ಸಾರಾಂಶ
ತರಬೇತಿಗೆ ಬಂದಿದ್ದ ಸಹ ಶಿಕ್ಷಕಿ ಜೊತೆಗೆ ಪ್ರಭಾರ ಪ್ರಾಚಾರ್ಯರೊಬ್ಬರು ಅನುಚಿತವಾಗಿ ವರ್ತಿಸಿ ಧರ್ಮದೇಟು ತಿಂದಿರುವ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ರಾಯಚೂರು
ತರಬೇತಿಗೆ ಬಂದಿದ್ದ ಸಹ ಶಿಕ್ಷಕಿ ಜೊತೆಗೆ ಪ್ರಭಾರ ಪ್ರಾಚಾರ್ಯರೊಬ್ಬರು ಅನುಚಿತವಾಗಿ ವರ್ತಿಸಿ ಧರ್ಮದೇಟು ತಿಂದಿರುವ ಘಟನೆ ಸೋಮವಾರ ನಡೆದಿದೆ.ನಗರದ ಹೊರವಲಯದ ಯರಮರಸ್ ಸಮೀಪದಲ್ಲಿನ ಆದರ್ಶ ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಮೆಹಬೂಬ್ ಅಲಿ ಶಿಕ್ಷಕಿ ಮೊಬೈಲ್‌ಗೆ ಕೆಟ್ಟದಾದ ಸಂದೇಶ ಕಳುಹಿಸುತ್ತಿದ್ದನು. ಇದರಿಂದ ರೋಸಿಹೋದ ಶಿಕ್ಷಕಿ ತಮ್ಮವರಿಗೆ ಮಾಹಿತಿ ತಿಳಿಸಿದ್ದರು. ಶಾಲೆಗೆ ಬಂದ ಶಿಕ್ಷಕಿ ಬಂಧುಗಳು, ಜನರು ಪ್ರಾಚಾರ್ಯನಿಗೆ ಮೈಮೇಲಿದ್ದ ಬಟ್ಟೆ ಹರಿದು ಚೆನ್ನಾಗಿ ಥಳಿಸಿದ್ದಾರೆ. ಇಷ್ಟೇ ಅಲ್ಲದೇ ತಾನು ಮಾಡಿರುವುದು ತಪ್ಪಾಗಿದ್ದು, ಇನ್ನು ಮುಂದೆ ಈ ರೀತಿಯಾಗಿ ಮಾಡುವುದಿಲ್ಲ ಎನ್ನುವ ಮುಚ್ಚಳಿಕೆ ಬರೆಯಿಸಿಕೊಂಡಿದ್ದು, ಇದೇ ವೇಳೆ ಶಿಕ್ಷಕಿ ಕಾಲಿಗೆ ಬೀದ್ದು ಕ್ಷಮೇ ಕೇಳುವಂತೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಾಗಿಲ್ಲ.