಸ್ಥೆ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸ್ಥಳೀಯ ಜೆಸಿ ಸಂಸ್ಥೆ ಸಹಯೋಗದಲ್ಲಿ ತುರ್ತು ಚಿಕಿತ್ಸೆಯಲ್ಲಿ ಜೀವ ರಕ್ಷಣೆ ಪ್ರಥಮ ಚಿಕಿತ್ಸಾ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಪಂಚಕರ್ಮಗಳ ಮಹತ್ವ ಕುರಿತು ಆಯುರ್ವೇದ ವೈದ್ಯ ಡಾ. ನಾರಾಯಣ ಪವಾರ ತಿಳಿಸಿದರು. ಹೃದಯಘಾತ ಸಮಯದಲ್ಲಿ ಪ್ರಥಮ ಚಿಕಿತ್ಸೆ ಬಗ್ಗೆ ಡೆವಿಡ್ ಗೌಡ್ಲರ್ ಮಾಹಿತಿ ತಿಳಿಸಿದರು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರೊ.ಸೀತಾ.ಕೋಟಿ, ರುದ್ರಪ್ಪ ಬಾಳಿಕಾಯಿ. ಪ್ರಭುಲಿಂಗಪ್ಪ ಹಲಗೇರಿ, ಸುಜಾತ ಕಿರವಾಡಿ, ಪ್ರಾ. ಡಾ.ರಾಮರೆಡ್ಡಿ ರಡ್ಡೇರ, ಡಾ. ಮಾಲತೇಶ ಪೂಜಾರ, ಪ್ರವೀಣ್ ಎನ್.ಎ., ಡಾ. ರಮೇಶ ಎನ್.ಜಿ., ಪ್ರಿಯಾಂಕ ಗುತ್ತಲ, ಸುಧಾ ದೇವರಗುಡ್ಡ ಉಪಸ್ಥಿತರಿದ್ದರು.