ಇಂದಿನಿಂದ ವಾಸವಿ ದೇವಿ ದೇವಸ್ಥಾನದಲ್ಲಿ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭ

| Published : Aug 27 2024, 01:31 AM IST

ಸಾರಾಂಶ

ಶ್ರೀ ವಾಸವಿ ಸೇವಾ ಸಂಘದಿಂದ ನಗರದ ಡಿಸಿಎಂ ಟೌನ್‌ಶಿಪ್‌ನಲ್ಲಿರುವ ವಾಸವಿ ದೇವಿ ದೇವಸ್ಥಾನದಲ್ಲಿ ಶ್ರೀಮತಿ ಪ್ರೇಮಾ ರಾಜನಹಳ್ಳಿ ಶ್ರೀ ರಮಾನಂದ್ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭ ಆ.27, 28, 29ರಂದು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಶ್ರೀ ವಾಸವಿ ಸೇವಾ ಸಂಘದಿಂದ ನಗರದ ಡಿಸಿಎಂ ಟೌನ್‌ಶಿಪ್‌ನಲ್ಲಿರುವ ವಾಸವಿ ದೇವಿ ದೇವಸ್ಥಾನದಲ್ಲಿ ಶ್ರೀಮತಿ ಪ್ರೇಮಾ ರಾಜನಹಳ್ಳಿ ಶ್ರೀ ರಮಾನಂದ್ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭ ಆ.27, 28, 29ರಂದು ಹಮ್ಮಿಕೊಳ್ಳಲಾಗಿದೆ. ಆ.27ರಂದು ವಾಸವಿ ದೇವಿ ಸಹಿತ ಎಲ್ಲ ದೇವರುಗಳಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಹೋಮ-ಹವನ ನಡೆಯಲಿದೆ. ಆ.28ರಂದು ಗೋಪೂಜೆ, ಗಂಗೆ ಪೂಜೆ, ತುಳಸಿ ದೇವತಾ ಪೂಜೆ, ಲಕ್ಷ್ಮೀ ನರಸಿಂಹ ಹೋಮ, ದುರ್ಗಾ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಲಿದೆ. ಬೆಳಗ್ಗೆ 11.30ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವ ಆರ್ಯವೈಶ್ಯ ಕುಲಗುರು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಡಾ. ಬಿ.ಎಸ್. ನಾಗಪ್ರಕಾಶ್ ವಹಿಸಲಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ರಾಜನಹಳ್ಳಿ ರಮಾನಂದ ಕಾರ್ಯಕ್ರಮ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ವಿಪ ಸದಸ್ಯ ಡಿ.ಎಸ್.ಅರುಣ್, ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಅಧ್ಯಕ್ಷ ಚನ್ನಗಿರಿ ವಿರೂಪಾಕ್ಷಪ್ಪ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ವಿಪ ಸದಸ್ಯ ಟಿ.ಎ. ಶರವಣ, ಡಾ. ಜೆ.ವಿ. ನಂದನಕುಮಾರ, ಕೆ.ಎಲ್. ರವೀಂದ್ರನಾಥ ಶ್ರೇಷ್ಠಿ, ಎಚ್.ಆರ್. ಕಾಶಿವಿಶ್ವನಾಥ ಶ್ರೇಷ್ಠಿ, ಎಲ್.ಜೆ. ರಾಧಾಕೃಷ್ಣ ಶ್ರೇಷ್ಠಿ, ಸಂಘದ ಅಧ್ಯಕ್ಷ ಕೆ.ಎಸ್. ರುದ್ರಶ್ರೇಷ್ಠಿ ಭಾಗವಹಿಸುವರು. ಸಂಜೆ 5.30 ರಿಂದ ಶ್ರೀ ಕಲಾಂಜಲಿ ಕಲಾ ಟ್ರಸ್ಟ್ ಬಳ್ಳಾರಿ ಅವರಿಂದ ಶ್ರೀನಿವಾಸ ಕಲ್ಯಾಣ ನಾಟಕ ಪ್ರದರ್ಶನಗೊಳ್ಳಲಿದೆ.

ಆ. 29 ರಂದು ಬೆಳಗ್ಗೆ 11.30ಕ್ಕೆ ಸಮಾರೋಪ ಸಮಾರಂಭ ರಾಮಕೃಷ್ಣ ಮಿಷನ್‌ನ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಕೆ.ಎಸ್. ರುದ್ರಶ್ರೇಷ್ಠಿ ಅಧ್ಯಕ್ಷತೆ ವಹಿಸಲಿದ್ದು, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ನಿರ್ದೇಶಕ ಆರ್.ಗಿರೀಶ್ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಘದ ಮಾಜಿ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಶ್ರೇಷ್ಠಿ, ವೈ.ಅನಂತ ಶ್ರೇಷ್ಠಿ, ಬಿ.ಎಚ್. ಕೃಷ್ಣಮೂರ್ತಿ ಶ್ರೇಷ್ಠಿ, ಎಸ್.ನಾಗರಾಜ ಶ್ರೇಷ್ಠಿ, ಯುಟಿಐ ಮಂಜುನಾಥ, ಎಚ್.ವಿ.ರಮೇಶ, ಡಿ.ವಿ.ಸುಧೀಂದ್ರ ಗುಪ್ತ, ಎಸ್.ಆರ್. ಮಂಜುನಾಥ, ಡಿ.ವಿ.ನಾಗರಾಜ ಗುಪ್ತ, ಎಸ್.ಟಿ.ಲಕ್ಷ್ಮಣ, ಬಿ.ಎಚ್.ಭಾಸ್ಕರ ಶ್ರೇಷ್ಠಿ, ಮೀನಾಕ್ಷಮ್ಮ, ಶ್ರೀಧರ ಶ್ರೇಷ್ಠಿ ಮತ್ತಿತರರು ಭಾಗವಹಿಸುವರು.